ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ರಾಜಧಾನಿ ಬೆಂಗಳೂರಿನ ಹೆಸರಾಂತ ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಗೊಂದಲವನ್ನು ಎನ್.ಐ.ಎ ಸ್ಪಷ್ಟಪಡಿಸಿದೆ.
ಇದನ್ನೂ ಓದಿ; ಸಂಗೀತಾ ಶೃಂಗೇರಿ ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?; ಇವರ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ


ಇದನ್ನೂ ಓದಿ; ಸೌಥ್ ಈಸ್ಟ್ ಸೆಂಟ್ರಲ್ ರೈಲ್ವೆಯಲ್ಲಿ ಉದ್ಯೋಗ; 1113 ಹುದ್ದೆಗಳಿಗೆ ಅರ್ಜಿ ಆಹ್ವಾನ
ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಬಿಜೆಪಿ ಕಾರ್ಯಕರ್ತನಾದ ಸಾಯಿ ಪ್ರಸಾದ್ ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದೆ. ಆದರೆ ಕೆಲ ಕಾಂಗ್ರೆಸ್ ನಾಯಕರು, ಕೆಲ ಮಾಧ್ಯಮಗಳು ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಪೋಸ್ಟ್ ಹಾಕಿತ್ತು. ಈ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ; ಮತದಾರರೇ ಗಮನಿಸಿ; ವೋಟರ್ ಲಿಸ್ಟ್ ನಲ್ಲಿ ಹೆಸರು ಸೇರ್ಪಡೆಗೆ ಇನ್ನೂ ಇದೆ ಕಾಲಾವಕಾಶ
ಎನ್.ಐ.ಎ ಅಧಿಕಾರಿಗಳ ಸ್ಪಷ್ಟನೆಯಲ್ಲಿ ಏನಿದೆ?;
ಬೆಂಗಳೂರಿನ ಹೆಸರಾಂತ ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಪ್ರಕರಣದ ಆರೋಪಿಯಲ್ಲ. ಸಾಕ್ಷಿಯಾಗಿ ಪರಿಗಣಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದೆ.
ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಬಡ್ಡಿಯಿಲ್ಲದೆ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ!
ಬಿಜೆಪಿ ಕಾರ್ಯಕರ್ತನ ಮೊಬೈಲ್ ಸೇಲ್ ಹಿನ್ನೆಲೆ ವಿಚಾರಣೆ ನಡೆಸಿದ ಎನ್.ಐ.ಎ:
ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಹಾಗೂ ಮೊಬೈಲ್ ಅಂಗಡಿ ಮಾಲೀಕನನ್ನು ವಿಚಾರಣೆ ನಡೆಸಲಾಗಿದೆ. ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ತನ್ನ ಹಳೆ ಮೊಬೈಲ್ ಅನ್ನು ಮೊಬೈಲ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ. ಇದೇ ಮೊಬೈಲ್ ಅನ್ನು ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮುಝಮ್ಮಿಲ್ ಷರೀಫನಿಗೆ ಮಾರಾಟ ಮಾಡಲಾಗಿತ್ತು. ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಮಾಡಿದ್ದ ಇಬ್ಬರು ಶಂಕಿತರಿಗೆ ಮುಝಮ್ಮಿಲ್ ಷರೀಪ್ ಮೊಬೈಲ್ ಅಂಗಡಿ ಮಾಲೀಕನಿಂದ ಖರೀದಿಸಿದ ಮೊಬೈಲ್ ನಿಂದಲೇ ಸಂಪರ್ಕ ಮಾಡಿದ್ದ.
ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆ; 8ನೇ ಕಂತಿನ ಹಣ ಈ ದಿನ ಬಿಡುಗಡೆ..!
ಹೀಗಾಗಿ ಎನ್ಐಎ ಅಧಿಕಾರಿಗಳು ಮುಝಮ್ಮಿಲ್ ಷರೀಫ್ ವಿಚಾರಣೆ ವೇಳೆ ಮೊಬೈಲ್ ಮಾಹಿತಿ ಕಲೆ ಹಾಕಲಾಗಿತ್ತು. ಮೊಬೈಲ್ ಜಾಡು ಹಿಡಿದು ಅಂಗಡಿಗೆ ತೆರಳಿದ ಅಧಿಕಾರಿಗಳು ಮೊಬೈಲ್ ಅಂಗಡಿ ಮಾಲೀಕನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೊಬೈಲ್ ಅನ್ನು ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ನಿಂದ ಖರೀದಿಸಿದ್ದಾಗಿ ಹೇಳಿದ್ದ. ಹೀಗಾಗಿ ಸಾಯಿ ಪ್ರಸಾದ್ ನ ವಿಚಾರಣೆ ನಡೆಸಿದ್ದಾರೆ. ಸಾಯಿ ಪ್ರಸಾದ್ ಈ ಸ್ಫೋಟ ಪ್ರಕರಣದ ಸಾಕ್ಷಿಯಾಗಿದ್ದಾರೆ ಹೊರತು ಆರೋಪಿಯಲ್ಲ ಎನ್ಐಎ ಸ್ಪಷ್ಟಪಡಿಸಿದೆ.












