ಚಿಕ್ಕಮಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹೊರಗುತ್ತಿಗೆ ನೌಕರರು, ಅತಿಥಿ ಶಿಕ್ಷಕರರಿಂದ ಜಿಲ್ಲಾಧಿಕಾರಿಗೆ ಮನವಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಬೆಂಗಳೂರು ಜಿಲ್ಲಾ ಸಮಿತಿ ಚಿಕ್ಕಮಗಳೂರು ವತಿಯಿಂದ ನಗರದ ಆಜಾದ್ ಪಾರ್ಕಿನಲ್ಲಿ ಹೊರಗುತ್ತಿಗೆ ನೌಕರರು ಹಾಗೂ ಅತಿಥಿಶಿಕ್ಷಕರು ಪ್ರತಿಭಟನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


ಇದನ್ನೂ ಓದಿ: ರೇಷನ್‌ ಕಾರ್ಡ್‌ ಕುರಿತು ಆಹಾರ ಇಲಾಖೆಯಿಂದ ಬಿಗ್‌ ಅಪ್ಡೇಟ್‌; ಪಡಿತರ ಚೀಟಿ ಹೊಂದಿರುವವರು ಓದಲೇ ಬೇಕಾದ ಸುದ್ದಿ ಇಲ್ಲಿದೆ ನೋಡಿ


ರಾಜ್ಯ ಜಂಟಿಕಾರ್ಯದರ್ಶಿ ಹಾಗೂ ಜಿಲ್ಲಾದ್ಯಕ್ಷ ಶಿವಮೂರ್ತಿ ಮಾತನಾಡಿ, ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಹಾಗೂ ಅತಿಥಿ ಶಿಕ್ಷಕರ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಸಬೇಕು.

ಕನಿಷ್ಠ ವೇತನ 31000, ನೇರವಾಗಿ ಇಲಾಖೆಯಿಂದ ವೇತನ, ಬೀದರ್ ಜಿಲ್ಲಾ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೋದ್ಧೇಶ ಸಹಕಾರ ಸಂಘವನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಥಾಪಿಸುವುದು, ಸಿಬ್ಬಂದಿಗಳ ಸಂಖ್ಯೆ ಕಡಿತ ಆದೇಶವನ್ನು ವಾಪಸ್ ಪಡೆಯುವುದು, ಹತ್ತು ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ನೌಕರರು ಹಾಗೂ ಅತಿಥಿ ಶಿಕ್ಷಕರನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿಯಲ್ಲಿ ತರುವುದು, ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಸಂಘದ ಮುಖಂಡರು, ಹೊರಗುತ್ತಿಗೆ ನೌಕರರ ಸಭೆ ಮಾಡಿ ಬೇಡಿಕೆಗಳನ್ನು ಇಡೇರಿಸುವುದು, ಸಮಾನ ಕೆಲಸಕ್ಕೆ ಸಮಾನ ವೇತನ, ಸೇವಾ ಭದ್ರತೆ, ಅಧಿಕಾರಿಗಳ ಕಿರುಕುಳ ತಪ್ಪಿಸುವುದು, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್‌ ಶಾಲೆಗಳ ಅತಿಥಿ ಶಿಕ್ಷಕರಿಗೆ ಕೇವಲ 8500. ರೂ ವೇತನ ನೀಡುತ್ತಿದ್ದು ಇತರೆ ಶಾಲೆಗಳ ಶಿಕ್ಷಕರಿಗೆ ನೀಡುತ್ತಿರುವಂತೆ 16500 ಇವರಿಗೆ ನೀಡಬೇಕು ಹಾಗೂ ಇನ್ನಿತರ ಬೇಡಿಕೆಗಳನ್ನು ಇಡೇರಿಸುವುದು ಹಾಗೂ ಮಾನ್ಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ಜಿಲ್ಲಾ ಅಧಿಕಾರಿಗಳು, ಕಾರ್ಮಿಕ ಇಲಾಖೆ, ಇಎಸ್ಐ ಮತ್ತು ಇಪಿಎಫ್ ಅಧಿಕಾರಿಗಳು, ಏಜೆನ್ಸಿಯವರೊಂದಿಗೆ ಸಂಘದ ಮುಖಂಡರು ಹಾಗೂ ಹೊರಗುತ್ತಿಗೆ ನೌಕರರೊಂದಿಗೆ ಸಭೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ದಿನಾಂಕ ನಿಗದಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದರು.


ಇದನ್ನೂ ಓದಿ: ರಾಜ್ಯದಲ್ಲಿ ಬಿಯರ್‌ ದರ ಮತ್ತೆ ಹೆಚ್ಚಳ; ಬೆಲೆ ಎಷ್ಟಾಗಿದೆ ನೋಡಿ!


ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೀನಾ ನಾಗರಾಜ್, ನಿಮ್ಮ ನ್ಯಾಯಯುತ ಬೇಡಿಕೆಗಳ ಮನವಿಯನ್ನು ಸರ್ಕಾರಕ್ಕೆ ಕಳಿಸಿ ಕೊಡಲಾಗುವುದು ಹಾಗೂ ಜನವರಿ 26ರ ನಂತರ ಸಭೆ ಮಾಡಲು ದಿನಾಂಕ ನಿಗದಿಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ರಂಗಸ್ವಾಮಿ, ಲೋಕೇಶ್, ಕುಮಾರಸ್ವಾಮಿ, ರೇಖಾ, ವಿಶಾಲ ಬಿ ಎಂ, ಪವಿತ್ರ,ರಮೇಶ್, ಜಿಲ್ಲೆಯ ಎಲ್ಲಾ ತಾಲೂಕುಗಳ ಹಾಸ್ಟೇಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಇದ್ದರು.


ಇದನ್ನೂ ಓದಿ: ಈ ದಿನ ಪಿಎಂ ಕಿಸಾನ್ 19ನೇ ಕಂತಿನ ಹಣ ಖಾತೆಗೆ ಜಮಾ; ಹೀಗೆ ಚೆಕ್‌ ಮಾಡಿ…


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.