ಶೃಂಗೇರಿ: ರಾಹುಲ್ ಗಾಂಧಿ ಜನ್ಮದಿನದ ಅಂಗವಾಗಿ ಶಾಲೆಯ ಮಕ್ಕಳಿಗೆ ಸಂವಿಧಾನ ಪುಸ್ತಕ ವಿತರಣೆ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲ್ಲೂಕಿನ ಯುವ ಕಾಂಗ್ರೆಸ್ ಸಮಿತಿಯೂ ಶಾಲೆಯ ಮಕ್ಕಳಿಗೆ ಸಂವಿಧಾನ ಪುಸ್ತಕ ನೀಡುವ ಮೂಲಕ ರಾಹುಲ್ ಗಾಂಧಿಯವರ ಜನ್ಮದಿನ ಆಚರಿಸಿದರು.


ಇದನ್ನೂ ಓದಿ: ಶಾಲಾ ಶಿಕ್ಷಕರು, ಸಿಬ್ಬಂದಿಗಳಿಗೆ ಸರ್ಕಾರದಿಂದ ಗುಡ್ ನ್ಯೂಸ್; ಸರ್ಕಾರದ ಈ ಆದೇಶ ನೋಡಿ


ಕಾರ್ಯಕ್ರಮದಲ್ಲಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕಲ್ಲೋಳ್ಳಿ, ಭಾರತದ ಸಂಸತ್ತಿನ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್ ಗಾಂಧಿಯವರು ಕೈಯಲ್ಲಿ ಸಂವಿಧಾನ ಪ್ರತಿ ಹಿಡಿದು, ಭಾರತ್‌ ಜೋಡೋ ಘೋಷಣೆ ಕೂಗಿ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಪ್ರತಿಯೊಬ್ಬ ಭಾರತೀಯರು ಸಂವಿದಾನದ ಬಗ್ಗೆ ತಿಳಿದುಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಶಾಲಾ ಮಕ್ಕಳು ಅಭ್ಯಾಸ ಮಾಡಬೇಕು ಎಂಬ ಸಂದೇಶ ಹೇಳಿದ್ದರು. ಹಾಗಾಗಿ ಅವರ ಹುಟ್ಟು ಹಬ್ಬದ ದಿನ ನಮ್ಮ ಯುವ ಕಾಂಗ್ರೆಸ್ ವತಿಯಿಂದ ನ್ಯಾಯ ಮೂರ್ತಿ ನಾಗಮೋಹನ್ ದಾಸ್ ರವರು ಕನ್ನಡದಲ್ಲಿ ಬರೆದಿರುವ ಸಂವಿಧಾನ ಓದು ಪುಸ್ತಕವನ್ನು ಮಕ್ಕಳಿಗೆ ವಿತರಿಸಿದ್ದೇವೆ. ನಮ್ಮ ಎಲ್ಲಾ ಧರ್ಮ ಗ್ರಂಥಗಳಿಗೂ ಮಿಗಿಲಾದ ಗ್ರಂಥ ನಮ್ಮ ದೇಶದ ಸಂವಿಧಾನ ಎಂದರು.


ಇದನ್ನೂ ಓದಿ: 10th ಹಾಗೂ PUC ವಿದ್ಯಾರ್ಥಿಗಳ ಗಮನಕ್ಕೆ; 40,000 ಸ್ಕಾಲರ್‌ ಶಿಪ್‌ ಗೆ ಹೀಗೆ ಅರ್ಜಿ ಸಲ್ಲಿಸಿ


ತಾಲೂಕಿನ ಹೊಳೆಕೊಪ್ಪ ಹಾಗೂ ಇತರೆ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಸಂವಿಧಾನ ಪುಸ್ತಕ ವಿತರಿಸಲಾಯಿತು. ವಿದ್ಯಾರ್ಥಿ ದೆಸೆಯಲ್ಲೇ ಮುಂದಿನ ಜೀವನದ ಕನಸು ಕಾಣುವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ಸಾರುವ ಕಾರ್ಯಕ್ರಮ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಶೃಂಗೇರಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರದೀಪ್ ಕಲ್ಲೋಳ್ಳಿ, ಕಸಬಾ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ಶಿವಮೂರ್ತಿ ಹೊಳೆಕೊಪ್ಪ, ಯುವಕಾಂಗ್ರೆಸ್ ನಾಯಕರುಗಳಾದ ಶುಭಕೃತ್ ಹೆಗ್ಡೆ, ಸುಧೀರ್ ಹೊಸೂರು, ಅರುಣ್ ಗುಣಿತಲೂ, ಪ್ರಜ್ವಲ್ ಶೆಟ್ಟಿ ಹಾಗೂ ಸ್ಥಳೀಯರು ಇದ್ದರು.


ಇದನ್ನೂ ಓದಿ: ಫೋನ್ ಪೇನಲ್ಲಿ ಹಣ ಕಳುಹಿಸುವಾಗ ಅರ್ಧಕ್ಕೆ ನಿಂತರೆ ಏನು ಮಾಡಬೇಕು?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.