ಖಾಂಡ್ಯ: (ನ್ಯೂಸ್ ಮಲ್ನಾಡ್ ವರದಿ) ಅಯೋಧ್ಯಾ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಶಂಕರ ಭಾರತಿ ಗೋಶಾಲೆ, ಶಾರದಾ ಪೀಠ ಸಹಭಾಗಿತ್ವದಲ್ಲಿ ಖಾಂಡ್ಯ ಹೋಬಳಿಯಲ್ಲಿ ಲಾಡು ಪ್ರಸಾದ ವಿತರಣೆ ಮಾಡಲಾಯಿತು.

ಇದನ್ನೂ ಓದಿ; ರೈತರ ಕೃಷಿ ಸಾಲದ ಬಡ್ಡಿ ಮನ್ನಾ; ಯಾವ ರೈತರ, ಯಾವ ಸಾಲದ ಬಡ್ಡಿ ಮನ್ನಾ?; ಯಾವ ದಿನಾಂಕದಿಂದ ಈ ಆದೇಶ ಒಳಪಡುತ್ತದೆ?

ಈ ಕಾರ್ಯಕ್ರಮಕ್ಕೆ ಶ್ರೀಮಠದಿಂದ 10 ಸಾವಿರ ಲಾಡು ಪ್ರಸಾದವನ್ನು ಆಡಳಿತಾಧಿಕಾರಿಗಳಾದ ಗೌರಿ ಶಂಕರ್ ಅವರು ನೀಡಿದ್ದರು. ಹುಣಸೇಹಳ್ಳಿ, ಜೇನುಗದ್ದೆಯಿಂದ ಹಳೇಕಡಬಗೆರೆವರೆಗೂ ಹಾಗೂ ಹುಯಿಗೆರೆ ಬೀದರ್ ಮುಖ್ಯ ದೇವಸ್ಥಾನಗಳಿಗೆ ಪ್ರಸಾದ ವಿತರಣೆಯನ್ನು ಮಾಡಲಾಯಿತು.


ಇನ್ನು ಈ ಪ್ರಸಾದ ವಿತರಣೆಯಲ್ಲಿ ಗೋಶಾಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ, ಗೋಪಾಲ, ಅಶಿತ್, ಪೂರ್ಣೇಶ ಉಜ್ಜನಿ, ಜಯಶೀಲ ಉಜ್ಜಿನಿ, ನಂದೀಶ, ವೆಂಕಟೇಶ, ಶಿವಣ್ಣ ಹಾಗೂ 50 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ಸಿಹಿ ವಿತರಣೆ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ
ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಶಿವಪ್ಪ ನಾಯಕ ವೃತ್ತದಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂಭ್ರಮಾಚರಣೆ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ; ಶೀಘ್ರವೇ ರೈತರಿಗೆ ಬರ ಪರಿಹಾರ ತಲುಪಿಸಲು ಅಧಿಕಾರಿಗಳಿಗೆ ಸೂಚನೆ
ಎಸ್ ಪಿ ಸ್ಪಷ್ಟನೆ ಏನು?:
ಪೊಲೀಸರಿಂದ ಮಹಿಳೆಯ ಹಿನ್ನೆಲೆ, ಪೂರ್ವಾಪರ ಬಗ್ಗೆ ಪರಿಶೀಲನೆ ನಡೆಸಿದಾಗ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿದೆ. ಮಾನಸಿಕ ರೋಗಕ್ಕೆ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಹಿಳೆ ತಂದೆಯಿದ ಪೊಲೀಸರಿಗೆ ದಾಖಲೆಗಳ ಸಲ್ಲಿಕೆ ಮಾಡಲಾಗಿದ್ದು, 2018 ರಿಂದ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಎಸ್ ಪಿ ಮಿಥುನ್ ಕುಮಾರ್ ದೃಢಪಟ್ಟಿದ್ದಾರೆ.
ಇದನ್ನೂ ಓದಿ; ಈ ಯೋಜನೆಯ ಫಲಾನುಭವಿಗಳು 10 ಲಕ್ಷದ ವರೆಗೆ ಪಡೆಯಬಹುದು ವಿಮಾ ಕವರೇಜ್
ಘೋಷಣೆ ಕೂಗಿದ ಮಹಿಳೆ ತಂದೆಯಿಂದಲೂ ಸ್ಪಷ್ಟನೆ:
ನನ್ನ ಮಗಳು ಮೊದಲಿನಿಂದಲೂ ಸ್ವಲ್ಪ ಮಾನಸಿಕ ಅಸ್ವಸ್ಥಳಿದ್ದಾಳೆ. ಈ ಸಂಬಂಧ ಅವಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಕಳೆದ 10 ತಿಂಗಳಿನಿಂದ ಗಂಡನ ಮನೆ ಬಿಟ್ಟು ನನ್ನ ಮನೆಯಲ್ಲಿಯೇ ಇದ್ದಾಳೆ. ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಘಟನೆ ಕೇಳಿ ನನಗೂ ನೋವಾಗಿದೆ. ಅವಳು ಆ ತರಹದ ಹುಡುಗಿ ಅಲ್ಲ. ಅವಳು ಜಾತಿ ಭೇದ ಮಾಡಲ್ಲ. ಎಲ್ಲರನ್ನೂ ಒಂದೇ ತರ ನೋಡುತ್ತಾಳೆ. ಉದ್ದೇಶ ಪೂರಕವಾಗಿ ಅವಳು ಘೋಷಣೆ ಕೂಗಿಲ್ಲ ಎಂದು ಮಹಿಳೆಯ ತಂದೆ ಸಯ್ಯದ್ ಅಬ್ಬಾಸ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ; ಡಿಸಿಸಿ ಬ್ಯಾಂಕ್ ನಲ್ಲಿ ಉದ್ಯೋಗ; 93 ಹುದ್ದೆಗಗಳಿಗೆ ಅರ್ಜಿ ಆಹ್ವಾನ
ಏನಿದು ಪ್ರಕರಣ?
ಐದು ದಶಕಗಳ ಕನಸು ಅಯೋಧ್ಯೆ ರಾಮ ಮಂದಿರ ಇಂದು ಲೋಕಾರ್ಪಣೆಗೊಂಡಿದೆ. ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಅದರಂತೆ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲೂ ಸಿಹಿ ಹಂಚಿ ಸಂಭ್ರಮಿಸಲಾಗುತ್ತಿತ್ತು. ಜೈ ಶ್ರೀರಾಮ್ ಘೋಷಣೆಗಳು ಮೊಳಗುತ್ತಿದ್ದವು. ಈ ವೇಳೆ ಮುಸ್ಲಿಂ ಮಹಿಳೆಯೊಬ್ಬಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಲ್ಲದೆ, ನೀವು ಮೋದಿ ಪರ ಕೆಲಸ ಮಾಡುತ್ತಿದ್ದೀರಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಳು. ಪರಿಣಾಮವಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಹಿಂದೂ ಕಾರ್ಯಕರ್ತರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಲ್ಲದೆ, ಇನ್ನಷ್ಟು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲಾರಂಭಿಸಿದರು. ಬಳಿಕ ಎಚ್ಚೆತ್ತ ಪೊಲೀಸರು, ಮುಸ್ಲಿಂ ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸ್ ಜೀಪ್ ನಲ್ಲಿ ಕರೆದೊಯ್ದಿದ್ದರು.












