ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಕಾಡಾನೆ ಉಪಟಳ ಹೆಚ್ಚುತ್ತಿರುವ ಬೆನ್ನಲ್ಲೇ ಬಾಳೆಹೊನ್ನೂರು-ಕಳಸ ನಡುವಿನ ತನೂಡಿ ಸಮೀಪ ಆನೆ ಶಿಬಿರ ಸ್ಥಾಪಿಸಿಲು ಸರ್ಕಾರಕ್ಕೆ ಅರಣ್ಯ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಿದೆ. ಬಂಡೀಪುರ, ಶಿವಮೊಗ್ಗದ ಸಕ್ರೆಬೈಲು, ಕೊಡಗಿನ ದುಬಾರೆಯಲ್ಲಿ ಆನೆ ಶಿಬಿರಗಳಿವೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಆನೆಗಳು ಮತ್ತು ಮಾನವ ನಡುವಿನ ಸಂಘರ್ಷ ಹೆಚ್ಚುತ್ತಿದ್ದು, ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗೆ ಸಾಕಾನೆಗಳ ನೆರವು ಬೇಕಿದ್ದರೆ ರಾಜ್ಯ ಮಟ್ಟದ ಅಧಿಕಾರಿಗಳ ಮೂಲಕ ಆನೆ ಶಿಬಿರಗಳನ್ನು ಸಂಪರ್ಕಿಸಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಜಿಲ್ಲೆಯಲ್ಲೇ ಆನೆ ಬಿಡಾರ ತೆರೆಯಲು ಸರ್ಕಾರ ಚಿಂತಿಸಿದೆ.
ಇದನ್ನೂ ಓದಿ; ಮನೆ ಮಾಲೀಕರ ಗಮನಕ್ಕೆ; ಮನೆ ಬಾಡಿಗೆಗೆ ಸರ್ಕಾರದ ಹೊಸ ನಿಯಮ; ಏನಿದೆ ಹೊಸ ರೂಲ್ಸ್, ಇಲ್ಲಿದೆ ಡಿಟೈಲ್ಸ್

ಆನೆ ಬಿಡಾರಕ್ಕೆ ಸ್ಥಳ ಗುರುತಿಸುವಂತೆ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಚಿಕ್ಕಮಗಳೂರು ಅರಣ್ಯ ವೃತ್ತದ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಅದರಂತೆ ತಜ್ಞರ ತಂಡ ರಚಿಸಲಾಗಿತ್ತು. ಆ ತಂಡ ಎಂಟು ಸ್ಥಳಗಳನ್ನು ಗುರುತು ಮಾಡಿತ್ತು. ಅವುಗಳಲ್ಲಿ ಪ್ರಮುಖ ಮೂರು ಸ್ಥಳಗಳನ್ನು ತಂಡ ಶಿಫಾರಸು ಮಾಡಿತ್ತು. ಬಾಳೆಹೊನ್ನೂರು, ಮುತ್ತೋಡಿ ಅರಣ್ಯದಲ್ಲಿ ಎರಡು ಕಡೆ ಆನೆ ಶಿಬಿರಕ್ಕೆ ಸೂಕ್ತವಾದ ಜಾಗ ಇದೆ ಎಂದು ಗುರುತಿಸಿತ್ತು. ರಾಜ್ಯ ಮಟ್ಟದ ಅಧಿಕಾರಿಗಳು ಮತ್ತು ತಜ್ಞರ ತಂಡವು ಸೆಪ್ಟೆಂಬರ್ ನಲ್ಲಿ ಮೂರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಬಾಳೆಹೊನ್ನೂರು ಸಮೀಪದ ಹಲಸೂರು ಅರಣ್ಯ ವಿಭಾಗದ ತನೂಡಿ ಬಳಿಯ ಜಾಗ ಸೂಕ್ತವಾಗಿದೆ ಎಂದು ನಿರ್ಧರಿಸಿದೆ.
ಇದನ್ನೂ ಓದಿ; BPL ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್; ಈ ತರಬೇತಿಗೆ ಅರ್ಜಿ ಆಹ್ವಾನ
ಮೊದಲಿಗೆ ಮುತ್ತೋಡಿಯಲ್ಲಿ ಆನೆ ಬಿಡಾರ ಮಾಡುವ ಉದ್ದೇಶ ಹೊಂದಲಾಗಿತ್ತು. ಇದಕ್ಕೆ ಪರಿಸರ ಆಸಕ್ತರು ವಿರೋಧ ವ್ಯಕ್ತಪಡಿಸಿದ್ದರು. ಜೊತೆಗೆ ಆಲ್ದೂರು ಮತ್ತು ಮೂಡಿಗೆರೆ ವ್ಯಾಪ್ತಿಯಲ್ಲಿ ಹೆಚ್ಚು ಆನೆ ಸಂಘರ್ಷ ಇರುವ ಪ್ರದೇಶಕ್ಕೆ ಆನೆ ಶಿಬಿರ ಸ್ಥಳಕ್ಕೂ ಎಷ್ಟು ಕಿ.ಮೀ. ಅಂತರದಲ್ಲಿದೆ ಹಾಗೂ ರಸ್ತೆಗಳು ಯಾವ ರೀತಿಯದ್ದಾಗಿವೆ. ಹಳ್ಳಿಗಳ ಸಂಖ್ಯೆ, ಹಾದುಹೋಗಿರುವ ವಿದ್ಯುತ್ ಲೈನ್ ಹಾಗೂ ಆ ಪ್ರದೇಶದಲ್ಲಿನ ಸೆಲ್ಯುಲರ್ ನೆಟ್ವರ್ಕ್ ಬಗ್ಗೆ ಭದ್ರಾ ಹುಲಿ ಸಂರಕ್ಷಿತ ಕ್ಷೇತ್ರ ನಿರ್ದೇಶಕರು ಸಲ್ಲಿಸಿರುವ ವರದಿ ಪ್ರಕಾರ ಮುತ್ತೋಡಿ ಭಾಗದಲ್ಲಿ ವಾಹನ ಓಡಾಟಕ್ಕೆ ಎದುರಾಗಬಹುದಾದ ಸಮಸ್ಯೆ ಹಾಗೂ ಇನ್ನಿತರ ಮಿತಿಗಳನ್ನು ಪರಿಗಣಿಸಿ ಮುತ್ತೋಡಿಯನ್ನು ಪ್ರಸ್ತಾವನೆಯಿಂದ ಕೈಬಿಡಲಾಗಿದೆ.
ಇದನ್ನೂ ಓದಿ; ಯಜಮಾನಿಯರಿಗೆ ಭರ್ಜರಿ ಗುಡ್ ನ್ಯೂಸ್; 2 ತಿಂಗಳ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ!; ಸೆಪ್ಟೆಂಬರ್ ತಿಂಗಳ ಹಣದ ಕುರಿತು ಬಿಗ್ ಅಪ್ಡೇಟ್
ಜಿಲ್ಲೆಯಲ್ಲಿ 2008 ರಿಂದ ಇಲ್ಲಿಯ ವರೆಗೆ ಆನೆ ದಾಳಿಗೆ ಹಲವು ಜನ ಬಲಿಯಾಗಿದ್ದಾರೆ. ಬಹುತೇಕ ಕಾಡಿನಲ್ಲಿ ಸಂಚರಿಸುವ ವೇಳೆ ಅಥವಾ ಜಮೀನು, ತೋಟಗಳಲ್ಲಿ ಕೆಲಸ ಮಾಡುವ ವೇಳೆ ಆನೆ ದಾಳಿ ಪರಿಣಾಮ ಸಾವುಗಳು ಸಂಭವಿಸಿವೆ.
ಆನೆ ಮತ್ತು ಮಾನವ ಸಂಘರ್ಷ ತಡೆಯುವುದು ಮುಖ್ಯ ಉದ್ದೇಶವಾದರೂ ಪ್ರವಾಸೋದ್ಯಮಕ್ಕೂ ಅನುಕೂಲ ಆಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಭದ್ರಾ ನದಿ ಪಕ್ಕದಲ್ಲಿ ಈ ಶಿಬಿರ ತಲೆ ಎತ್ತಲಿದೆ. ಪಕ್ಕದಲ್ಲೆ ಅರಣ್ಯ ಇರುವುದರಿಂದ ಆನೆಗಳ ಅಹಾರಕ್ಕೆ ತೊಂದರೆ ಇಲ್ಲ. ಈ ಭಾಗದಲ್ಲೊಂದು ಪ್ರವಾಸ ತಾಣವೂ ಸೃಷ್ಟಿಯಾಗಲಿದೆ. ಚಿಕ್ಕಮಗಳೂರು ಜಿಲ್ಲೆಗೆ ಬರುವ ಪ್ರವಾಸಿಗರಿಗೆ ಅನುಕೂಲ ಆಗಲಿದೆ. ಆದ್ದರಿಂದ ಎರಡು ಉದ್ದೇಶಗಳೂ ಈಡೇರಲಿವೆ ಎಂದು ಹೇಳಿದರು.
ಇದನ್ನೂ ಓದಿ; ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಉದ್ಯೋಗ; ಪಿಯುಸಿ ಪಾಸ್ ಆದವರು ಈಗಲೇ ಅರ್ಜಿ ಸಲ್ಲಿಸಿ












