ಜಯಪುರ: ಅಪಾಯಕಾರಿ ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡಿ: ಟಿ ಡಿ ರಾಜೇಗೌಡ

ಜಯಪುರ: (ನ್ಯೂಸ್ ಮಲ್ನಾಡ್ ವರದಿ) ರಸ್ತೆ, ಶಾಲೆ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳ ಹಾಗೂ ಮನೆಗಳ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಅರಣ್ಯ ಇಲಾಖೆ ಅನುಮತಿ ನೀಡಬೇಕು ಎಂದು ಶಾಸಕ ಟಿ ಡಿ ರಾಜೇಗೌಡ ಹೇಳಿದರು.


ಇದನ್ನೂ ಓದಿ: 60 ಪರ್ಸೆಂಟೇಜ್ ತೆಗೆದ ವಿದ್ಯಾರ್ಥಿಗಳಿಗೆ 50,000 ಸ್ಕಾಲರ್‌ ಶಿಪ್; ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


ಭಾನುವಾರ ಮರ ಬಿದ್ದು ಮೃತ ಪಟ್ಟ ಶಿಡ್ಲೆಮನೆಯ ರತ್ನಾಕರ ರವರ ಕುಟುಂಬಸ್ಥರನ್ನು, ಜಯಪುರದ ಸಾರ್ವಜನಿಕ ಅರೋಗ್ಯ ಕೇಂದ್ರದಲ್ಲಿ ಭೇಟಿಯಾಗಿ ಬಳಿಕ ಮಾತನಾಡಿದ ಅವರು, ಸಾರ್ವಜನಿಕ ಸ್ಥಳ ಹಾಗೂ ಮನೆಗಳ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಅನುಮತಿ ಕೋರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿರುವ ಪ್ರಕರಣಗಳನ್ನು ಕೂಡಲೇ ಪರಿಶೀಲಿಸಿ ಅರಣ್ಯ ಅಧಿಕಾರಿಗಳು ಅನುಮತಿ ನೀಡಬೇಕು, ಅನುಮತಿ ನೀಡದೆ ಮರಗಳು ಬಿದ್ದು ಯಾವುದೇ ಪ್ರಾಣ ಹನಿಯಾದರೆ ಅದಕ್ಕೆ ಅರಣ್ಯ ಇಲಾಖೆಯೇ ಹೊಣೆಯಾಗಿದ್ದು, ಅಂಥವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದರು.


ಇದನ್ನೂ ಓದಿ: ಆಸ್ತಿ ಖರೀದಿ, ಮಾರಾಟಗಾರರಿಗೆ ಭರ್ಜರಿ ಸುದ್ದಿ; ಏನದು? ಇಲ್ಲಿದೆ ನೋಡಿ


ಮರ ಬಿದ್ದು ಅಟೋ ಚಾಲಕ ಸವಾಗಿದ್ದು, ಸರ್ಕಾರದಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂಗಳ ಪರಿಹಾರ ಧನವನ್ನು ನೀಡಲಾಗುತ್ತದೆ. ಆದರೆ ಹೋದ ಜೀವವನ್ನು ಮರಳಿ ತರಲಾಗದು. ಹಾಗಾಗಿ ಸಂಬಂಧಪಟ್ಟ ಇಲಾಖೆಗಳು ಗಮನವಹಿಸಿ ಅಪಾಯಕಾರಿ ಮರಗಳ ತೆರವಿಗೆ ಗಮನ ಹರಿಸಬೇಕು. ಕೂಡಲೇ ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ತಿಳಿಸಿದ್ದು, ವಿನಾಕಾರಣ ಅಪಾಯಕಾರಿ ಮರಗಳ ತೆರವಿಗೆ ಅನುಮತಿ ನೀಡದೆ ಸಾರ್ವಜನಿಕರಿಗೆ ತೊಂದರೆಯಾದರೆ ಅಂತಹ ಅಧಿಕಾರಿಗಳನ್ನೇ ಪ್ರಕರಣದ ಹೊಣೆಗಾರರನ್ನಾಗಿ ಮಾಡಿ ಪೋಲೀಸರ ಮೂಲಕ ಪ್ರಕರಣ ದಾಖಲು ಮಾಡಲಿದ್ದೇವೆ. ಈ ವಿಚಾರದಲ್ಲಿ ಅರಣ್ಯಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದು ಹೇಳಿದರು.


ಇದನ್ನೂ ಓದಿ: ರಾಜ್ಯದ ರೈತರಿಗೆ ಮತ್ತೊಂದು ಗುಡ್ ನ್ಯೂಸ್; ವಿವಿಧ ಯೋಜನೆಯಲ್ಲಿ ಶೇ.90ರಷ್ಟು ಸಹಾಯಧನ


ಶೃಂಗೇರಿಯ 100 ಬೆಡ್ಡಿನ ಆಸ್ಪತ್ರೆ ಮಂಜೂರಾತಿಗೆ ನೀಡಿದ್ದ ಮನವಿ ವಜಾ!:
ಶೃಂಗೇರಿಯಲ್ಲಿ 100 ಬೆಡ್ಡಿನ ಆಸ್ಪತ್ರೆಗೆ ಸರ್ಕಾರ ಸುಮಾರು 37 ಕೋಟಿ ಹಣ ಇರಿಸಿದ್ದು, ಆಸ್ಪತ್ರೆ ನಿರ್ಮಾಣ ಮಾಡಲು ಗುರುತಿಸಿದ ಜಾಗಕ್ಕೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡದೇ, ಮಂಜೂರಾತಿಗೆ ನೀಡಿದ್ದ ನಮ್ ಮನವಿಯನ್ನು ವಜಾಮಾಡಿದೆ. ಕೇಂದ್ರ ಅರಣ್ಯ ಇಲಾಖೆಯ ಈ ಕ್ರಮ ಖಂಡನೀಯವಾಗಿದ್ದು, ಕಂದಾಯ ಇಲಾಖೆಯ ಬೇರೊಂದು ಜಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.