ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪತ್ನಿಯನ್ನು ಗೃಹಬಂಧನದಲ್ಲಿಟ್ಟು ಪತಿ ಕಿರುಕುಳ ನೀಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಗೃಹಬಂಧನದಲ್ಲಿದ್ದ ಮಹಿಳೆಯನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ದೋಣಿಕಣ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ; ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೇಷನ್ ಕಾರ್ಡ್ ವಿತರಣೆ!; ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಮಾಹಿತಿ

ವೃತ್ತಿಯಲ್ಲಿ ವೈದ್ಯನಾಗಿರುವ ರವಿಕುಮಾರ್ ಪತ್ನಿಯನ್ನು, ಹುಚ್ಚಿ ಎಂದು ಬಿಂಬಿಸಿ ಮಾನಸಿಕ ಜೊತೆಯಲ್ಲಿ ದೈಹಿಕ ಕಿರುಕುಳವನ್ನು ನೀಡಿ ಮನಸೋ ಇಚ್ಛೆ ಥಳಿಸಿದ್ದಾರೆ. ಮೊಬೈಲ್ ಕೂಡ ಬಳಸದಂತೆ, ಸಂಬಂಧಿಕರ ನೆರೆಹೊರೆಯವರ ಜೊತೆ ಬೆರೆಯದಂತೆ, ಸಾರ್ವಜನಿಕರ ಸಂಪರ್ಕವೂ ಸಿಗದಂತೆ ಮನೆಯಲ್ಲಿಯೇ ಕೂಡಿಹಾಕಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಲ್ಲದೆ ಮಗನಿಗೂ ಕೂಡ ತಾಯಿಯ ಮೇಲೆ ಜಿಗುಪ್ಸೆ ಬರುವಂತೆ ಮಾಡಿ ತಾಯಿಯಿಂದ ಮಗನನ್ನು ದೂರ ಇರುವಂತೆ ಮಾಡಿರೋ ಆರೋಪ ಕೂಡ ಕೇಳಿ ಬಂದಿದೆ.
ಇದನ್ನೂ ಓದಿ; PM ಸೂರ್ಯ ಘರ್ ಯೋಜನೆಗೆ ಭರ್ಜರಿ ರೆಸ್ಪಾನ್ಸ್; 30,000 ದಿಂದ 78,000 ದವರೆಗೆ ಸಬ್ಸಿಡಿ, ಬ್ಯಾಂಕ್ ಸಾಲ ಕೂಡ ಲಭ್ಯ
ವಿನುತಾ ರಾಣಿಯ ಸಹೋದರ ವಾಗೀಶ್ ಕುಮಾರ್, ಸ್ಥಳೀಯರು ಹಾಗೂ ಪೊಲೀಸರ ಸಹಾಯದಿಂದ ಮನೆಯ ಬಾಗಿಲು ಒಡೆದು ಗೃಹಬಂಧನದಲ್ಲಿದ್ದ ಮಹಿಳೆಯನ್ನು ಹೊರಗೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ಗೃಹ ಬಂಧನದಲಿದ್ದ ಮಹಿಳೆ ಹೊರ ಬರುತ್ತಿದ್ದಂತೆ ಅಕ್ಕ ಪಕ್ಕದ ಮನೆಯ ನಿವಾಸಿಗಳು ಹಲವು ದಿನಗಳ ಬಳಿಕ ಆಕೆಯ ಪರಿಸ್ಥಿತಿಯನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ; ಪಂಚಾಯತಿ ರಾಜ್ ನಿಂದ ಸ್ಕಾಲರ್ ಶಿಪ್; ತಿಂಗಳಿಗೆ ಸಿಗಲಿದೆ 7,000, ಹೀಗೆ ಅರ್ಜಿ ಸಲ್ಲಿಸಿ
ಇನ್ನು ವೈದ್ಯ ರವಿಕುಮಾರ್ ನಾಪತ್ತೆಯಾಗಿದ್ದು, ಕುಟುಂಬ ಹಾಗೂ ಮಹಿಳೆಯ ಹೇಳಿಕೆ ಆಧಾರದ ಮೇಲೆ ದೂರು ದಾಖಲಿಸಿಕೊಂಡು ನಾಪತ್ತೆಯಾಗಿರುವ ಡಾ.ರವಿಕುಮಾರ್ನ ಪತ್ತೆಗಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ.












