ಖಾಂಡ್ಯ: (ನ್ಯೂಸ್ ಮಲ್ನಾಡ್ ವರದಿ) ಭದ್ರಾ ಅಭಯಾರಣ್ಯದಲ್ಲಿ ಭಾರೀ ಪ್ರಮಾಣದಲ್ಲಿ ಬೀಟೆ ಮರ ಕದ್ದಿರುವ ಪ್ರಕರಣ ನಡೆದಿದೆ.
ಇದನ್ನೂ ಓದಿ: ಈ ರೈತರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 10 ಸಾವಿರ; ಅರ್ಜಿ ಸಲ್ಲಿಕೆ ಹೇಗೆ? ಅರ್ಹತೆ ಏನಿರಬೇಕು? ಇಲ್ಲಿದೆ ಡಿಟೈಲ್ಸ್

ಸ್ಥಳೀಯ ಮೂವರು ಕಿಂಗ್ ಪಿನ್ ಗಳು ಇದರಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದ್ದು, ದಟ್ಟ ಕಾಡಾದ ಭದ್ರಾ ಅಭಯಾರಣ್ಯದಲ್ಲಿ ರೊಸ್ ವುಡ್ ಕಡಿತಲೆ ಮಾಡಿ ಕೊಂಡೊಯ್ಯುವಾಗ ಅರಣ್ಯ ಇಲಾಖೆ ದಾಳಿ ಮಾಡಿ ಮರವನ್ನು ವಶಪಡಿಸಿಕೊಂಡಿದೆ, ಜೊತೆಗೆ ಟ್ರಾಕ್ಟರ್ ನ ಟ್ರಾಲಿಯನ್ನು ಸಹ ವಶಪಡಿಸಿಕೊಂಡಿದ್ದಾರೆ. ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದು ಅರಣ್ಯ ಇಲಾಖೆ ಮರಗಳ್ಳರ ಹುಡುಕಾಟದಲ್ಲಿ ತೊಡಗಿದೆ. ಅಕ್ರಮಕ್ಕೆ ಬಳಸುತ್ತಿದ್ದ ಟ್ರಾಕ್ಟರ್ ಇಂಜಿನ್ ಗಾಗಿಯೂ ಹುಡುಕಾಟ ನಡೆಸುತ್ತಿದ್ದಾರೆ. ಒಟ್ಟಾರೆ ಸುಮಾರು 70 ಚದರ ಮರ ಕಳ್ಳತನ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ವಾಹನ ಸವಾರರ ಗಮನಕ್ಕೆ; ಜೂನ್ 01 ರಿಂದ ಹೊಸ ಸಂಚಾರ ನಿಯಮ ಜಾರಿ
ಭದ್ರಾ ಅಭಯಾರಣ್ಯದಲ್ಲಿ ಈ ಹಿಂದಿನಿಂದಲೂ ನೂರಾರು ಬೆಲೆಬಾಳುವ ಮರಗಳನ್ನು ಕುಡಿಯುತ್ತಿರುವ ಕುರಿತು ಆರೋಪ ಕೇಳಿಬಂದಿತ್ತು. ಈ ಗ್ಯಾಂಗ್ ನ ಜಾಡು ಹಿಡಿದಲ್ಲಿ ಸಾಕಷ್ಟು ಅಕ್ರಮಗಳು ಹೊರಬರಲಿದೆ .
ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು, ಸಧ್ಯ ತನಿಖಾ ಹಂತದಲ್ಲಿದ್ದು ಪ್ರಕರಣವನ್ನು ಬೇಧಿಸಿದ ನಂತರ ಸಂಪೂರ್ಣ ಮಾಹಿತಿ ನೀಡುವುದಾಗಿ ತಿಳಿಸಿದರು.
ಕಡೂರು: ಕೋರ್ಟ್ ಆವರಣದಲ್ಲೇ ಯುವಕ ಆತ್ಮಹತ್ಯೆಗೆ ಯತ್ನ!
ಕಡೂರು: (ನ್ಯೂಸ್ ಮಲ್ನಾಡ್ ವರದಿ) ಕೋರ್ಟ್ ಆವರಣದಲ್ಲೇ ಯುವಕ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿಕ್ಕಮಗಳೂರಿನ ಕಡೂರಿನಲ್ಲಿ ವರದಿಯಾಗಿದೆ.
ಕಡೂರು ಕೋರ್ಟ್ ಆವರಣದಲ್ಲಿ ಈ ಘಟನೆ ನಡೆದಿದೆ. ನ್ಯಾಯ ಸಿಗದಿದ್ದಕ್ಕೆ ಮನನೊಂದ ಯುವಕ ಕೋರ್ಟ್ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮಲ್ಲಿಕಾರ್ಜುನ ಎಂಬುವವರು ಜಮೀನು ವಿವಾದವಾಗಿ ಕೋರ್ಟ್ ಗೆ ಬಂದಿದ್ದರು. ತಂದೆ ಮಾಡಿದ ಸಾಲದ ಸಲುವಾಗಿ, ಜಮೀನು ತಮಗೆ ಸಿಗಲೆಂದು ನ್ಯಾಯ ಕೇಳಲು ಕೋರ್ಟ್ ಗೆ ಬಂದಿದ್ದರು. ಆದರೆ ನ್ಯಾಯ ಸಿಗದ ಹಿನ್ನೆಲೆ ಮನನೊಂದು ವಿಡಿಯೋ ಮಾಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಹಾಸನದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.












