ಚಿಕ್ಕಮಗಳೂರು: ಪತಿಯಿಂದಲೇ ಪತ್ನಿಯ ಹತ್ಯೆ ಪ್ರಕರಣ: ಮುಳ್ಳಯ್ಯನಗಿರಿ ಕಾಡಿನಲ್ಲಿ ಆರೋಪಿ ಬಂಧನ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಚಾಕುವಿನಿಂದ ಇರಿದು ಹತ್ಯೆಗೈದು ಬಳಿಕ ನಾಪತ್ತೆಯಾಗಿದ್ದ ಆರೋಪಿ ಪತಿಯನ್ನು ಮುಳ್ಳಯ್ಯನಗಿರಿ ಕಾಡಿನಲ್ಲಿ ಬಂಧಿಸಿದ್ದಾರೆ. ಅವಿನಾಶ್ (32) ಬಂಧಿತ ಆರೋಪಿಯಾಗಿದ್ದಾನೆ.


ಇದನ್ನೂ ಓದಿ: ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆಗಳು ಬಂದ್; ಯಾಕೆ ಗೊತ್ತಾ?


4 ವರ್ಷದ ಹಿಂದೆ ಅವಿನಾಶ್ ಮತ್ತು ಕೀರ್ತಿ ಪ್ರೀತಿಸಿ ಮದುವೆಯಾಗಿದ್ದರು ಆದರೆ ಬುಧವಾರ ಮಧ್ಯಾಹ್ನ ಯಾವುದೋ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದು ಬಳಿಕ ಕೋಪಗೊಂಡ ಪತಿ ಚಾಕುವಿನಿಂದ ಹತ್ತು ಬಾರಿ ಇರಿದು ಸ್ಥಳದಿಂದ ಪರಾರಿಯಾಗಿದ್ದ.


ಇದನ್ನೂ ಓದಿ: ರಾಜ್ಯದ ಬಿಸಿಯೂಟ ತಯಾರಕರಿಗೆ ಗುಡ್ ನ್ಯೂಸ್; ಗೌರವಧನ ಹೆಚ್ಚಳ ಮಾಡಿ ಸರ್ಕಾರ ಆದೇಶ!


ಘಟನೆ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಅದರಂತೆ ರಾಜೇಶ್ ನೇತೃತ್ವದ ಸ್ಪೆಷಲ್ ಟೀಮ್ ನಿಂದ ಆರೋಪಿಯ ಪತ್ತೆಗೆ ಕಾರ್ಯಾಚರಣೆ ನಡೆಸಿ ಮುಳ್ಳಯ್ಯನಗಿರಿ ಅರಣ್ಯ ಪ್ರದೇಶದಲ್ಲಿ ಆರೋಪಿ ಅವಿನಾಶ್ ನನ್ನ ಬಂಧಿಸಿದ್ದಾರೆ.


ಇದನ್ನೂ ಓದಿ: ಇಂತಹ ವಿದ್ಯಾರ್ಥಿಗಳಿಗೆ €18,750 ಸ್ಕಾಲರ್‌ ಶಿಪ್; ಯಾರು ಅರ್ಹರು, ಅರ್ಜಿ ಸಲ್ಲಿಕೆ ಹೇಗೆ?


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.