ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಮಾಜಿ ಪ್ರಧಾನಿ ಡಾ. ಜಗಜೀವನ್ ರಾಂ ಅವರು ಕೃಷಿ ಸಚಿವರಾಗಿದ್ದಾಗ ಕೈಗೊಂಡ ಹಸಿರು ಕ್ರಾಂತಿಯಿಂದಾಗಿ ದೇಶವು ಇಂದಿಗೂ ಆಹಾರ ಉತ್ಪಾದನೆಯಲ್ಲಿ ಸುಭೀಕ್ಷವಾಗಿದೆ ಎಂದು ಕುಂದೂರು ಗ್ರಾಮ ಪಂಚಾಯಿತಿ ಪಿಡಿಓ ವಾಸುದೇವ್ ಹೇಳಿದರು.
ಇದನ್ನೂ ಓದಿ: ಹೊರಗುತ್ತಿಗೆ ನೇಮಕಾತಿಯಲ್ಲೂ ಮೀಸಲಾತಿ: ರಾಜ್ಯ ಸರ್ಕಾರದಿಂದ ಗೆಜೆಟ್ ಅಧಿಸೂಚನೆ ಪ್ರಕಟ

ಪಟ್ಟಣದ ತಾಲ್ಲೂಕು ಪಂಚಾಯಿತಿಯ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಡಾ. ಬಾಬು ಜಗಜೀವನ್ ರಾಂ ಜನ್ಮ ದಿನಾಚರಣೆಯಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡಿದ ಅವರು, ಡಾ. ಬಾಬು ಜಗಜೀವನ್ ರಾಂ ಸಮಾಜದಲ್ಲಿ ಜಾತಿ ವ್ಯವಸ್ಥೆಯು ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು ಎಂದು ಕನಸು ಕಂಡಿದ್ದರು.
ಪ್ರಾಥಮಿಕ ಶಿಕ್ಷಣದ ವೇಳೆಯಲ್ಲಿಯೇ ನಿಮ್ಮ ವರ್ಗಗಳಿಗಾಗಿ ಶಾಲೆಯಲ್ಲಿ ಇಡುತ್ತಿದ್ದ ನೀರಿನ ಮಡಿಕೆಗಳನ್ನು ಹೊಡೆಯುವ ಮೂಲಕ ಅಸ್ಪೃಷ್ಯತೆ ನಿವಾರಣೆಗೆ ನಾಂದಿಯಾಡಿದ್ದರು. ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಸೇರ್ಪಡೆ ಮಾಡಿದ್ದರು. ಸ್ವಾತಂತ್ರ್ಯ ಭಾರತದಲ್ಲಿ ರಕ್ಷಣಾ ಸಚಿವರಾಗಿ, ಕೃಷಿಮಂತ್ರಿಯಾಗಿ ಐತಿಹಾಸಿಕ ಸಾಧನೆ ಮಾಡಿದ್ದು ದೇಶಕ್ಕೆ ಎಂದೂ ಮರೆಯಲಾಗದ ಕೊಡುಗೆಯಾಗಿದೆ ಎಂದರು.
ಇದನ್ನೂ ಓದಿ: 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ರೂಲ್ಸ್ ಕಡ್ಡಾಯ: ಕಲಿಕಾ ಸಾಮರ್ಥ್ಯ ವೃದ್ಧಿಗೆ ಮಹತ್ವದ ಕ್ರಮ
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊಸ್ಕೆರೆ ರಮೇಶ್ ಮಾತನಾಡಿ, ಮಹಾನಿಯರ ಜನ್ಮ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ ಅವರು ಹಾಕಿಕೊಟ್ಟ ಆದರ್ಶ ಮಾರ್ಗವನ್ನು ಅನುಸರಿಸಬೇಕು. ಬಡತನದಲ್ಲಿ ಜನಿಸಿದರೂ ಉಪಪ್ರಧಾನಿಯವರೆಗೂ ವಿವಿಧ ಹುದ್ದೆಗಳನ್ನು ನಿಭಾಯಿಸಿ ಮಾದರಿ ಕಾರ್ಯಗಳನ್ನು ಮಾಡಿರುವ ಡಾ. ಬಾಬು ಜಗಜೀವನ್ ರಾಂ ನಮ್ಮೆಲ್ಲರಿಗೂ ಆಡಳಿತಕ್ಕೆ ಪ್ರೇರಣೆಯಾಗಬೇಕು ಎಂದರು.
ತಹಶೀಲ್ದಾರ್ ರಾಜಶೇಖರಮೂರ್ತಿ ಮಾತನಾಡಿ, ಬಾಬು ಜಗಜೀವನ್ ರಾಂ ಬಡತನದಲ್ಲಿ ಜನಿಸಿದರೂ, ಶಿಕ್ಷಣದ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಿದರು ಎಂದರು.
ಇದನ್ನೂ ಓದಿ: ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ; ಅರ್ಜಿ ಸಲ್ಲಿಸುವ ಲಿಂಕ್ ಇಲ್ಲಿದೆ
ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣಾಕಾರರಾಗಿ ಕೆ. ವಾಸುದೇವ್ ಮಾತನಾಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದಯಾವತಿ, ಬೆಳೆಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣಬಾಳೂರು, ದೌರ್ಜನ್ಯ ತಡೆ ಸಮಿತಿ ಸದಸ್ಯ ಅಣ್ಣೇಗೌಡ, ಛಲವಾದಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಬೆಟ್ಟಗೆರೆ, ಪಿ.ಕೆ. ಮಂಜುನಾಥ್, ಕಮಲಾಕ್ಷಮ್ಮ, ಲೋಕವಳ್ಳಿ ರಮೇಶ್, ಬೆಟ್ಟಗೆರೆ ಶಂಕರ್, ಸೀತಮ್ಮ, ಸಮಾಜ ಕಲ್ಯಾಣ ಇಲಾಖೆ ವಿಸ್ತರಣಾಧಿಕಾರಿ ಸೋಮಶೇಖರ್, ಲಕ್ಷ್ಮಣಗೌಡ, ಶಾಂತಕುಮಾರ್ ಇದ್ದರು. (ವರದಿ- ತನು ಕೊಟ್ಟಿಗೆಹಾರ)
ಇದನ್ನೂ ಓದಿ: SSLC-PUC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಕೇಂದ್ರ ಸರ್ಕಾರದಿಂದ ಪಡೆಯಬಹುದು ಈ ಯೋಜನೆ ಲಾಭ












