ಶೃಂಗೇರಿ; ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಫ್ರೌಢಶಾಲೆಯಲ್ಲಿ ಇಂಜಿನಿಯರ್ಸ್ ಹಾಗೂ ಹಿಂದಿ ದಿನ ಆಚರಣೆ

ಶೃಂಗೇರಿ; (ನ್ಯೂಸ್ ಮಲ್ನಾಡ್ ವರದಿ)  ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಫ್ರೌಢಶಾಲೆಯಲ್ಲಿ ನಿನ್ನೆ (ಶುಕ್ರವಾರ) ಇಂಜಿನಿಯರ್ಸ್ ಹಾಗೂ ಹಿಂದಿ ದಿನವನ್ನು ಆಚರಿಸಲಾಯಿತು.

 

ಇದನ್ನೂ ಓದಿ; ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ಚೈತ್ರಾ ಕುಂದಾಪುರ; ಏನಿದು ಸ್ಟೋರಿ?

ಈ ಕಾರ್ಯಕ್ರಮ ಅತಿಥಿಗಳಾಗಿ ಆಗಮಿಸಿದ ಅಶೋಕ್ ಡಿ.ಜೆ ಹಿಂದಿ ಭಾಷಾ ಶಿಕ್ಷಕರು ಸರಕಾರಿ ಪ್ರೌಢಶಾಲೆ ಕೊಪ್ಪ, ರಾಜ್ಯ ಹಿಂದಿ ಭಾಷಾ ಸಂಪನ್ಮೂಲ ವ್ಯಕ್ತಿಯಾಗಿರುವ ಇವರು ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸುವ ಭಾಷೆಯಾಗಿದೆ ಹಾಗೂ ಇಲ್ಲಿಯವರೆಗೆ ಭಾರತದ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಅಂದರೆ ಜ್ಞಾನಪೀಠ ಪುರಸ್ಕಾರ ಪಡೆದ ಹೆಮ್ಮೆ ಹಿಂದಿಗಿದೆ.

 

ಇದನ್ನೂ ಓದಿ; 14 ನ್ಯೂಸ್​ ಆ್ಯಂಕರ್​ಗಳನ್ನು ಬಹಿಷ್ಕರಿಸಿದ i.n.d.i.a ಮೈತ್ರಿಕೂಟ; ಯಾರೆಲ್ಲ ಪಟ್ಟಿಯಲ್ಲಿದ್ದಾರೆ?

ಜಗತ್ತಿನ 75 ವಿಶ್ವ ವಿದ್ಯಾಲಯಗಳಲ್ಲಿ ಹಿಂದಿ ಭಾಷೆ ಕಲಿಯಲು ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಹಾಗೂ ಹಿಂದಿ ಭಾಷಾಯನ್ನು ಕಲಿಯುವುದು ಬಹಳ ಸುಲಭ ಎಂದು ತಿಳಿಸಿದರು. ಹಾಗೆಯೇ ಡಾ|| ವಿಶ್ವೇಶ್ವರಯ್ಯನವರು ಚಿಂತಕ ಮಹಾನ್ ತತ್ವಜ್ಞಾನಿ, ದೂರದೃಷ್ಟಿಯುಳ್ಳ ವ್ಯಕ್ತಿ ಎಂದು ತಿಳಿಸಿದರು.

 

ಇದನ್ನೂ ಓದಿ; arecanut price: 15 ಸೆಪ್ಟೆಂಬರ್ 2023 ಅಡಿಕೆ ರೇಟ್, ಇಂದಿನ ಅಡಿಕೆ ಧಾರಣೆ ಎಲ್ಲೆಲ್ಲಿ ಎಷ್ಟಿದೆ? ಇಲ್ಲಿದೆ ಮಾಹಿತಿ

ಇನ್ನು ಸಭೆಯ ಅಧ್ಯಕ್ಚತೆಯನ್ನು ವಹಿಸಿದ ಶಾಲಾ ಹಿಂದಿ ಭಾಷಾ ಶಿಕ್ಷಕಿಯಾದ ಶ್ರೀಮತಿ ರತ್ನಾವತಿ ಇವರು ಮಾತನಾಡಿ, ಹಿಂದಿ ಭಾಷೆ ಸುಲಭ, ಸರಳ ಹಾಗೂ ಎಲ್ಲರ ಜನಮಾನಸದ ಭಾಷೆ ವ್ಯವಹರಿಸಲು ಉದ್ಯೋಗ ಸೃಷ್ಠಿಸಿಕೊಳ್ಳಲು ಅನುಕೂಲವಾಗುವ ಬಾಷೆ ಎಮದು ತಿಳಿಸಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ವೃಂದದವರು, ನೌಕರ ಬಳಗದವರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ರಾಜೀವಗಾಂಧಿ ಪರಿಸರ ಮೆಣಸೆ ಇಲ್ಲಿಯ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

 

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರವಾಸದಲ್ಲಿರುವಾಗಲೇ ವೈದ್ಯನ ಮೇಲೆ ಚಾಕು ಇರಿತ

ಚಿಕ್ಕಮಗಳೂರು; (ನ್ಯೂಸ್ ಮಲ್ನಾಡ್ ವರದಿ) ವೈದ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.

ವೈದ್ಯ ಗಣೇಶ್ ತೋಟದ ಕಾರ್ಮಿಕರ ಮೇಲೆ, ಪಕ್ಕದ ತೋಟದ ಕಾರ್ಮಿಕರಿಂದ ಹಲ್ಲೆ ನಡೆದಿತ್ತು, ಕೂಡಲೇ ಚಿಕಿತ್ಸೆಗೆಂದು ಸ್ಥಳಕ್ಕೆ ಹೋದ ವೈದ್ಯ ಗಣೇಶ್ ಮೇಲೂ ಕೂಡ ಚಾಕುವಿನಿಂದ ಕೈ ಹಾಗೂ ಹೊಟ್ಟೆ ಭಾಗಕ್ಕೆ ಹಲ್ಲೆ ಮಾಡಲಾಗಿದೆ.

 

ತೀವ್ರ ಅಸ್ವಸ್ಥರಾಗಿದ್ದ ವೈದ್ಯ ಗಣೇಶ್ ನನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ. ಇನ್ನು ಸಚಿವ ದಿನೇಶ್ ಗುಂಡೂರಾವ್ ಹಲ್ಲೆಗೊಳಗಾದ ವೈದ್ಯ ಗಣೇಶ್ ಅವರ ಆರೋಗ್ಯವನ್ನು ವಿಚಾರಿಸಿದರು.

ಹಲ್ಲೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.