ಜಯಪುರ: (ನ್ಯೂಸ್ ಮಲ್ನಾಡ್ ವರದಿ) ನವರಾತ್ರಿ ಪ್ರಯುಕ್ತ ಜಿಲ್ಲಾಮಟ್ಟದ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ದಿನಾಂಕ 15.10.2023 ಭಾನುವಾರರಂದು (ನಾಳೆ) ಜಯಪುರದ ಕೂಳೂರು ಬಸ್ ಸ್ಟಾಂಡ್ ಸಮೀಪ ಹಮ್ಮಿಕೊಳ್ಳಲಾಗಿದೆ.

ಏನೆಲ್ಲಾ ಆಟೋಟ ಸ್ಪರ್ಧೆಗಳು ಇದೆ:
* ಪುರುಷರಿಗೆ- ಹಗ್ಗ ಜಗ್ಗಾಟ ಮತ್ತು 100 ಮೀಟರ್ ಓಟ ಹಾಗೂ 380 ಕೆ.ಜಿ ಒಳಗಿನ ತಂಡ “ಎ” ಪೋಲ್ ಮತ್ತು 380 ಕೆ.ಜಿ ಮೇಲ್ಪಟ್ಟ ತಂಡ “ಬಿ” ಪೋಲ್.
* ಮಹಿಳೆಯರಿಗೆ- ಹಗ್ಗ ಜಗ್ಗಾಟ ಮತ್ತು 100 ಮೀಟರ್ ಓಟ
* ಶಾಲಾ ಮಕ್ಕಳಿಗೆ – 100 ಮೀಟರ್ ಆಟೋಟ ಸ್ಪರ್ಧೆಗಳು ಇರುತ್ತದೆ.

ಇದನ್ನೂ ಓದಿ; ಸಾರ್ವಜನಿಕರ ಗಮನಕ್ಕೆ; ರಾಜ್ಯದ ಪ್ರತಿಯೊಬ್ಬರ ಮೊಬೈಲ್ ಗೆ ಬರಲಿದೆ ಎಮರ್ಜೆನ್ಸಿ ಅಲರ್ಟ್!
ಇನ್ನು ಈ ಆಟೋಟ ಸ್ಪರ್ಧೆಗಳ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಮೊಬೈಲ್ ನಂವರ್ ಗೆ ಸಂಪರ್ಕಿಸಿ:
9148728609, 7022306440, 9591222834, 9449402074
ಚಿಕ್ಕಮಗಳೂರು: ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಬಾಲ ಮಂದಿರದಿಂದ ತಪ್ಪಿಸಿಕೊಂಡಿದ್ದ ಇಬ್ಬರು ಬಾಲಕಿಯರನ್ನು ವೇಶ್ಯಾವಾಟಿಕೆಯ ಜಾಲಕ್ಕೆ ತಳ್ಳಿ ಅತ್ಯಾಚಾರಕ್ಕೆ ಕಾರಣವಾಗಿದ್ದ ನಾಲ್ವರು ಸೇರಿ ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ:
ಶಿವಮೊಗ್ಗದಲ್ಲಿ ಬಾಲಕಿಯೊಂದಿಗೆ ಸುತ್ತಾಡುತ್ತಿದ್ದ ಯುವಕನನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು. 16 ವರ್ಷದ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಯುವಕನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೋಕ್ರೋ) ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದರು. ಬಾಲಕಿಯನ್ನು ಚಿಕ್ಕಮಗಳೂರಿನ ಬಾಲ ಮಂದಿರಕ್ಕೆ ಒಪ್ಪಿಸಿದ್ದರು.
ಬಾಲ ಮಂದಿರದಿಂದ ಮತ್ತೊಬ್ಬ 14 ವರ್ಷದ ಬಾಲಕಿಯೊಂದಿಗೆ ಹೊರಹೋಗಿದ್ದ ಬಾಲಕಿ, ವೇಶ್ಯಾವಾಟಿಕೆ ನಡೆಸುವವರ ಸಂಪರ್ಕಕ್ಕೆ ಸಿಲುಕಿದ್ದಾರೆ. ಈ ಇಬ್ಬರು ಬಾಲಕಿಯರನ್ನು ಹಾಸನದ ಮತ್ತೊಬ್ಬ ಮಧ್ಯವರ್ತಿಯ ಬಳಿ ಚಿಕ್ಕಮಗಳೂರಿನ ಮಧ್ಯವರ್ತಿ ಕಳುಹಿಸಿದ್ದಾರೆ. ಅಲ್ಲಿ ಇಬ್ಬರು ಬಾಲಕಿಯರ ಮೇಲೆ ಹಲವರಿಂದ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ಮೂಲಗಳ ಮಾಹಿತಿ, ಅಲ್ಲಿಂದ ಬಸ್ ಹತ್ತಿ ಬೆಂಗಳೂರಿಗೆ ತೆರಳಿ, ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದರು. ಅಷ್ಟರಲ್ಲಿ ಬಾಲ ಮಂದಿರದ ಸಿಬ್ಬಂದಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಧರ್ಮಸ್ಥಳದಿಂದ ಬಾಲಕಿಯರನ್ನು ಕರೆ ತಂದು ವಿಚಾರಿಸಿದಾಗ ವೇಶ್ಯಾವಾಟಿಕೆಗೆ ತಳ್ಳಿ, ಹಾಸನದಲ್ಲಿ ಹಲವರಿಂದ ಅತ್ಯಾಚಾರ ನಡೆದಿದೆ ಎಂಬುದನ್ನು ಬಾಲಕಿಯರು ಪೊಲೀಸರ ಮುಂದೆ ತಿಳಿಸಿದ್ದಾರೆ.
ಚಿಕ್ಕಮಗಳೂರಿನಿಂದ ಹಾಸನಕ್ಕೆ ಕಳುಹಿಸಿದ ಆರೋಪದಲ್ಲಿ ಮಧ್ಯವರ್ತಿ ದಂಪತಿ, ಹಾಸನದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರು ಎನ್ನಲಾದ ದಂಪತಿ, ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಆರು ಮಂದಿ ಸೇರಿ ಹತ್ತು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನೂ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಬಾಲ ಮಂದಿರದಿಂದ ವಿದ್ಯಾರ್ಥಿನಿಯರು ತಪ್ಪಿಸಿಕೊಳ್ಳಲು ಅವಕಾಶ ಇಲ್ಲ. ಆಗಿರುವ ಪ್ರಮಾದಕ್ಕೆ ಕಾರಣ ಕೇಳಿ ಕಾವಲುಗಾರರಿಗೆ ಬಾಲ ಮಂದಿರದ ಮುಖ್ಯಸ್ಥರು ನೋಟಿಸ್ ನೀಡಿದ್ದಾರೆ.















