ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಾಲೂಕಿನ ಮರ್ಕಲ್ ಗ್ರಾಮ ಪಂಚಾಯಿತಿಯ ಯಡದಾಳು ಗ್ರಾಮದಲ್ಲಿ ಲೋಕಸಭೆ ಚುನಾವಣೆ ಸೇರಿದಂತೆ ಮುಂಬರುವ ಎಲ್ಲಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಬುಧವಾರ ಪ್ರತಿಭಟನೆ ನಡೆಸಿದ್ದರು.

ಇದನ್ನೂ ಓದಿ; ಮತ್ತೆ ಟ್ರೆಂಡಿಂಗ್ ನಲ್ಲಿ ‘RCB Hawa’ ರ್ಯಾಪ್ ಸಾಂಗ್; CSK ಫ್ಯಾನ್ಸ್ ಗೆ ಪರೋಕ್ಷವಾಗಿ ಕೌಂಟರ್ ಕೊಟ್ಟ ರ್ಯಾಪರ್ ಚೇತನ್

ಈ ಕುರಿತು ಗ್ರಾಮಸ್ಥರಾದ ಸಂತೃಪ್ತ ಅಗಸೋಳ್ಳಿ ಮಾತನಾಡಿ, ಅರಣ್ಯ ವ್ಯವಸ್ಥಾಪನಾಧಿಕಾರಿ ಸ್ಥಳ ಪರಿಶೀಲಿಸದೆ ಯಡದಾಳು ಗ್ರಾಮದ 435.8 ಎಕರೆ ಜಾಗವನ್ನು ಮೀಸಲು ಅರಣ್ಯ ಮಾಡಲು ಹೊರಟಿದ್ದಾರೆ. ಇದುವರೆಗೂ ಗ್ರಾಮದಲ್ಲಿ ಜಂಟಿ ಸರ್ವೆ ನಡೆದಿಲ್ಲ. ನಕ್ಷೆ ತಯಾರಿಸುವ ಮುನ್ನ ಕಾನೂನು ಪ್ರಕ್ರಿಯೆ ಮಾಡಬೇಕಿತ್ತು. ಈ ಪ್ರಕ್ರಿಯೆ ನಡೆಸಿದರೆ ಮಾತ್ರ ಮತದಾನ ಮಾಡುತ್ತೇವೆ ಎಂದರು.
ಇದನ್ನೂ ಓದಿ; ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಉದ್ಯೋಗ; 44 ಹುದ್ದೆಗಳಿಗೆ ಅರ್ಜಿ ಆಹ್ವಾನ
ಚುನಾವಣೆ ಬಹಿಷ್ಕರಿಸಿದ ಹಿನ್ನೆಲೆ ಗ್ರಾಮಸ್ಥರ ಮನವೊಲಿಸಲು ತಹಶೀಲ್ದಾರ್, ವಲಯ ಅರಣ್ಯಾಧಿಕಾರಿ, ಚುನಾವಣಾಧಿಕಾರಿ ಗ್ರಾಮಕ್ಕೆ ಭೇಟಿ ನೀಡಿದಾಗ, ಅರಣ್ಯ ವ್ಯವಸ್ಥಾಪನಾಧಿಕಾರಿ ಮತ್ತು ಉಪ ಅರಣ್ಯ ಸಂರಕ್ಷಾಣಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದಿದ್ದರು. ಈ ಕಾರಣಕ್ಕೆ ನಂದೀಶ್ ಎನ್ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ನ್ಯಾಯ ಒದಗಿಸುವ ಬಗ್ಗೆ ಲಿಖಿತ ಉತ್ತರ ನೀಡಿದ ಕಾರಣ ಗ್ರಾಮಸ್ಥರು ಚುನಾವಣಾ ಬಹಿಷ್ಕಾರವನ್ನು ಹಿಂಪಡೆದರು.
ಇದನ್ನೂ ಓದಿ; ವೋಟರ್ ಲಿಸ್ಟ್ನಲ್ಲಿ ನಿಮ್ಮ ಹೆಸರು ಇದೆಯೇ?; ಚೆಕ್ ಮಾಡಿಕೊಳ್ಳುವ ಸುಲಭ ವಿಧಾನ ಇಲ್ಲಿದೆ..
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಯಡದಾಳು ಮಂಜುನಾಥ್, ವೆಂಕಟೇಶ್ ಅಗಸೋಳ್ಳಿ, ದುಗ್ಗಪ್ಪ, ಪುಡಿಯ ತೋರಣಗದ್ದೆ, ಹರೀಶ್ ನಾಯ್ಕ್, ರಾಮಣ್ಣ ನಾಯ್ಕ್, ಮಂಜುನಾಥ್ ಮೂಡ್ಲು, ಕೇಶವ ಸೋಗೆಮಕ್ಕಿ, ಶ್ರೀನಿವಾಸ್, ನಟೇಶ್ ಕೊರೊಡಿ ಮತ್ತು ೧೫೦ಕ್ಕೂ ಹೆಚ್ಚು ಗ್ರಾಮಸ್ಥರು ಮತ್ತು ಎಸಿಎಫ್ ಜಿ.ಕೆ ಸುದರ್ಶನ್, ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ, ಚುನಾವಣಾಧಿಕಾರಿ ದೀಪಕ್ ಇದ್ದರು.
ರಾಮೇಶ್ವರ ಸ್ಫೋಟ ಪ್ರಕರಣ: ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇಕೆ?
ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ರಾಜಧಾನಿ ಬೆಂಗಳೂರಿನ ಹೆಸರಾಂತ ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಗೊಂದಲವನ್ನು ಎನ್.ಐ.ಎ ಸ್ಪಷ್ಟಪಡಿಸಿದೆ.
ಇದನ್ನೂ ಓದಿ; ಸಂಗೀತಾ ಶೃಂಗೇರಿ ಫಿಟ್ನೆಸ್ ಹಿಂದಿನ ಸೀಕ್ರೆಟ್ ಏನು ಗೊತ್ತಾ?; ಇವರ ಬೋಲ್ಡ್ ಲುಕ್ ಗೆ ಫ್ಯಾನ್ಸ್ ಫಿದಾ
ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಗೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಬಿಜೆಪಿ ಕಾರ್ಯಕರ್ತನಾದ ಸಾಯಿ ಪ್ರಸಾದ್ ನನ್ನು ಎನ್ಐಎ ಅಧಿಕಾರಿಗಳು ವಿಚಾರಣೆ ನಡೆಸಿದೆ. ಆದರೆ ಕೆಲ ಕಾಂಗ್ರೆಸ್ ನಾಯಕರು, ಕೆಲ ಮಾಧ್ಯಮಗಳು ರಾಮೇಶ್ವರಂ ಕೆಫೆ ಸ್ಫೋಟದಲ್ಲಿ ಬಿಜೆಪಿ ಕೈವಾಡ ಇದೆ ಎಂದು ಪೋಸ್ಟ್ ಹಾಕಿತ್ತು. ಈ ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದಂತೆ ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ) ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ; ಮತದಾರರೇ ಗಮನಿಸಿ; ವೋಟರ್ ಲಿಸ್ಟ್ ನಲ್ಲಿ ಹೆಸರು ಸೇರ್ಪಡೆಗೆ ಇನ್ನೂ ಇದೆ ಕಾಲಾವಕಾಶ
ಎನ್.ಐ.ಎ ಅಧಿಕಾರಿಗಳ ಸ್ಪಷ್ಟನೆಯಲ್ಲಿ ಏನಿದೆ?;
ಬೆಂಗಳೂರಿನ ಹೆಸರಾಂತ ರಾಮೇಶ್ವರ ಕೆಫೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಪ್ರಕರಣದ ಆರೋಪಿಯಲ್ಲ. ಸಾಕ್ಷಿಯಾಗಿ ಪರಿಗಣಿಸಲಾಗಿದೆ ಎಂದು ಎನ್ಐಎ ಅಧಿಕಾರಿಗಳು ಸ್ಪಷ್ಟೀಕರಣ ನೀಡಿದೆ.
ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್; ಬಡ್ಡಿಯಿಲ್ಲದೆ ಸಿಗಲಿದೆ 5 ಲಕ್ಷ ರೂ.ವರೆಗೆ ಸಾಲ!
ಬಿಜೆಪಿ ಕಾರ್ಯಕರ್ತನ ಮೊಬೈಲ್ ಸೇಲ್ ಹಿನ್ನೆಲೆ ವಿಚಾರಣೆ ನಡೆಸಿದ ಎನ್.ಐ.ಎ:
ತೀರ್ಥಹಳ್ಳಿಯ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ಹಾಗೂ ಮೊಬೈಲ್ ಅಂಗಡಿ ಮಾಲೀಕನನ್ನು ವಿಚಾರಣೆ ನಡೆಸಲಾಗಿದೆ. ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ತನ್ನ ಹಳೆ ಮೊಬೈಲ್ ಅನ್ನು ಮೊಬೈಲ್ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದ. ಇದೇ ಮೊಬೈಲ್ ಅನ್ನು ಅಂಗಡಿ ಮಾಲೀಕ ಚಿಕ್ಕಮಗಳೂರಿನ ಮುಝಮ್ಮಿಲ್ ಷರೀಫನಿಗೆ ಮಾರಾಟ ಮಾಡಲಾಗಿತ್ತು. ರಾಮೇಶ್ವರ ಕೆಫೆ ಬಾಂಬ್ ಬ್ಲಾಸ್ಟ್ ಮಾಡಿದ್ದ ಇಬ್ಬರು ಶಂಕಿತರಿಗೆ ಮುಝಮ್ಮಿಲ್ ಷರೀಪ್ ಮೊಬೈಲ್ ಅಂಗಡಿ ಮಾಲೀಕನಿಂದ ಖರೀದಿಸಿದ ಮೊಬೈಲ್ ನಿಂದಲೇ ಸಂಪರ್ಕ ಮಾಡಿದ್ದ.
ಇದನ್ನೂ ಓದಿ; ಗೃಹಲಕ್ಷ್ಮಿ ಯೋಜನೆ; 8ನೇ ಕಂತಿನ ಹಣ ಈ ದಿನ ಬಿಡುಗಡೆ..!
ಹೀಗಾಗಿ ಎನ್ಐಎ ಅಧಿಕಾರಿಗಳು ಮುಝಮ್ಮಿಲ್ ಷರೀಫ್ ವಿಚಾರಣೆ ವೇಳೆ ಮೊಬೈಲ್ ಮಾಹಿತಿ ಕಲೆ ಹಾಕಲಾಗಿತ್ತು. ಮೊಬೈಲ್ ಜಾಡು ಹಿಡಿದು ಅಂಗಡಿಗೆ ತೆರಳಿದ ಅಧಿಕಾರಿಗಳು ಮೊಬೈಲ್ ಅಂಗಡಿ ಮಾಲೀಕನ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮೊಬೈಲ್ ಅನ್ನು ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್ ನಿಂದ ಖರೀದಿಸಿದ್ದಾಗಿ ಹೇಳಿದ್ದ. ಹೀಗಾಗಿ ಸಾಯಿ ಪ್ರಸಾದ್ ನ ವಿಚಾರಣೆ ನಡೆಸಿದ್ದಾರೆ. ಸಾಯಿ ಪ್ರಸಾದ್ ಈ ಸ್ಫೋಟ ಪ್ರಕರಣದ ಸಾಕ್ಷಿಯಾಗಿದ್ದಾರೆ ಹೊರತು ಆರೋಪಿಯಲ್ಲ ಎನ್ಐಎ ಸ್ಪಷ್ಟಪಡಿಸಿದೆ.












