ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಪ್ರತಿ ವರ್ಷ ನಡೆಯುವ ಲಕ್ಷ ದೀಪೋತ್ಸವವು ನ.15 ರಂದು (ನಾಳೆ) ನಡೆಯಲಿದೆ.
ಇದನ್ನೂ ಓದಿ; ಈ ಎಲ್ಲಾ ಜಿಲ್ಲೆಗಳಲ್ಲಿ ಬಿಪಿಎಲ್ ಕಾರ್ಡ್ ವಿತರಣೆ; ನಿಮ್ಮ ರೇಷನ್ ಕಾರ್ಡ್ ಅನ್ನು ಇಲ್ಲಿ ಪಡೆಯಿರಿ

ಲಕ್ಷ ದೀಪೋತ್ಸವದ ಅಂಗವಾಗಿ ರಾಜಬೀದಿಯಲ್ಲಿ ತಳಿರು, ತೋರಣ, ರಂಗೋಲಿ ಚಿತ್ತಾರವನ್ನು ಹಾಕಲಾಗುತ್ತದೆ. ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೊದಲ ದೀಪವನ್ನು ಜಗದ್ಗುರುಗಳಾದ ಶ್ರೀಭಾರತೀ ತೀರ್ಥ ಸ್ವಾಮೀಜಿ ಅವರು ದೀಪ ಬೆಳಗುವುದರ ಮೂಲಕ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ನಂತರ ಭಕ್ತಾದಿಗಳು ರಾಜಬೀದಿ ಹಾಗೂ ಶ್ರೀಮಠದ ಆವರಣದಲ್ಲಿ ಇರುವ ಸಹಸ್ರಾರು ದೀಪವನ್ನು ಬೆಳಗಲಿದ್ದಾರೆ.
ಇದನ್ನೂ ಓದಿ; ರಾಜ್ಯದ ಎಲ್ಲಾ ರೈತರಿಗೆ ಮುಖ್ಯ ಮಾಹಿತಿ; ಈ ಕೆಲಸ ಮಾಡಲು ಮೂರು ದಿನ ಮಾತ್ರ ಬಾಕಿ
ಶ್ರೀಮಠದ ಆವರಣದಲ್ಲಿರುವ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಅಂಗವಾಗಿ ಬೆಂಗಳೂರಿನ ವಿದುಷಿ ದೀಪ್ತಿ ಹೆಗಡೆ ಮತ್ತು ತಂಡದವರಿಂದ ಭರತನಾಟ್ಯ ಕಾರ್ಯಕ್ರಮ ಹಾಗೂ ಶ್ರೀ ವೆಂಕಟೇಶ್ವರ ಯಕ್ಷಗಾನ ಕಲಾ ಸಂಘ (ರಿ) ಹೊನ್ನವಳ್ಳಿ, ಮತ್ತು ಅತಿಥಿ ಕಲಾವಿದರಿಂದ ಪೌರಾಣಿಕ ಯಕ್ಷಗಾನ ವೈಭವ ನಡೆಯಲಿದೆ.
ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ












