ಮೂಡಿಗೆರೆ: ಕಾಂಗ್ರೆಸ್ ನಿಂದ ಹಿಂದೂಗಳ ಮೇಲೆ ದಾಳಿ: ಬಿಜೆಪಿ ವಕ್ತಾರ ನಯನ ತಳವಾರ

ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕನ್ನಡದ ಪೂಜಾರಿ, ದೇಶ ಕಂಡ ಧೀಮಂತ ಚಿಂತಕ ಹಿರೇಮಗಳೂರು ಕಣ್ಣನ್ ಸೇರಿದಂತೆ ಅರ್ಚಕರಿಗೆ ಸರ್ಕಾರ ಕೊಟ್ಟ ಸಂಬಳವನ್ನು ವಾಪಸ್ ನೀಡಿ ಎಂದು ನೋಟಿಸ್ ನೀಡಿರುವುದು ಹಿಂದೂ ಶ್ರದ್ಧಾ ಕೇಂದ್ರ ದೇವಸ್ಥಾನಗಳನ್ನು ಮುಚ್ಚುವ ಕಾಂಗ್ರೆಸ್ ಸರ್ಕಾರದ ಹುನ್ನಾರ ಎಂದು ಬಿಜೆಪಿ ವಕ್ತಾರ ನಯನ ತಳವಾರ ಅರೋಪಿಸಿದ್ದಾರೆ.

 

ಇದನ್ನೂ ಓದಿ; ರೈತರ ಕೃಷಿ ಸಾಲದ ಬಡ್ಡಿ ಮನ್ನಾ; ಯಾವ ರೈತರ, ಯಾವ ಸಾಲದ ಬಡ್ಡಿ ಮನ್ನಾ?; ಯಾವ ದಿನಾಂಕದಿಂದ ಈ ಆದೇಶ ಒಳಪಡುತ್ತದೆ?

ಶ್ರೀರಾಮ ದೇವಸ್ಥಾನ ನಿರ್ಮಾಣ ವಿರೋದಿಸಿ ಪ್ರಾಣ ಪ್ರತಿಷ್ಠಾಪನೆಗೆ ಒಂದು ದಿನದ ರಜೆಯನ್ನು ನೀಡದೆ ಮಕ್ಕಳು, ಪೋಷಕರು ಮತ್ತು ಹಿಂದೂಗಳಿಂದ ಶಾಪ ಹಾಕಿಸಿಕೊಳ್ಳುತ್ತಿರುವ ಸಮಯದಲ್ಲೇ. ಕನ್ನಡದಲ್ಲೇ ಮಂತ್ರ ಉಚ್ಚಾರಗಳನ್ನು ಇಡೀ ಸಮಾಜಕ್ಕೆ ನೀಡಿ. ಈ ಮೂಲಕ ಮದುವೆ, ಪೂಜೆಗಳನ್ನು ಕನ್ನಡ ಮಯಗೋಳಿಸಿ ಶಾಸ್ತ್ರೀಯ ಭಾಷೆಯಾಗಿಸಲು ಸಹಕರಿಸಿದ ಹಿರೇಮಗಳೂರು ಕಣ್ಣನ್ ಇವರಿಗೆ ಕೊದಂಡರಾಮ ದೇವಸ್ಥಾನದಿಂದ ಸರ್ಕಾರಕ್ಕೆ ಆದಾಯ ಬರುತ್ತಿಲ್ಲ ಎಂಬ ಕಾರಣ ನೀಡಿ ಕೊಟ್ಟ ಸಂಬಳವನ್ನ ವಾಪಾಸ್ ನೀಡಲು ನೋಟಿಸ್ ಜಾರಿ ಮಾಡಿರುವುದು ಖಂಡನೀಯ.

ಇದನ್ನೂ ಓದಿ; 6 ಜಿಲ್ಲೆಗಳಲ್ಲಿ ಸರ್ಕಾರಿ ಉದ್ಯೋಗ; ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಹುದ್ದೆಗಳಿಗೆ ಅಧಿಸೂಚನೆ; ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಸ್ವೀಕಾರ

ರಾಜ್ಯದ ಹಲವು ದೇವಸ್ಥಾನಗಳನ್ನು ಮುಜರಾಯಿ ವ್ಯಾಪ್ತಿಗೆ ಸೇರಿಸಿಕೊಂಡು. ಒಬ್ಬ ಸಚಿವರನ್ನು ಇಟ್ಟುಕೊಂಡು ಸಾವಿರಾರು ಕೋಟಿ ಹಣವನ್ನು ಹಲವು ದೇವಸ್ಥಾನಗಳಲ್ಲಿ ಭಕ್ತರಿಂದ ಸ್ವೀಕರಿಸಿ ಆ ಹಣವನ್ನು ಅಭಿವೃದ್ಧಿ ಹೆಸರಲ್ಲಿ ಬೇರೆ ಧರ್ಮದ ಉದ್ದಾರಕ್ಕೆ ಬಳಸಿಕೊಂಡು ಅದನ್ನು ಕೊಳ್ಳೆ ಹೊಡೆಯುತ್ತಿದ್ದು, ಈಗಾಗಲೇ ಸುಬ್ರಮಣ್ಯ. ಕಟೀಲು. ಕೊಲ್ಲೂರು ಮುಂತಾದ ದೇವಸ್ಥಾನಗಳಿಂದ ಬರುತ್ತಿರುವ ದೊಡ್ಡ ಮಟ್ಟದ ಆದಾಯವನ್ನು ಇವರು ವಾಪಸ್ ಅದೇ ದೇವಸ್ಥಾನಕ್ಕೆ ಮತ್ತು ಅರ್ಚಕರ ಸಂಬಳಕ್ಕೆ ನೀಡುತ್ತಾರೆಯೇ? ಒಂದು ಇಲಾಖೆ ನಡೆಯಬೇಕೆಂದರೆ ಲಾಭ ಇರುವ ಕಡೆಯಿಂದ ನಷ್ಟವನ್ನು ಬರಿಸಬೇಕು ಎಂಬ ನಿಯಮವನ್ನು ಅರಿಯದಷ್ಟು ಮೂಡರಾಗಿದ್ದು. ಈಗಾಗಲೇ ಪೂಜೆ ಮಾಡಲು ಅರ್ಚಕರು ಸಿಗದಷ್ಷು ವ್ಯವಸ್ಥೆ ಸೃಷ್ಠಿಯಾಗಿದ್ದು. ಬದುಕಲು ಪರದಾಡುತ್ತಿರುವ ಬಡ ದೇವಸ್ಥಾನಗಳ ಅರ್ಚಕರಿಗೆ ಕಾಂಗ್ರೆಸ್ ನೇತೃತ್ವದ ಸರ್ಕಾರ ನೋಟಿಸ್ ನೀಡುತ್ತಿರುವುದು ಶ್ರದ್ಧೆಯ ಹಿಂದೂ ಧರ್ಮದ ದೇವಾಲಯಗಳನ್ನು ಮುಚ್ಚುವ ಹುನ್ನಾರವಾಗಿದೆ.

 

ಇದನ್ನೂ ಓದಿ; ಶೀಘ್ರವೇ ರೈತರಿಗೆ ಬರ ಪರಿಹಾರ ತಲುಪಿಸಲು ಅಧಿಕಾರಿಗಳಿಗೆ ಸೂಚನೆ

ಏನು ಅದಾಯ ಬರದ ಮದ್ರಸಾ, ಮಸೀದಿ, ಚರ್ಚ್ ಗಳಿಗೆ ನೀಡುತ್ತಿರುವ ಅನುದಾನ ವಾಪಾಸ್ ಪಡೆಯಲು ನಿಮಗೆ ಸಾದ್ಯವೆ? ಕೂಡಲೆ ಸರ್ಕಾರ ಅದೇಶ ವಾಪಾಸ್ ಹಿಂಪಡೆಯದಿದ್ದಲ್ಲಿ ಮತ್ತು ಅರ್ಚಕರ ಸಂಬಳವನ್ನು ಹೆಚ್ಚು ಮಾಡಬೇಕು. ಬಡ ದೇವಸ್ಥಾನಗಳ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕು ಮತ್ತು ನೋಟೀಸ್ ನೀಡಿದ ತಹಶಿಲ್ದಾರ್ ಅನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. (ವರದಿ- ತನು ಕೊಟ್ಟಿಗೆಹಾರ)

 

ಸಿಹಿ ವಿತರಣೆ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಶಿವಪ್ಪ ನಾಯಕ ವೃತ್ತದಲ್ಲಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಸಂಭ್ರಮಾಚರಣೆ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಲಿಂ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಿವಮೊಗ್ಗ ಎಸ್ ಪಿ ಮಿಥುನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಎಸ್ ಪಿ ಸ್ಪಷ್ಟನೆ ಏನು?:
ಪೊಲೀಸರಿಂದ ಮಹಿಳೆಯ ಹಿನ್ನೆಲೆ, ಪೂರ್ವಾಪರ ಬಗ್ಗೆ ಪರಿಶೀಲನೆ ನಡೆಸಿದಾಗ ಮಹಿಳೆ ಮಾನಸಿಕ ಅಸ್ವಸ್ಥೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿದೆ. ಮಾನಸಿಕ ರೋಗಕ್ಕೆ ಮಹಿಳೆ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಮಹಿಳೆ ತಂದೆಯಿದ ಪೊಲೀಸರಿಗೆ ದಾಖಲೆಗಳ ಸಲ್ಲಿಕೆ ಮಾಡಲಾಗಿದ್ದು, 2018 ರಿಂದ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ಎಸ್ ಪಿ ಮಿಥುನ್ ಕುಮಾರ್ ದೃಢಪಟ್ಟಿದ್ದಾರೆ.

ಇದನ್ನೂ ಓದಿ; ಈ ಯೋಜನೆಯ ಫಲಾನುಭವಿಗಳು 10 ಲಕ್ಷದ ವರೆಗೆ ಪಡೆಯಬಹುದು ವಿಮಾ ಕವರೇಜ್

ಘೋಷಣೆ ಕೂಗಿದ ಮಹಿಳೆ ತಂದೆಯಿಂದಲೂ ಸ್ಪಷ್ಟನೆ:

ನನ್ನ ಮಗಳು ಮೊದಲಿನಿಂದಲೂ ಸ್ವಲ್ಪ ಮಾನಸಿಕ ಅಸ್ವಸ್ಥಳಿದ್ದಾಳೆ. ಈ ಸಂಬಂಧ ಅವಳಿಗೆ ಚಿಕಿತ್ಸೆ ಕೊಡಿಸುತ್ತಿದ್ದೇವೆ. ಕಳೆದ 10 ತಿಂಗಳಿನಿಂದ ಗಂಡನ ಮನೆ ಬಿಟ್ಟು ನನ್ನ ಮನೆಯಲ್ಲಿಯೇ ಇದ್ದಾಳೆ. ಈ ಹಿಂದೆ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಘಟನೆ ಕೇಳಿ ನನಗೂ ನೋವಾಗಿದೆ. ಅವಳು ಆ ತರಹದ ಹುಡುಗಿ ಅಲ್ಲ. ಅವಳು ಜಾತಿ ಭೇದ ಮಾಡಲ್ಲ. ಎಲ್ಲರನ್ನೂ ಒಂದೇ ತರ ನೋಡುತ್ತಾಳೆ. ಉದ್ದೇಶ ಪೂರಕವಾಗಿ ಅವಳು ಘೋಷಣೆ ಕೂಗಿಲ್ಲ ಎಂದು ಮಹಿಳೆಯ ತಂದೆ ಸಯ್ಯದ್ ಅಬ್ಬಾಸ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ; ಡಿಸಿಸಿ ಬ್ಯಾಂಕ್‌ ನಲ್ಲಿ ಉದ್ಯೋಗ; 93 ಹುದ್ದೆಗಗಳಿಗೆ ಅರ್ಜಿ ಆಹ್ವಾನ

ಏನಿದು ಪ್ರಕರಣ?
ಐದು ದಶಕಗಳ ಕನಸು ಅಯೋಧ್ಯೆ ರಾಮ ಮಂದಿರ ಇಂದು ಲೋಕಾರ್ಪಣೆಗೊಂಡಿದೆ. ದೇಶಾದ್ಯಂತ ಸಂಭ್ರಮಾಚರಣೆ ನಡೆಸಲಾಗುತ್ತಿದೆ. ಅದರಂತೆ ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲೂ ಸಿಹಿ ಹಂಚಿ ಸಂಭ್ರಮಿಸಲಾಗುತ್ತಿತ್ತು. ಜೈ ಶ್ರೀರಾಮ್ ಘೋಷಣೆಗಳು ಮೊಳಗುತ್ತಿದ್ದವು. ಈ ವೇಳೆ ಮುಸ್ಲಿಂ ಮಹಿಳೆಯೊಬ್ಬಳು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದಲ್ಲದೆ, ನೀವು ಮೋದಿ ಪರ ಕೆಲಸ ಮಾಡುತ್ತಿದ್ದೀರಿ ಎಂದು ಪೊಲೀಸರಿಗೆ ಆವಾಜ್ ಹಾಕಿದ್ದಳು. ಪರಿಣಾಮವಾಗಿ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಹಿಂದೂ ಕಾರ್ಯಕರ್ತರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಲ್ಲದೆ, ಇನ್ನಷ್ಟು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲಾರಂಭಿಸಿದರು. ಬಳಿಕ ಎಚ್ಚೆತ್ತ ಪೊಲೀಸರು, ಮುಸ್ಲಿಂ ಮಹಿಳೆಯನ್ನು ವಶಕ್ಕೆ ಪಡೆದು ಪೊಲೀಸ್ ಜೀಪ್ ನಲ್ಲಿ ಕರೆದೊಯ್ದಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.