ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲಾಧಿಕಾರಿ ಕಚೇರಿ ಬಾಗಿಲಲ್ಲೇ ಹೋಮ ನಡೆಸಿ ಕಚೇರಿಗೆ ನುಗ್ಗಲು ಯತ್ನಿಸಿದ ಪ್ರಕರಣದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್ ಸೇರಿದಂತೆ ದೀಕ್ಷಿತ್, ಕಿರಣ್, ಕಿಶೋರ್, ಅಮಿತ್ ಗೌಡನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಇದನ್ನೂ ಓದಿ; ರೈತರ ಕೃಷಿ ಸಾಲದ ಬಡ್ಡಿ ಮನ್ನಾ; ಯಾವ ರೈತರ, ಯಾವ ಸಾಲದ ಬಡ್ಡಿ ಮನ್ನಾ?; ಯಾವ ದಿನಾಂಕದಿಂದ ಈ ಆದೇಶ ಒಳಪಡುತ್ತದೆ?

ಏನಿದು ಪ್ರಕರಣ:
ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ದತ್ತಪೀಠದ ಹೋಮ ಮಂಟಪದಲ್ಲಿ ರಾಮ ತಾರಕ ಹೋಮ ಹವನ ಮಾಡಲು ಹಿಂದೂ ಸಂಘಟನೆಗಳು ಮುಂದಾಗಿದ್ದವು. ಆದರೆ, ಜಿಲ್ಲಾಡಳಿತ ಇದಕ್ಕೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಕೆರೆಳಿದ ಹಿಂದೂ ಕಾರ್ಯಕರ್ತರು ಡಿಸಿ ಕಚೇರಿ ಮುಂದೆಯೇ ಕರ್ಪೂರ ಹಚ್ಚಿ, ಶ್ರೀರಾಮನಿಗೆ ಹೋಮ ಹವನ ಮಾಡಿ, ರಾಮ ನಾಮ ಜಪ ಮಾಡಿದ್ದರು. ಅಷ್ಟೇ ಅಲ್ಲದೆ ಹೋಮಕುಂಡವನ್ನು ತಂದು ಹೋಮ ಮಾಡಲು ಮುಂದಾದಾಗ ಪೊಲೀಸರು ಹೋಮಕುಂಡವನ್ನು ವಶಕ್ಕೆ ಪಡೆದುಕೊಂಡರು. ಇದಾದ ಬಳಿಕ ಡಿಸಿ ಕಚೇರಿಗೆ ನುಗ್ಗಲು ಯತ್ನ ನಡೆದವು. ಈ ವೇಳೆ ಓರ್ವ ಕಾರ್ಯಕರ್ತ ಪೊಲೀಸ್ ವಾಹನಕ್ಕೆ ಅಡ್ಡಲಾಗಿ ಮಲಗಿದ್ದರು. ಈ ಘಟನೆ ಸಂಬಂಧ ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ಕಲಂ 353 ಹಾಗೂ 341 ಪ್ರಕಾರ ಈ ಐವರ ವಿರುದ್ಧ ಅತಿಕ್ರಮ ಪ್ರವೇಶ ಕೇಸ್ ದಾಖಲಾಗಿತ್ತು. ಉಪವಿಭಾಗಾಧಿಕಾರಿ ದಲ್ಮೀತ್ ಕುಮಾರ್ ನಗರ ಠಾಣೆಗೆ ದೂರು ನೀಡಿದ್ದರು. ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಐವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಐವರಿಗೂ ಜಾಮೀನು ದೊರಕಿದೆ.
ಖಾಂಡ್ಯ: ಶಂಕರ ಭಾರತಿ ಗೋಶಾಲೆ, ಶಾರದಾ ಪೀಠ ಸಹಭಾಗಿತ್ವದಲ್ಲಿ ಲಾಡು ಪ್ರಸಾದ ವಿತರಣೆ
ಖಾಂಡ್ಯ: (ನ್ಯೂಸ್ ಮಲ್ನಾಡ್ ವರದಿ) ಅಯೋಧ್ಯಾ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಹಿನ್ನೆಲೆ ಶಂಕರ ಭಾರತಿ ಗೋಶಾಲೆ, ಶಾರದಾ ಪೀಠ ಸಹಭಾಗಿತ್ವದಲ್ಲಿ ಖಾಂಡ್ಯ ಹೋಬಳಿಯಲ್ಲಿ ಲಾಡು ಪ್ರಸಾದ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಶ್ರೀಮಠದಿಂದ 10 ಸಾವಿರ ಲಾಡು ಪ್ರಸಾದವನ್ನು ಆಡಳಿತಾಧಿಕಾರಿಗಳಾದ ಗೌರಿ ಶಂಕರ್ ಅವರು ನೀಡಿದ್ದರು. ಹುಣಸೇಹಳ್ಳಿ, ಜೇನುಗದ್ದೆಯಿಂದ ಹಳೇಕಡಬಗೆರೆವರೆಗೂ ಹಾಗೂ ಹುಯಿಗೆರೆ ಬೀದರ್ ಮುಖ್ಯ ದೇವಸ್ಥಾನಗಳಿಗೆ ಪ್ರಸಾದ ವಿತರಣೆಯನ್ನು ಮಾಡಲಾಯಿತು.
ಇನ್ನು ಈ ಪ್ರಸಾದ ವಿತರಣೆಯಲ್ಲಿ ಗೋಶಾಲೆ ಮುಖ್ಯಸ್ಥ ಪ್ರವೀಣ್ ಖಾಂಡ್ಯ, ಗೋಪಾಲ, ಅಶಿತ್, ಪೂರ್ಣೇಶ ಉಜ್ಜನಿ, ಜಯಶೀಲ ಉಜ್ಜಿನಿ, ನಂದೀಶ, ವೆಂಕಟೇಶ, ಶಿವಣ್ಣ ಹಾಗೂ 50 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.












