ಕರ್ನಾಟಕ ಸರಕಾರ ದ್ವೇಷ ರಾಜಕಾರಣ ಮಾಡಿ ಹಿಂದೂ ನಾಯಕ ಶರಣ್ ಪಂಪುವೆಲ್ ರವರನ್ನು ಗುರಿಯಾಗಿಸಿ ದಾಖಲಿಸಿದ ಪ್ರಕರಣ ವಾಪಾಸ್ ಪಡೆಯಬೇಕು ಹಾಗೂ ಮಂಗಳೂರಿನ ಕಂಕನಾಡಿ ಬಳಿ ಅನುಮತಿ ರಹಿತ ನಮಾಜು ಮಾಡಿದ ಪ್ರಕರಣಕ್ಕೆ ಹಾಕಿದ ‘ಬಿ’ ರಿಪೋರ್ಟ್ ರದ್ದುಪಡಿಸಬೇಕು ಹಾಗೂ ಈ ಪ್ರಕರಣದಲ್ಲಿ ಅಮಾನತಾಗಿರುವ ಪೊಲೀಸ್ ಅಧಿಕಾರಿಯ ಅಮಾನತು ರದ್ದುಪಡಿಸಲು ಆಗ್ರಹಿಸಿ ಇಂದು ಬಜರಂಗದಳ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: ಈ ರೈತರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 10 ಸಾವಿರ; ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು? ಇಲ್ಲಿದೆ ಡಿಟೈಲ್ಸ್

ಕಳೆದ ವಾರ ಮಂಗಳೂರು ಕಂಕನಾಡಿ ಬಳಿಯ ಮಸೀದಿಯ ಎದುರು ರಸ್ತೆಯಲ್ಲಿ ಕೆಲವರು ಅನುಮತಿ ರಹಿತವಾಗಿ ನಮಾಜ್ ಮಾಡಿದ್ದರು. ಪೊಲೀಸರು ಇದನ್ನು ಗಮನಿಸಿ ಸುಮೋಟೋ ಪ್ರಕರಣ ದಾಖಲಿಸಿದ್ದರು. ಆದರೆ ಮಾಧ್ಯಮದಲ್ಲಿ ಪ್ರಕಟವಾದಂತೆ ಕಾಂಗ್ರೆಸ್ ಪಕ್ಷದ ಹಾಗೂ ಮುಸ್ಲಿಂ ಸಂಘಟನೆಯ ಒತ್ತಡದ ಮೇರೆಗೆ ಆ ಪ್ರಕರಣವನ್ನು ಬಿ ರಿಪೋರ್ಟ್ ಹಾಕಿ ಪೊಲೀಸರು ಹಿಂದೆ ಪಡೆದಿರುತ್ತಾರೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಇರುವ ಸ್ಥಳೀಯ ಪೊಲೀಸರು ನ್ಯಾಯಯುತವಾಗಿ ಪ್ರಕರಣ ದಾಖಲಿಸಿದಕ್ಕಾಗಿ ಆ ಪೊಲೀಸ್ ಅಧಿಕಾರಿಯನ್ನು ಅಮಾನತುಗೊಳಿಸಿರುತ್ತಾರೆ. (ಕಾಂಗ್ರೆಸ್ ಪಕ್ಷದ ನಿಯೋಗ ಹಾಗೂ ಮುಸ್ಲಿಂ ಸಂಘಟನೆಯ ನಿಯೋಗ ಪೊಲೀಸರಿಗೆ ಒತ್ತಡ ಹಾಕಿದ ಬಗ್ಗೆ ಮಾಧ್ಯಮದಲ್ಲಿ ಪ್ರತ್ಯೇಕ ವರದಿಯಾಗಿರುತ್ತದೆ)
ಇದನ್ನೂ ಓದಿ: ಬೆಳೆ ವಿಮೆ ಬಗ್ಗೆ ರಾಜ್ಯದ ರೈತರಿಗೆ ಬಿಗ್ ಅಪ್ ಡೇಟ್; ಈ ಕೆಲಸ ಮಾಡಲು ಸರ್ಕಾರ ಸೂಚನೆ..!
ಮಂಗಳೂರಿನ ಜೆರೊಸಾ ಶಾಲೆಯ ಎದುರು ಅನುಮತಿ ಇಲ್ಲದೆ ಜೈ ಶ್ರೀರಾಮ್ ಹೇಳಿದಕ್ಕೆ ಕೆಲವು ತಿಂಗಳ ಹಿಂದಿನ ಪ್ರಕರಣಕ್ಕೆ ಇದುವರೆಗೂ ಬಿ ರಿಪೋರ್ಟ್ ಹಾಕಿರುವುದಿಲ್ಲ. ಅನುಮತಿ ರಹಿತ ಜೈ ಶ್ರೀರಾಮ್ ಹೇಳಿದ್ದಕ್ಕೆ ಪ್ರಕರಣ ದಾಖಲಿಸುವುದು ಹಾಗೂ ಅನುಮತಿ ರಹಿತ ನಮಾಜ್ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದರೂ ಒತ್ತಡದ ಮೇರೆಗೆ ಯಾವುದೇ ತನಿಖೆ ನಡೆಸದೆ ಕಾಂಗ್ರೆಸ್ ಮತ್ತು ಮುಸ್ಲಿಂ ಸಂಘಟನೆಗಳು ಹೇಳಿದ ತಕ್ಷಣ ಬಿ ರಿಪೋರ್ಟ್ ಹಾಕಿ ಕರ್ತವ್ಯ ನಿರ್ವಹಿಸಿದ ಅಧಿಕಾರಿಯನ್ನು ಅಮಾನತು ಮಾಡಿದ್ದಾರೆ, ಇದು ದ್ವೇಷ ರಾಜಕಾರಣವಾಗಿದೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮ ಜಾರಿ
ಆದ್ದರಿಂದ ಬಿ ರಿಪೋರ್ಟ್‌ನ್ನು ರದ್ದುಪಡಿಸಿ ಪ್ರಕರಣವನ್ನು ಮುಂದುವರಿಸಿ, ಅನುಮತಿ ಇಲ್ಲದೆ ನಮಾಜು ಮಾಡಿದವರಿಗೆ ಸೂಕ್ತ ಶಿಕ್ಷೆ ನೀಡಬೇಕು. ಮುಂದೆ ಅನುಮತಿ ಇಲ್ಲದೆ ಎಲ್ಲೂ ನಮಾಜ್ ಮಾಡದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಅಧಿಕಾರಿ ಅಮಾನತು ರದ್ದುಗೊಳಿಸಬೇಕು.
ಹಾಗೆಯೇ ಮುಂದುವರಿದು ಈ ಸರಕಾರವು ಹಿಂದುಗಳ ದಮನ ನೀತಿಯನ್ನು ಮುಂದುವರಿಸಿದ್ದು ಜೆರೋಸಾ ಶಾಲೆಯ ಪ್ರಕರಣದಲ್ಲಿ ಹಿಂದೂ ನಾಯಕರಾದ ಶರಣ್ ಪಂಪುವೆಲ್ ಸ್ಥಳದಲ್ಲಿ ಉಪಸ್ಥಿತಿ ಇಲ್ಲದಿದ್ದರೂ ಅವರನ್ನು ಗುರಿಯಾಗಿರಿಸಿಕೊಂಡು ಪ್ರಕರಣ ದಾಖಲಿಸಿರುತ್ತಾರೆ. ಅದೇ ರೀತಿಯಲ್ಲಿ ಯಾರೋ ಮಾಡಿದ ನಮಾಜ್ ಪ್ರಕರಣಕ್ಕೆ ದ್ವೇಷ ಮಾಡುತ್ತಾ ಅವರ ಮೇಲೆ ಪ್ರಕರಣವನ್ನು ತಕ್ಷಣ ಹಿಂದೆ ಪಡೆಯಬೇಕೆಂದು ಮನವಿ ಮಾಡುತ್ತೇವೆ.
ರಾಜ್ಯ ಸರಕಾರ ಹಿಂದುಗಳ ಮೇಲೆ ಮಾಡುತ್ತಿರುವ ತಾರತಮ್ಯ ದ್ವೇಷ ರಾಜಕಾರಣ ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದರು .
ಈ ಸಂದರ್ಭದಲ್ಲಿ ಶ್ರೀ ರಂಗನಾಥ್, ಜಿಲ್ಲಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್ ಚಿಕ್ಕಮಗಳೂರು. ಶ್ಯಾಮ್ ವಿ ಗೌಡ, ಬಜರಂಗದಳ ಚಿಕ್ಕಮಗಳೂರು ಜಿಲ್ಲಾ ಸಹ ಸಂಯೋಜಕ. ರವಿಕಿರಣ್, ಬಜರಂಗದಳ ಚಿಕ್ಕಮಗಳೂರು ನಗರ ಗೋರಕ್ಷಾ, ಆಕಾಶ್ ಬಜರಂಗದಳ ಸಪ್ತಾಹಿಕ್ ಮಿಲನ್ ಪ್ರಮುಖ ಚಿಕ್ಕಮಗಳೂರು ನಗರ ಉಪಸ್ಥಿತರಿದ್ದರು.
ಇದನ್ನೂ ಓದಿ: ಕಾರ್ಮಿಕರ ಗಮನಕ್ಕೆ; ಕಾರ್ಮಿಕರ ಸಮಸ್ಯೆಗೆ ಇಂಡಿಯಾ ಲೇಬರ್ ಲೈನ್ ಪರಿಹಾರ; ಏನಿದು? ಇಲ್ಲಿದೆ ನೋಡಿ












