ಶೃಂಗೇರಿಯಲ್ಲಿ SIR ಕುರಿತು ಕಾಂಗ್ರೆಸ್‌ನಿಂದ ಜಾಗೃತಿ ಅಭಿಯಾನ; ಸಾರ್ವಜನಿಕರಿಗೆ ಕೈಪಿಡಿ ವಿತರಣೆ

ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಭಟ್ ಅವರ ನೇತೃತ್ವದಲ್ಲಿ ಶೃಂಗೇರಿ ಬಸ್ ನಿಲ್ದಾಣದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಯಿತು.

ಈ ವೇಳೆ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು, ಸ್ಥಳೀಯ ವ್ಯಾಪಾರಸ್ಥರು ಹಾಗೂ ಆಟೋ ನಿಲ್ದಾಣದ ಚಾಲಕರಿಗೆ ಲೇಖಕ ದೇವನೂರು ಮಹದೇವ ಅವರು ಬರೆದು ಮಲೆನಾಡು-ಕರಾವಳಿ ಜನಪರ ಒಕ್ಕೂಟ ಪ್ರಕಟಿಸಿರುವ “SIR: ವಿಶೇಷವೋ.. ವಿಕಾರವೋ?” ಎಂಬ ಕೈಪಿಡಿಯನ್ನು ವಿತರಿಸಿ, SIR ಪ್ರಕ್ರಿಯೆಯ ಕುರಿತು ಜಾಗೃತಿ ಮೂಡಿಸಲಾಯಿತು.

ಅಭಿಯಾನದಲ್ಲಿ ಕಾಂಗ್ರೆಸ್ ಮುಖಂಡರಾದ ಕುರಾಡಮನೆ ವೆಂಕಟೇಶ್, ಕಾರ್ಯದರ್ಶಿ ಸುಂದರೇಶ್, ಕಿಗ್ಗಾ ಹೋಬಳಿ ಅಧ್ಯಕ್ಷ ರಾಜ್ ಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ಲಕ್ಷ್ಮೀಶ್, ಕಾರ್ಯಾಧ್ಯಕ್ಷ ಅಜಿತ್, ದಿನೇಶ್ ಹೆಗ್ಡೆ, ಕವೀಶ್, ದಿನೇಶ್ ಶೆಟ್ಟಿ, ರತ್ನಾಕರ್, ಸಂತೋಷ್ ಕಾಳ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.