ಎನ್.ಆರ್ ಪುರ: 8 ದಿನಗಳ ಅಂತರದಲ್ಲಿ 2 ಕರುಗಳಿಗೆ ಜನ್ಮ ನೀಡಿದ ಎಮ್ಮೆ

ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ಒಂದು ಕರುವಿಗೆ ಜನ್ಮ ನೀಡಿದ ಎಮ್ಮೆ 8 ದಿನಗಳ ಅಂತರದಲ್ಲಿ ಮತ್ತೊಂದು ಕರುವಿಗೆ ಜನ್ಮ ನೀಡಿರುವ ವಿಚಿತ್ರವೆನಿಸುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಶಂಕರಪುರ ಸಮೀಪದ ಮಡುಬ ರಸ್ತೆಯಲ್ಲಿ ಸಿಗುವ ಹಳಿಯೂರಿನ ಸುಧಾಕರ ಗೌಡ ಎಂಬವರ ಮನೆಯಲ್ಲಿ ನಡೆದಿದೆ. ವಾರದ ಹಿಂದೆ ಗಂಡು ಕರು ಹಾಕಿತ್ತು. ವಿಚಿತ್ರವೆಂದರೆ, ಮಂಗಳವಾರ ಬೆಳಿಗ್ಗೆ ಮತ್ತೊಂದು ಗಂಡು ಕರು ಹಾಕಿದೆ.

 

ಇದನ್ನೂ ಓದಿ; 6 ಸಂಸ್ಥೆಗಳ 5000 ಕ್ಕೂ ಅಧಿಕ ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ; ಯಾವುದೆಲ್ಲಾ ಸಂಸ್ಥೆಗಳಲ್ಲಿ ಹುದ್ದೆ

ಈ ಘಟನೆಗೆ ಅಚ್ಚರಿ ವ್ಯಕ್ತಪಡಿಸಿದ ಸುಧಾಕರ್, ನಾನು ಹಲವು ವರ್ಷಗಳಿಂದ ಹಸು ಸಾಕುತ್ತಿದ್ದೇನೆ. ಸಾಮಾನ್ಯವಾಗಿ ಹಸು ಎರಡು ಕರು ಹಾಕುವುದಾದರೆ ಒಂದೇ ದಿನದಲ್ಲೇ ಹಾಕುತ್ತದೆ. ಆದರೆ ಈ ಎಮ್ಮೆ ಒಂದು ಕರು ಹಾಕಿ ಎಂಟು ದಿನಗಳ ನಂತರ ಮತ್ತೊಂದು ಕರು ಹಾಕಿರುವುದು ವಿಶೇಷ. ಎಮ್ಮೆಗೆ ಕೃತಕ ಗರ್ಭಧಾರಣೆ ಮಾಡಿಸಿಲ್ಲ. ಈ ಸಂಗತಿಯನ್ನು ಈಗಾಗಲೇ ಪಶು ಇಲಾಖೆಯ ಗಮನಕ್ಕೆ ತಂದಿದ್ದೇನೆ. ಅವರು ಬಂದು ನೋಡುವುದಾಗಿ ಹೇಳಿದ್ದಾರೆ ಎಂದರು.

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಗುಡ್ ನ್ಯೂಸ್; ಈ ಯೋಜನೆಯಡಿ 12,000 ನೆರವು

ಮೂಡಿಗೆರೆ: ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ಮಲಗಿದ ಭೂಪ

 

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕಂಠಪೂರ್ತಿ ಕುಡಿದು ರಸ್ತೆಯ ಮದ್ಯೆ ವ್ಯಕ್ತಿಯೋರ್ವ ಮಲಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಾಪುರಕ್ಕೆ ಹೋಗುವ ರಸ್ತೆ ಹಳಸೆ ಗ್ರಾಮದ ತಿರುವಿನಲ್ಲಿ ನಡೆದಿದೆ.

ಇದನ್ನೂ ಓದಿ; ರೈತರು ಅತಿ ಕಡಿಮೆ ಬೆಲೆಗೆ ಮಣ್ಣು ಪರೀಕ್ಷೆ ಹೇಗೆ ಮಾಡಿಸಬಹುದು?; ಮಣ್ಣನ್ನು ಹೇಗೆ ತೆಗೆಯಬೇಕು? ಎಷ್ಟು ಶುಲ್ಕ? ಸಂಪೂರ್ಣ ವಿವರವನ್ನು ಓದಿ

 

ರಸ್ತೆಯಲ್ಲಿ ವ್ಯಕ್ತಿ ಮಲಗಿರುವುದನ್ನು ನೋಡಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದು, ವಾಹನ ಚಾಲಕರು ಎಷ್ಟೇ ಹಾರ್ನ್ ಮಾಡಿದರೂ ಮೇಲಕ್ಕೆ ಏಳದ ಭೂಪ, ಕೆಲ ಕಾಲ ಆತಂಕ ಸೃಷ್ಟಿಸಿದ್ದಾನೆ. ವಾಹನದ ಹಾರ್ನ್ ಗೆ ಕೊನೆಗೂ ಎದ್ದ ವ್ಯಕ್ತಿ, ವಾಹನ ಹೋದ ನಂತರ ಮತ್ತೆ ಅದೇ ಜಾಗದಲ್ಲಿ ಮಲಗಿದ್ದಾನೆ. ವ್ಯಕ್ತಿಯ ಹುಚ್ಚಾಟದಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.