ಶೃಂಗೇರಿ; ಶ್ರೀ ಸತ್ಯ ಸಾಯಿ ಲೋಕಸೇವಾ ಸಮೂಹ ಸಂಸ್ಥೆಯಿಂದ ಶಾಲೆಯ ಮಕ್ಕಳಿಗೆ ಸಾಯಿ ಶೂರ್ ಪ್ರೊಟೀನ್ ಯುಕ್ತ ಪುಡಿ ವಿತರಣೆ

ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ) ಮಕ್ಕಳು ಅಪೌಷ್ಟಿಕತೆಯಿಂದ ಹೊರಬರಲು ಎಲ್ಲಾ ಸರಕಾರಿ ಶಾಲೆಯ ಮಕ್ಕಳಿಗೆ ಉಚಿತವಾಗಿ “ಸಾಯಿ ಶೂರ್” ಎಂಬ ಪ್ರೊಟೀನ್ ಯುಕ್ತ ಪುಡಿಯನ್ನು ಶ್ರೀ ಸತ್ಯ ಸಾಯಿ ಲೋಕಸೇವಾ ಸಮೂಹ ಸಂಸ್ಥೆ ಒದಗಿಸುತ್ತಾ ಬಂದಿದೆ ಎಂದು ಜಯಪುರ ದಿವ್ಯನಿಕೇತನಮ್ ಗುರುಕುಲದ ಕಾರ್ಯಾದಕ್ಷರಾದ ಶ್ರೀ ಜಿ.ಎಂ ಅನಂತ ಮೂರ್ತಿಯವರು ತಿಳಿಸಿದರು.

 

ಇದನ್ನೂ ಓದಿ; ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಚೈತ್ರಾ ಕುಂದಾಪುರ; ಏನಿದು ಸ್ಟೋರಿ?

ಶ್ರೀ ಸತ್ಯ ಸಾಯಿ ಲೋಕಸೇವಾ ಸಮೂಹ ಸಂಸ್ಥೆಯ ಮುಖ್ಯಸ್ಥರಾದ ಸದ್ಗುರು ಶ್ರೀ ಮಧಸೂದನ ಸಾಯಿಯವರ 44 ನೇ ಹುಟ್ಟುಹಬ್ಬದ ಪ್ರಯುಕ್ತ ಶೃಂಗೇರಿಯ ಮೆಣಸೆ ಸರ್ಕಾರಿ ಶಾಲೆಯ ಎಲ್ಲಾ ಮಕ್ಕಳಿಗೆ ಪುಡಿಸಾಯಿ ಶೂರ್ ಪ್ರೊಟೀನ್ ಯುಕ್ತ ಪುಡಿ, ಸಿಹಿ ವಿತರಣೆ ಹಾಗೂ ಎಲ್ಲಾ ಸಿಬ್ಬಂದಿಯವರಿಗೆ ಉಚಿತವಾಗಿ ಬಟ್ಟೆಯನ್ನು ವಿತರಿಸುವ ವೇಳೆ ತಿಳಿಸಿದರು.

 

ಇದನ್ನೂ ಓದಿ; 14 ನ್ಯೂಸ್​ ಆ್ಯಂಕರ್​ಗಳನ್ನು ಬಹಿಷ್ಕರಿಸಿದ i.n.d.i.a ಮೈತ್ರಿಕೂಟ; ಯಾರೆಲ್ಲ ಪಟ್ಟಿಯಲ್ಲಿದ್ದಾರೆ?

ಎಳೆಯ ಮಕ್ಕಳಿಗೆ ಪೌಷ್ಠಿಕ ಆಹಾರದ ಅವಶ್ಯಕತೆ ಇದೆ. ಮಕ್ಕಳು ಸಶಕ್ತವಾಗಿರಲು ಹಾಗೂ ಆರೋಗ್ಯವಾಗಿರಲು ಹಾಲಿನೊಂದಿಗೆ ಸಾಯಿ ಶೂರ್ ಬೆರೆಸಿ ಕುಡಿಯಬೇಕು ಈ ನಿಟ್ಟಿನಲ್ಲಿ ಎಲ್ಲಾ ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಸಾಯಿ ಶೂರ್ ಪ್ರೊಟೀನ್ ಯುಕ್ತ ಪುಡಿಯನ್ನು ನೀಡುವ ಅಭಿಯಾನ ಆರಂಬಿಸಿದ ಬಗ್ಗೆ ಗುರುಕುಲದ ನಿಲಯಪಾಲಕರದ ಶ್ರೀ ಹೃಶಾಂಕ್ ತಿಳಿಸಿದರು.

 

ಗ್ರಾಮ ಪಂಚಾಯತಿಯ ಸದಸ್ಯರಾದ ಶ್ರೀಯುತ ತ್ರಿಮೂರ್ತಿಯವರು ಮಾತನಾಡಿ, ಸದರಿ ಶಾಲೆಗೆ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ನವರು ನೀಡಿರುವ ಸಾಯಿಶೂರ್ ಪುಡಿಯಿಂದ ಮಕ್ಕಳು ಪ್ರತಿನಿತ್ಯ ಹಾಲನ್ನು ಕುಡಿಯುತ್ತಿದ್ದು ಇದರಿಂದ ಅವರ ಶಕ್ತಿ ವೃದ್ಧಿಗೆ ಅನುಕೂಲವಾಗಿರುತ್ತದೆ ಎಂದರು.

ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀಯುತ ಸಂತೋಷ್ ಪಾಳ್ಯವರು ಮಾತನಾಡಿ, ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಆರೋಗ್ಯ ಹಾಗೂ ಶಿಕ್ಷಣಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದು ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೂ ಸಹ ಪ್ರಯತ್ನಿಸಿರುವುದು ಅತ್ಯಂತ ಸಂತೋಷಕರ ವಿಷಯವೆಂದರು.

ಸತತ ಮೂರು ವರ್ಷದಿಂದ ಮಕ್ಕಳಿಗೆ ಉಚಿತವಾಗಿ ಪ್ರೊಟೀನ್ ಯುಕ್ತ ಪುಡಿಯನ್ನು ಒದಗಿಸುತ್ತಿರುವ ಸತ್ಯ ಸಾಯಿ ಲೋಕಸೇವಾ ಗುರುಕುಲ ಶಿಕ್ಷಣ, ಆಹಾರ ಹಾಗೂ ಆರೋಗ್ಯ ಸೇವೆಗಳನ್ನು ಉಚಿತವಾಗಿ ಎಲ್ಲರಿಗೂ ನೀಡುತ್ತಾ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಗಂಗಾಧರಪ್ಪ ಹೇಳಿದರು.

 

ಇನ್ನು ಈ ಕಾರ್ಯಕ್ರಮದಲ್ಲಿ ಗುರುಕುಲದ ಅಧ್ಯಕ್ಷರಾದ ಜಯವಂತ್ ಭಟ್, ಜಯಪುರ ಶ್ರಿನಿಕೆತನಮ್ ಹೆಣ್ಣು ಮಕ್ಕಳ ಗುರುಕುಲದ ಅಧ್ಯಕ್ಷರಾದ ಶ್ರೀಮತಿ ಛಾಯಾ ಮೂರ್ತಿ, ಗುರುಕುಲದ ಸಂಯೋಜಕರಾದ ಗುರುಪ್ರಸನ್ನ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂಧ್ಯಾ ಮರಿಯಪ್ಪ ಗೌಡ, ಸುಷ್ಮಾ ಸುರೇಂದ್ರ ಆಚಾರ್, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಉದಯ್ ಕುಮಾರ್, ಪುಷ್ಪ, ಜಯಂತಿ, ಉಮೇಶ್ ಎಚ್. ಜಿ ಹಾಗೂ ಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರು ಹಾಜರಿದ್ದರು

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರವಾಸದಲ್ಲಿರುವಾಗಲೇ ವೈದ್ಯನ ಮೇಲೆ ಚಾಕು ಇರಿತ

ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

 

ವೈದ್ಯ ಗಣೇಶ್ ತೋಟದ ಕಾರ್ಮಿಕರ ಮೇಲೆ, ಪಕ್ಕದ ತೋಟದ ಕಾರ್ಮಿಕರಿಂದ ಹಲ್ಲೆ ನಡೆದಿತ್ತು, ಕೂಡಲೇ ಚಿಕಿತ್ಸೆಗೆಂದು ಸ್ಥಳಕ್ಕೆ ಹೋದ ವೈದ್ಯ ಗಣೇಶ್ ಮೇಲೂ ಕೂಡ ಚಾಕುವಿನಿಂದ ಕೈ ಹಾಗೂ ಹೊಟ್ಟೆ ಭಾಗಕ್ಕೆ ಹಲ್ಲೆ ಮಾಡಲಾಗಿದೆ.

ತೀವ್ರ ಅಸ್ವಸ್ಥರಾಗಿದ್ದ ವೈದ್ಯ ಗಣೇಶ್ ನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇನ್ನು ಸಚಿವ ದಿನೇಶ್ ಗುಂಡೂರಾವ್ ಹಲ್ಲೆಗೊಳಗಾದ ವೈದ್ಯ ಗಣೇಶ್ ಅವರ ಆರೋಗ್ಯವನ್ನು ವಿಚಾರಿಸಿದರು.

ಹಲ್ಲೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.