ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಪಟ್ಟಣದ ಚಪ್ಪರದ ಆಂಜನೇಯ ಸಭಾಂಗಣದಲ್ಲಿ ನಡೆದ ಶೃಂಗೇರಿ ಮಂಡಲದ ಕಾರ್ಯಕರ್ತರ ಸಭೆಯಲ್ಲಿ ಡಿ.ಎನ್.ಜೀವರಾಜ್ ರವರು ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರುಗಳಿಗೆ ಅಭಿನಂದನೆಗಳನ್ನು ತಿಳಿಸಿದರು.
ಇದನ್ನೂ ಓದಿ; ನಿಮ್ಮ ಬಳಿ ಪಿಂಕ್ ನೋಟುಗಳಿದ್ದರೆ ಬದಲಿಸಿಕೊಳ್ಳಿ; 2000 ನೋಟುಗಳ ವಿನಿಮಯ ಅವಧಿ ಮತ್ತೆ ವಿಸ್ತರಣೆ

ಈ ವೇಳೆ ಶೃಂಗೇರಿ ನೂರು ಬೆಡ್ ಆಸ್ಪತ್ರೆ ಹಾಗೂ ಎಲೆಚುಕ್ಕೆ ರೋಗಕ್ಕೆ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ ಹಣ ಮೀಸಲು ಇಡದಿರುವುದರ ಬಗ್ಗೆ, ರೈತರ ಮೇಲೆ ಅಧಿಕಾರಿಗಳ ದಬ್ಬಾಳಿಕೆ, ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಮುಖಂಡರುಗಳ ದಬ್ಬಾಳಿಕೆ, ಕಾಂಗ್ರೆಸ್ ಕಾರ್ಯಕರ್ತರುಗಳೇ ಮಾಡುತ್ತಿರುವ ವರ್ಗಾವಣೆ ದಂದೆ ಆರೋಪ, ಅಭಿವೃದ್ಧಿಗೆ ಹಣ ಬಿಡುಗಡೆ ವಿಚಾರದಲ್ಲಿ ಶಾಸಕರ ನಿರ್ಲಕ್ಷತನಗಳ ಬಗ್ಗೆ ಚರ್ಚೆ ಮಾಡಿದ್ದರು.
ಇದನ್ನೂ ಓದಿ; ತಿಂಗಳ ಮೊದಲ ದಿನವೇ ಬ್ಯಾಡ್ ನ್ಯೂಸ್; ಸಿಲಿಂಡರ್ ಬೆಲೆ ಮತ್ತೆ ಹೆಚ್ಚಳ
ಇಂದಿರಾಗಾಂಧಿ ಪ್ರಧಾನಿಯಾದಗಲು, ಸೋನಿಯಾ ಗಾಂಧಿ ಸಂಸದೀಯ ಮಂಡಳಿ ಅಧ್ಯಕ್ಷರಾಗಿದ್ದಾಗಲು ಹಾಗೂ ಸುಮಾರು 60 ವರ್ಷ ದೇಶವನ್ನ ಆಳಿದ ಕಾಂಗ್ರೆಸ್ ಮಹಿಳಾ ಮೀಸಲಾತಿ ಜಾರಿ ಮಾಡದಿರುವುದರ ಬಗ್ಗೆ ಆಕ್ಷೇಪ ಹೊರಹಾಕಿ, ಮಹಿಳಾ ಮೀಸಲಾತಿಯನ್ನ ಜಾರಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳನ್ನ ತಿಳಿಸಿ, ಮೀಸಲಾತಿ ಬಗ್ಗೆ ಜೀವರಾಜ್ ಅವರು ವಿವರಿಸಿದರು.
2024 ಕ್ಕೆ ಕಮಲದ ಹೂವೇ ಬಿಜೆಪಿ ಅಭ್ಯರ್ಥಿ, ಕಮಲ ಹೂವಿನ ಗೆಲುವಿಗೆ ಬಿಜೆಪಿ ಕಾರ್ಯಕರ್ತರು ಶ್ರಮಿಸಬೇಕು, ಮೋದಿ ಅವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.
ಚಿಕ್ಕಮಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಆಟೋ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಚಾಲಕನ ನಿಯಂತ್ರಣ ತಪ್ಪಿ ಆಟೋವೊಂದು ಪಲ್ಟಿ ಹೊಡೆದು ಕಂದಕಕ್ಕೆ ಬಿದ್ದಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಕೊಟ್ಟಿಗೆಹಾರದ ಅತ್ತಿಗೆರೆ ಸಮೀಪ ನಡೆದಿದ್ದು, ಇಬ್ಬರಿಗೆ ತೀವ್ರ ಪೆಟ್ಟಾಗಿದೆ.
ಜಾವಾಗಲ್ ನಿಂದ ಬೆಳ್ತಂಗಡಿಗೆ ಬರುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ ಕೊಟ್ಟಿಗೆಹಾರ ದ ಅತ್ತಿಗೆರೆ ಸಮೀಪ ಈ ಅಪಘಾತ ನಡೆದಿದೆ. ಆಟೋದಲಿದ್ದ ಇಬ್ಬರಿಗೂ ತೀವ್ರ ಪೆಟ್ಟಾಗಿದ್ದು, ಬೆಳ್ತಂಗಡಿ ತಾಲೂಕಿನ ಆಟೋ ಚಾಲಕ ನಜೀರ್‌ನ ಸ್ಥಿತಿ ಗಂಭೀರವಾಗಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












