ಶೃಂಗೇರಿ: ಕ್ರೀಡೆ-ಸಾಂಸ್ಕೃತಿಕ ಸ್ಪರ್ಧೆಗಳು ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯದ ರಕ್ಷಣೆಗೆ ಅವಶ್ಯಕ- ಪ್ರೊ. ಎ.ಪಿ.ಸಚ್ಚಿದಾನಂದ

ಶೃಂಗೇರಿ:  (ನ್ಯೂಸ್ ಮಲ್ನಾಡ್ ವರದಿ) ಜ್ಞಾನಾರ್ಜನೆ, ದೈಹಿಕ ದಾರ್ಢ್ಯ, ಮಾನಸಿಕ ಸ್ವಾಸ್ಥ್ಯ ಇವು ಮೂರು ಇದ್ದಾಗ ಮಾತ್ರ ಪರಿಪೂರ್ಣ ವ್ಯಕ್ತಿತ್ವವನ್ನು ಸಾಗಿಸಲು ಸಾಧ್ಯವಾಗುತ್ತದೆ ಎಂದು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಎ.ಪಿ.ಸಚ್ಚಿದಾನಂದ ಅವರು ಹೇಳಿದರು.

 

ಇದನ್ನೂ ಓದಿ; SSLC ಪಾಸ್ ಆದವರಿಗೆ ಗುಡ್ ನ್ಯೂಸ್; SSC GD ಕಾನ್ಸ್‌ ಟೇಬಲ್ ಗೆ ಅರ್ಜಿ ಆಹ್ವಾನ

ಶೃಂಗೇರಿಯ ಮೆಣಸೆಯ ರಾಜೀವಗಾಂಧೀ ಪರಿಸರದಲ್ಲಿ ನಡೆದ ಎರಡನೆಯ ವಲಯಮಟ್ಟದ ಯುವಮಹೋತ್ಸವದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಯುವಕರು ಪರಿಪೂರ್ಣ ವಿಕಾಸವನ್ನು ಹೊಂದಲು ದೈಹಿಕವಾದ ಮತ್ತು ಮಾನಸಿಕವಾದ ಆರೋಗ್ಯವನ್ನು ವರ್ಧಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯುವಮಹೋತ್ಸವದಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

ಇದನ್ನೂ ಓದಿ; ಇನ್ನೂ ಆಧಾರ್ ಕಾರ್ಡ್ Update ಮಾಡಿಸಿಲ್ವಾ;  ಉಚಿತವಾಗಿ ಅಪ್ ಡೇಟ್ ಮಾಡಲು ಕೆಲವೇ ದಿನ ಬಾಕಿ; ಹೇಗೆ ಅಪ್ ಡೇಟ್ ಮಾಡುವುದು? ತಪ್ಪದೆ ಇದನ್ನು ಓದಿ

ಇತ್ತೀಚಿಗೆ ಯುವಕರು ದೈಹಿಕ ಸ್ವಾಸ್ಥ್ವನ್ನು ಕೆಡಿಸುವ ಜೀವನ ಕ್ರಮವನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಸಮರ್ಥ ಯುವಕರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯದ ರಕ್ಷಣೆಗೆ ಅತ್ಯಂತ ಅವಶ್ಯಕವಾಗಿದೆ. ಈ ಉದ್ದೇಶದಿಂದ ಹಮ್ಮಿಕೊಂಡಿರುವ ಯುವಮಹೋತ್ಸವವು ಸಾರ್ಥಕವಾಗಿ ಪೂರ್ಣಗೊಂಡಿದೆ ಎಂದರು.

 

ಯುವಮಹೋತ್ಸವದಲ್ಲಿ ಒಟ್ಟೂ 40 ಕ್ಕೂ ಹೆಚ್ಚು ಶೈಕ್ಷಣಿಕ ಸಾಂಸ್ಕೃತಿಕ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಅದರಲ್ಲಿ ರಾಜೀವಗಾಂಧೀ ಪರಿಸರವು 13 ಚಿನ್ನದ ಪದಕ, 14 ಬೆಳ್ಳಿಯ ಪದಕ, 8 ಕಂಚಿನಪದಕಗಳನ್ನು ಪಡೆದು ಒಟ್ಟೂ 115 ಅಂಕಗಳೊಂದಿಗೆ ಪ್ರಥಮಸ್ಥಾನವನ್ನು ಪಡೆಯುವ ಜೊತೆಗೆ ವಿಜಯ ವೈಜಯಂತೀ ಪುರಸ್ಕಾರ ಪಡೆದಿದೆ. ಗುರುವಾಯೂರ್ ಪರಿಸರವು 13 ಚಿನ್ನದ ಪದಕ, 9 ಬೆಳ್ಳಿಯ ಪದಕ, 7 ಕಂಚಿನಪದಕಗಳನ್ನು ಪಡೆದು ಒಟ್ಟೂ 99 ಅಂಕಗಳೊಂದಿಗೆ ದ್ವಿತೀಯ ಸ್ಥಾನವನ್ನು ಪಡೆಯಿತು. ದ್ವಿತೀಯ ಸ್ಥಾನವನ್ನು ಪಡೆದ ಗುರುವಾಯೂರ್ ಪರಿಸರಕ್ಕೆ ರನ್ನರ್ ಅಪ್ ಪ್ರಶಸ್ತಿಯನ್ನು ನೀಡಲಾಯಿತು.

ರಸ್ತೆ ವಿಸ್ತರಣೆಗೆ ಬಲಿಯಾಗಲಿವೆ ಬೃಹತ್ ಮರಗಳು

 

ತೀರ್ಥಹಳ್ಳಿ: (ನ್ಯೂಸ್ ಮಲ್ನಾಡ್ ವರದಿ) ಕಾಡು ಬೆಳಿಸಿ ನಾಡು ಉಳಿಸಿ, ಮನೆಗೊಂದು ಮರ ಊರಿಗೊಂದು ವನ, ಗಿಡ ಮರಗಳನ್ನ ಬೆಳಿಸಿ ಪರಿಸರ ಕಾಪಾಡಿ. ಹೀಗಂತ ಹೇಳಿ ಬೃಹತ್ತಾಗಿ ಬೆಳೆದಿರುವ ನೂರಾರು ಮರಗಳ ಮಾರಣ ಹೋಮ ಮಾಡಲು ರೆಡಿಯಾಗಿದೆ.

ತೀರ್ಥಹಳ್ಳಿ-ಕೋಣಂದೂರು ಮಾರ್ಗದ ರಸ್ತೆ ವಿಸ್ತರಣೆ ಕಾಮಗಾರಿ ಆರಂಭಗೊಂಡಿದೆ. ಮರ ಕಡಿತಲೆಗೆ ಅರಣ್ಯ ಇಲಾಖೆಯ ಕಾನೂನು ಅಡ್ಡಿಯಾಗುವ ಕಾರಣ ಮರಗಳನ್ನು ಉರುಳಿಸುವ ತಂತ್ರ ಅನುಸರಿಸಲಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ನೆರಳು ನೀಡಲು ಬೆಳೆಸಿದ್ದ ಪುರಾತನ ಕಾಲದ ಹಲವು ಜಾತಿಯ ಮರಗಳು ಧರೆಗುರುಳುವ ಆತಂಕ ಎದುರಾಗಿದೆ.

ರಸ್ತೆ ವಿಸ್ತರಣೆ ಮರಗಳ ಮಾರಣ ಹೋಮ:
ಆರಗ, ಕೋಣಂದೂರು, ಹಾದಿಗಲ್ಲು, ಹುಂಚ, ರಿಪ್ಪನ್ ಪೇಟೆ ರಾಜ್ಯ ಹೆದ್ದಾರಿ ಮಾರ್ಗವಾಗಿ ಆನಂದಪುರದಲ್ಲಿ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಪ್ರಥಮ ಹಂತದ ಕಾಮಗಾರಿಗೆ ಚಾಲನೆ ದೊರೆತಿದೆ. ಕೋಟೆಗದ್ದೆಯಿಂದ ಹಾದಿಗಲ್ಲುವರೆಗೆ ಅಂದಾಜು 25 ಕೋಟಿ ವೆಚ್ಚದಲ್ಲಿ 5.75 ಕಿ.ಮೀ. ದೂರದ 7 ಮೀಟರ್ ಅಗಲದ ಕೋಣಂದೂರು ಚತುಷ್ಪಥ ರಸ್ತೆಗೆ ನೀಲನಕ್ಷೆ ತಯಾರಾಗಿದೆ.

ಇದನ್ನೂ ಓದಿ;  ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…

ಈಗಾಗಲೇ ಆರಗ, ಹಿರೇಸರ, ಜಯಪುರ, ಗುಡ್ಡೇಕೊಪ್ಪ, ತ್ಯಾರಂದೂರು, ಕೋಟೇಗದ್ದೆ, ಕೌರಿಕಾನು ಮಾರ್ಗದ ರಸ್ತೆಗಳ ವಿಸ್ತರಣೆಗೆ ಸಿದ್ಧತೆ ನಡೆಯುತ್ತಿದೆ. ಕೇವಲ 8 ಕಿ.ಮೀ. ಅಂತರದಲ್ಲಿರುವ ೨೪೫ಕ್ಕೂ ಹೆಚ್ಚು ಮರಗಳನ್ನು ಉರುಳಿಸಿದ್ದಾರೆ ಎನ್ನಲಾಗಿದೆ.

ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ಮರಗಳಿಗೆ ಹಾನಿಯಾಗುತ್ತಿರುವ ಬಗ್ಗೆ ಮಾಹಿತಿ ಇಲ್ಲ. ಸ್ಥಳ ಪರಿಶೀಲನೆ ನಡೆಸಿ ಅರಣ್ಯ ಸಂಪತ್ತಿಗೆ ಹಾನಿ ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಲೋಕೇಶ್ ಹೇಳಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.