ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಪೆಟ್ರೋನೆಟ್ ಕಂಪನಿಯ ಪೈಪ್ ಕೊರೆದು ಕೋಟ್ಯಾಂತರ ಮೌಲ್ಯದ ಪೆಟ್ರೋಲ್ – ಡಿಸೇಲ್ ಕಳ್ಳತನ ಮಾಡಿರುವ ಘಟನೆ ಹಾಸನದ BV3 ವಿಭಾಗದ ಚಿಕ್ಕಮಗಳೂರು ಜಿಲ್ಲೆಯ ಹಿರೇಶಿಗರು ಗ್ರಾಮದಲ್ಲಿ ನಡೆಡಿದೆ.
ಇದನ್ನೂ ಓದಿ: PUC ಅಲ್ಲಿ 60% ಅಂಕ ಪಡೆದ ವಿದ್ಯಾರ್ಥಿಗಳ ಗಮನಕ್ಕೆ; ಮಿಸ್ ಮಾಡ್ದೆ ಈ ಸುದ್ದಿ ಓದಿ

ಮಂಗಳೂರಿನಿಂದ ಬೆಂಗಳೂರುವರೆಗೂ ಇರುವ ಪೈಪ್ ಲೈನ್ ಮೂಡಿಗೆರೆ ತಾಲೂಕಿನ ಹಿರೇಶಿಗರು ಗ್ರಾಮದ BV3 ಬಳಿ ರಂದ್ರ ಕೊರೆದು ಹೋಸ್ ಪೈಪ್ ಬಳಸಿ ಟಿಪ್ಪರ್ ಲಾರಿಗೆ ಟ್ಯಾಂಕರ್ ಕೂರಿಸಿ ಪೆಟ್ರೋಲ್, ಡಿಸೇಲ್ ಕಳ್ಳತನ ಮಾಡಿದ್ದಾರೆ. ಪೈಪ್ ಲೈನ್ ನಲ್ಲಿ ರಂದ್ರವಾಗಿರುವ ಬಗ್ಗೆ ಅಲಾರಾಂ ಸುಳಿವು ನೀಡಿದ ಕಾರಣ ಪೆಟ್ರೋನೆಟ್ ಸಿಬ್ಬಂದಿ ರಾತ್ರೋರಾತ್ರಿ ತಪಾಸಣೆ ನಡೆಸಿದ್ದಾರೆ.
ಇನ್ನು ಸಿಬ್ಬಂದಿ ನೋಡುತ್ತಿದ್ದಂತೆ ಟಿಪ್ಪರ್ ಲಾರಿ, ಜಿಪ್ಸಿ, ಕಾರು ಬಿಟ್ಟು ಕಳ್ಳರು ಎಸ್ಕೇಪ್ ಆಗಿದ್ದು, ಟಿಪ್ಪರ್ ಲಾರಿಯಲ್ಲಿ ಎರಡು ಸಾವಿರ ಲೀಟರ್ ಪೆಟ್ರೋಲ್ ಪತ್ತೆಯಾಗಿದೆ. ಹಿರೇಶಿಗರು ಗ್ರಾಮದ ವಿಜಯ್ ಕುಮಾರ್ ಎಂಬುವನ ವಿರುದ್ಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಕೋಟ್ಯಾಂತರ ಮೌಲ್ಯದ ಪೆಟ್ರೋಲ್ ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ.
ಇದನ್ನೂ ಓದಿ: ವಿವಿಧ ಸಾಲ-ಸೌಲಭ್ಯಕ್ಕೆ ಅರ್ಜಿ ಆಹ್ವಾನ; ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ












