ಪೂರ್ವಜರಿಂದ ಬಂದಿರುವ ಪ್ರಾಣಿಗಳ ಉತ್ಪನ್ನ ಬಳಕೆ ಅಪರಾಧವಲ್ಲ: ಸಿಎಂ ಸಲಹೆಗಾರ

ಮಡಿಕೇರಿ: (ನ್ಯೂಸ್ ಮಲ್ನಾಡ್ ವರದಿ) ಹಲವರ ಮನೆಗಳಲ್ಲಿ ಪೂರ್ವಜರ ಕಾಲದಿಂದಲೂ ವನ್ಯಜೀವಿಗಳಿಗೆ ಸಂಬಂಧಿಸಿದ ವಸ್ತುಗಳಿವೆ ಅದು ಅಪರಾಧ ಅಲ್ಲ. ಜನರು ಅನಗತ್ಯವಾಗಿ ಆತಂಕಪಡಬಾರದು ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ತಿಳಿಸಿದರು.

 

ಇದನ್ನೂ ಓದಿ; ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿ ಉಗುರಿನ ಪದಕವನ್ನು ಧರಿಸಿದ ಆರೋಪಕ್ಕೆ ರಾಜ್ಯಸಭಾ ಸದಸ್ಯ ಹಾಗೂ ನಟ ಜಗ್ಗೇಶ್ ವಿರುದ್ಧ ಅರಣ್ಯ ಇಲಾಖೆಯ ಮುಂದಿನ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಮಧ್ಯಂತರ ತಡೆ ವಿಧಿಸಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ಅರಣ್ಯಾಧಿಕಾರಿಗಳು ಈ ಬಗೆಯ ಕ್ರಮ ಕೈಗೊಳ್ಳಬಾರದು ಹೇಳಿದರು. ಈ ಕುರಿತು ಅರಣ್ಯ ಖಾತೆ ಸಚಿವರು ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ಕೊಡಬೇಕು. ಈ ಸಂಬಂಧ ಈಗಾಗಲೇ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ಮಾತನಾಡಿರುವೆ. ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೂ ಮಾತನಾಡುತ್ತೇನೆ ಎಂದು ತಿಳಿಸಿದರು.

 

ಇದನ್ನೂ ಓದಿ; ಆರೋಗ್ಯ ಸಹಾಯವಾಣಿ 104′ ಕರೆ ಮಾಡಿದ 4 ಗಂಟೆಯಲ್ಲಿ ರಕ್ತ ಕೊಡುತ್ತಾರೆ ಎಂಬ ಯೋಜನೆ ಜಾರಿ; ಇದರ ಸತ್ಯಾಸತ್ಯತೆ ಏನು

ವನ್ಯಜೀವಿಗಳನ್ನು ಕೊಂದು ಅದರ ವಸ್ತುಗಳ ಮಾರಾಟ ತಡೆಯಲೆಂದು ಮಾತ್ರವೇ ಕಾನೂನು ರಚನೆಯಾಗಿದೆ. ಇದರ ಉದ್ದೇಶ ಅರಿಯದೇ ಪೂರ್ವಜರಿಂದ ಬಂದ, ಪರಂಪರೆಯಿಂದ ಬಂದ ವಸ್ತುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುವುದು ಎಷ್ಟರಮಟ್ಟಿಗೆ ಸರಿ ಎಂದೂ ಪ್ರಶ್ನಿಸಿದರು. ಅರಣ್ಯಾಧಿಕಾರಿಗಳು ಮೊದಲು ಕಾನೂನನ್ನು ಸ್ಪಷ್ಟವಾಗಿ ಓದಿ ತಿಳಿದುಕೊಳ್ಳಬೇಕು. ನಂತರ ಕ್ರಮ ಜರುಗಿಸಬೇಕು. ಸದ್ಯ ಈಗಾಗಲೇ ಪ್ರಕರಣ ಹೈಕೋರ್ಟ್ ನಲ್ಲಿ ಇದೆ. ಅಲ್ಲಿ ಅಂತಿಮ ತೀರ್ಪು ಬರುವವರೆಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬಾರದು ಎಂದರು.

 

ಎನ್.ಆರ್ ಪುರ: ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಎನ್.ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ನಗರದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ನಡೆದಿದೆ. ಎನ್.ಆರ್ ಪುರ ತಾಲೂಕಿನ ಹಿಳುವಳ್ಳಿ ಗ್ರಾಮದ ಮಧು ಭಂಡಾರಿ (38) ಬಂಧಿತ ಆರೋಪಿ.

 

ಬಂಧಿತ ಆರೋಪಿಗಳಿಂದ 3000/- ರೂ ನಗದು, ಕಳ್ಳತನದ ಹಣದಿಂದ ತೆಗೆದುಕೊಂಡಿದ್ದ 8500 ರೂ ಬೆಲೆಯ ವಿವೋ ಕಂಪನಿಯ ಒಂದು ಮೊಬೈಲ್, 11000/- ರೂ ಮೌಲ್ಯದ 2 ಗ್ರಾಂ 200 ಮೀಲಿಯ ಚಿನ್ನದ ತಾಳಿ ಸರದ ಕೊಂಡಿಯನ್ನು ವಶಪಡಿಸಿಕೋಂಡಿದ್ದಾರೆ.

ಪ್ರಕರಣದಲ್ಲಿ ಪಿ.ಎಸ್.ಐ ಗುರು ಎ ಸಜ್ಜನ್, ಜ್ಯೋತಿ, ಸಿಬ್ಬಂದಿಗಗಳಾದ ಶಂಕರ್, ಗಿರೀಶ ಕುಮಾರ್, ದೇವರಾಜು, ಅಸೀಫ್ ಇದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.