ಚಿಕ್ಕಮಗಳೂರು: ವಸತಿ ಶಾಲೆಯ ಶಿಕ್ಷಕಿಯಿಂದ ಮಕ್ಕಳಿಗೆ ಚಿತ್ರಹಿಂಸೆ ಆರೋಪ; ಪೋಷಕರಿಂದ ಆಕ್ರೋಶ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಸತಿ ಶಾಲೆಯ ಶಿಕ್ಷಕಿಯಿಂದ ಮಕ್ಕಳಿಗೆ ಚಿತ್ರಹಿಂಸೆ ನೀಡಿದ ಗಂಭೀರ ಆರೋಪ ನಗರದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕೇಳಿಬಂದಿದೆ.

 

ಇದನ್ನೂ ಓದಿ;  ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ; ಈಗಲೇ ಅರ್ಜಿ ಸಲ್ಲಿಸಿ

ಕಾರಣ ಇಲ್ಲದೆ ಶಿಕ್ಷಕಿ ದೀಪಾ ಎಂಬುವವರು ಮಕ್ಕಳ ಮೇಲೆ ಹಲ್ಲೆ ಮಾಡುತ್ತಿದ್ದರಂತೆ, ಇದರಿಂದ ಗಾಯಗೊಂಡಿರುವ ಮಕ್ಕಳು ಶಾಲೆಯಲ್ಲಿ ಕಣ್ಣೀರು ಹಾಕುತ್ತಿದ್ದು, ಶಿಕ್ಷಕಿ ವಿರುದ್ಧ 40 ಮಕ್ಕಳು ಸೇರಿದಂತೆ ಪೋಷಕರು ಲಿಖಿತ ದೂರು ನೀಡಿದ್ದಾರೆ. ಇತ್ತ ಮೂಲಭೂತ ಸೌಕರ್ಯವಿಲ್ಲದೆ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಒಂದೇ ಕೊಠಡಿಯಲ್ಲಿ 130 ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತಮ್ಮ ಸಾಮಗ್ರಿಗಳ ಜೊತೆ ಚಾಪೆಯ ಮೇಲೆ ಮಲಗುತ್ತಿದ್ದಾರೆ.

ಇದನ್ನೂ ಓದಿ; ಅಂಚೆ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆ!; ಜನರಿಂದ ಭರ್ಜರಿ ರೆಸ್ಪಾನ್ಸ್, ಏನಿದು ಯೋಜನೆ?

ಕಾಫಿ ಗೋಡೋನ್ ನಲ್ಲಿ ವಸತಿ ಶಾಲೆ:
ವಸತಿ ಶಾಲೆ ನಡೆಸಲು ಅಧಿಕಾರಿಗಳು, ಕಾಫಿ ಗೋಡೋನ್ ನನ್ನು ತಿಂಗಳಿಗೆ 1.93 ಲಕ್ಷಕ್ಕೆ ಬಾಡಿಗೆ ಪಡೆದಿದ್ದಾರೆ. ಆದರೆ ಇಲ್ಲಿ ಮೂಲಭೂತ ಸೌಕರ್ಯಗಳು ಇಲ್ಲದೆ ಮಕ್ಕಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ;  ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್;  ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ

ಶಿಕ್ಷಕಿ ಅಮಾನತ್ತಿಗೆ ಮೇಲಾಧಿಕಾರಿಗಳಿಗೆ ದೂರು:
ಇನ್ನು ಗಂಭೀರ ದೂರು ಹಿನ್ನೆಲೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯೋಗೀಶ್ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದು, ಜೊತೆಗೆ ಶಿಕ್ಷಕಿ ಅಮಾನತ್ತಿಗೆ ಮೇಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ; ಅಡಿಕೆ ರೇಟ್ ಏರಿಕೆಯಾಗಿದೆಯಾ? ಅಥವಾ ಇಳಿಕೆನಾ? ಇಲ್ಲಿದೆ ಮಾಹಿತಿ

ತಮ್ಮನ ಸಾವಿನ ಸೇಡಿಗೆ ಅಣ್ಣನ ಬರ್ಬರ ಹತ್ಯೆ: ಇಬ್ಬರು ಆರೋಪಿಗಳು ಅಂದರ್

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದಲ್ಲಿ ಸೊರಬ ತಾಲೂಕಿನ ಉಡಿನೀರು ಗ್ರಾಮದ ರಫಿಕ್ (39) ನನ್ನು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನಾಯತ್ ಮತ್ತು ಕೊಲೆಯಾದ ರಫಿಕ್ ನ ಅಕ್ಕನ ಮಗ ಸಮೀರ್ ಬಂಧಿತ ಆರೋಪಿಗಳು.

ಇದನ್ನೂ ಓದಿ; ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ

ಏನಿದು ಘಟನೆ:
ಒಂದೂವರೆ ವರ್ಷದ ಹಿಂದೆ ಆಸ್ತಿ ಮತ್ತು ವೈಯಕ್ತಿಕ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ರಫಿಕ್ ಮರ್ಡರ್ ಮಾಡಿದ್ದನು. ಈ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ರಫಿಕ್ ಕೆಲವು ತಿಂಗಳ ಹಿಂದೆ ಬೇಲ್ ಮೇಲೆ ಹೊರ ಬಂದಿದ್ದನು. ಆಸ್ತಿ ವಿಚಾರ ಹಾಗೂ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿದ ದ್ವೇಷಕ್ಕೆ ಇನಾಯತ್, ರಫಿಕ್ ಜೀವ ತೆಗೆಯಲು ಪ್ಲ್ಯಾನ್ ಮಾಡಿಕೊಂಡಿದ್ದ. ಈ ಸಂಬಂಧ ಶಿವಮೊಗ್ಗಕ್ಕೆ ಶಾಪಿಂಗ್ ನೆಪದಲ್ಲಿ ಕರೆತಂದಿದ್ದರು. ಊರಿಗೆ ವಾಪಸ್ ಹೋಗುವಾಗ ತಮ್ಮ ಸಲೀಂ ಕೊಲೆ ಪ್ರಕರಣದ ಸೇಡಿಗಾಗಿ ಅಣ್ಣ ರಫಿಕ್ ನನ್ನು ತಮ್ಮ ಇನಾಯತ್ ಮತ್ತು ಅಕ್ಕನ ಮಗ ಸಮೀರ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ;HAL ಕಂಪನಿಯಲ್ಲಿದೆ ಬಂಪರ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ತಂತಿಯಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಕೊನೆಗೆ ಆತನ ಮೇಲೆ ಕಾರ್ ಕೂಡ ಹತ್ತಿಸಿದ್ದಾರೆ. ಆತ ಮೃತಪಟ್ಟಿರುವುದು ಖಚಿತವಾದ ಬಳಿಕ ಇಬ್ಬರು ಕಾರ್ ನಲ್ಲಿ ಎಸ್ಕೇಪ್ ಆಗಿದ್ದರು. ಮಗನ ಸಾವಿನ ಸುದ್ದಿ ತಿಳಿದ ತಂದೆ ಆಸ್ತಿಯಾಗಿ ರಫಿಕ್ ತಮ್ಮ ಇನಾಯತ್ ಮತ್ತು ಮಗಳ ಮಗ ಸಮೀರ್ ಸೇರಿ ದೊಡ್ಡ ಮಗ ರಫಿಕ್ ನನ್ನು ಹತ್ಯೆ ಮಾಡಿದ್ದಾರೆ. ಇವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಮೃತನ ತಂದೆ ಮಹ್ಮದ್ ಗೌಸ್ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ

ಇನಾಯತ್ ಮತ್ತು ರಫಿಕ್ ನ ಅಕ್ಕನ ಮಗ ಸಮೀರ್ ಇಬ್ಬರನ್ನು ಬಂಧಿಸಲಾಗಿದ್ದು, ಇಬ್ಬರ ಮೇಲೂ ಆನಂದಪುರ ಪೊಲೀಸ್ ಠಾಣೆಯಲ್ಲಿ ಮರ್ಡರ್ ಕೇಸ್ ದಾಖಲಾಗಿದೆ. ಇತ್ತ ಕುಟುಂಬದಲ್ಲಿ ಶುರುವಾದ ಆಸ್ತಿ ವಿವಾದ ಇಬ್ಬರನ್ನು ಬಲಿ ಪಡೆದಿದೆ. ಅಣ್ಣನ ಕೊಲೆ ಕೇಸ್ ನಲ್ಲಿ ಈಗ ತಮ್ಮನು ಜೈಲು ಸೇರಿದ್ದಾನೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.