ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಮಾದಕ ವಸ್ತುವಿನ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ನಶೆ ಮುಕ್ತ ಕರ್ನಾಟಕ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಪಡೆಯಿರಿ

ಮಾದಕ ಬೆಳಯನ್ನು ಬೆಳೆಯುತ್ತಿರುವ ಬೆಳೆಗಾರರು, ಅದರ ಮಾರಾಟಗಾರರು, ಬಳಸುತ್ತಿರುವ ಗ್ರಾಹಕರು, ಸಿಂಥೆಟಿಕ್ ಡ್ರಗ್ಸ್ ಗಳನ್ನು ತಯಾರಿಸುತ್ತಿರುವ ಲ್ಯಾಬ್ ಗಳು, ಅದರ ಸಂಗ್ರಹಣೆ ಮಾಡುತ್ತಿರುವ ಸಂಗ್ರಹಗಾರರು, ಸಾಗಾಣಿಕೆ ಮಾಡುತ್ತಿರುವ ಸಾರಿಗೆ ವ್ಯವಸ್ಥೆ ಇತ್ಯಾದಿಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದಲ್ಲಿ ಅದನ್ನು ಜಿಲ್ಲಾ ಪೊಲೀಸರೊಂದಿಗೆ ಹಂಚಿಕೊಳ್ಳುವ ಸಂಬoಧ ಕರ್ನಾಟಕ ಪೊಲೀಸರ ನೂತನ ಉಪಕ್ರಮವಾಗಿ ನಶೆ ಮುಕ್ತ ಕರ್ನಾಟಕ (Drug Free Karnataka) ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.

ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡಲು ಮೂರು ದಿನ ಮಾತ್ರ ಬಾಕಿ
ಇಸು ಸಾರ್ವಜನಿಕರಿಗೆ ಮೊಬೈಲ್ ಆ್ಯಪ್ Google Play Store ನಲ್ಲಿ ಲಭ್ಯವಿರುತ್ತದೆ. ಈ ಆ್ಯಪ್ ಅನ್ನು ಸಾರ್ವಜನಿಕರು ತಮ್ಮ ತಮ್ಮ ಮೊಬೈಲ್‌ನಲ್ಲಿ ಅಳವಡಿಸಿಕೊಂಡು ಮಾದಕ ವಸ್ತುವಿನ ಕುರಿತಾಗಿ ಇಂಗ್ಲೀಷ್ ಮತ್ತು ಕನ್ನಡದಲ್ಲಿ ವರದಿ ಮಾಡಬಹುದಾಗಿರುತ್ತದೆ. ಸಾರ್ವಜನಿಕರು ನೀಡುವ ಮಾಹಿತಿಗಳನ್ನು ಇಲಾಖೆಯಿಂದ ಗೌಪ್ಯವಾಗಿರಿಸಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದೆ.
ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ













