ಕಾಣೆಯಾಗಿರುವ ನೂರು ಬೆಡ್ ಆಸ್ಪತ್ರೆ ಜಾಗ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ

ಕಾಣೆಯಾಗಿರುವ ನೂರು ಬೆಡ್ ಆಸ್ಪತ್ರೆ ಜಾಗ ಹುಡುಕಿ ಕೊಟ್ಟವರಿಗೆ ಸೂಕ್ತ ಬಹುಮಾನ

2007ನೇ ಇಸವಿಯಲ್ಲಿ ಆದೇಶವಾಗಿ, ನಂತರ 3 ಬಜೆಟ್ ನಲ್ಲಿ ಘೋಷಣೆ ಆಗಿರುವ, 27 ಕೋಟಿ ಅನುದಾನ ಮೀಸಲಿಟ್ಟಿದ್ದ ಶೃಂಗೇರಿಯ ನೂರು ಬೆಡ್ ಆಸ್ಪತ್ರೆ ಶೃಂಗೇರಿಯಿಂದ ಕಾಣೆಯಾಗಿದೆ, ಹುಡುಕಿಕೊಟ್ಟವರಿಗೆ ಸರ್ಕಾರದ ವತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು ಎಂಬ ಬರಹ ಹೊಂದಿರುವ ಬ್ಯಾನರ್ ಒಂದಾದರೆ


ಇದನ್ನೂ ಓದಿ: ಕರ್ನಾಟಕದಲ್ಲಿ ರೇಷನ್‌ ಕಾರ್ಡ್‌ ಮತ್ತೆ ಪರಿಷ್ಕರಣೆ!; ಅನರ್ಹರಿಗೆ ರದ್ದಾಗುತ್ತಾ?


ಪ್ರವಾಸಿಗರೇ ಎಚ್ಚರ : ಭರವಸೆ ಶೂರರ ಆಸ್ಪತ್ರೆ ಇನ್ನೂ ಆಗಿಲ್ಲ:
ಶೃಂಗೇರಿಗೆ ಬರುವ ಪ್ರವಾಸಿಗರೇ ನಿಧಾನವಾಗಿ ಎಚ್ಚರಿಕೆಯಿಂದ ವಾಹನ ಚಲಾಯಿಸಿ
ಶೃಂಗೇರಿಯಲ್ಲಿ ಭರವಸೆ ಶೂರರ ಸುಸಜ್ಜಿತ ಆಸ್ಪತ್ರೆ ಇನ್ನೂ ಆಗಿಲ್ಲ
ಮೂಳೆ ಮುರಿದರೆ ಡಾಕ್ಟರ್ ಇಲ್ಲ !
ಮಕ್ಕಳ ಡಾಕ್ಟರ್ ಇಲ್ವೇ ಇಲ್ಲ !
ಡೆಲಿವರಿ ಡಾಕ್ಟರ್ ಕಾಣ್ತಾ ಇಲ್ಲ !
ಜನಪ್ರತಿನಿಧಿಗಳು ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ !
ನಿಮ್ಮ ಬದುಕು ನಿಮ್ಮ ಕೈಯಲ್ಲಿ!

ಎಂಬ ಬರಹ ಹೊಂದಿರುವ ಬ್ಯಾನರ್ ಮತ್ತೊಂದು


ಇದನ್ನೂ ಓದಿ: ಅಡುಗೆಮನೆಯಲ್ಲಿ ಈ 2 ಪಾತ್ರೆಗಳನ್ನ ಉಲ್ಟಾ ಇಡಬೇಡಿ!; ಲಕ್ಷ್ಮಿ ಮುನಿಸಿಗೆ ನೀವು ಬಡವರಾಗ್ತೀರಿ!


ಇನ್ನು ಶೃಂಗೇರಿ ತಾಲೂಕು ಆಸ್ಪತ್ರೆಗೆ ಪ್ರಸೂತಿ ತಜ್ನರು, ಮೂಳೆ ತಜ್ಞರು ಹಾಗೂ ಮಕ್ಕಳ ತಜ್ಞರು ಬೇಕಾಗಿದ್ದು, ಯಾರಾದರೂ ಕರ್ತವ್ಯ ನಿರ್ವಹಿಸಲು ಇಚ್ಚಿಸುವವರು ಡಿಎಚ್ಓ ಅಥವಾ ಸರ್ಕಾರವನ್ನು ಸಂಪರ್ಕಿಸಿ. ಏಕೆಂದರೆ ಬರಲು ಒಪ್ಪಿಕೊಂಡಲ್ಲಿ ಮಾತ್ರ ನೇಮಿಸುತ್ತಾರಂತೆ! ಎಂಬ ಬರಹ ಮತ್ತೊಂದೆಡೆ.

ಹೀಗೆ ಅಲ್ಲಲ್ಲಿ ಬ್ಯಾನರ್ ಅಳವಡಿಸಿ ಶೃಂಗೇರಿ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಮತ್ತೆ ಹೋರಾಟವನ್ನು ಪ್ರಾರಂಭಿಸಿದೆ.


ಇದನ್ನೂ ಓದಿ: ರೈಲ್ವೆ ಇಲಾಖೆಯಲ್ಲಿ 1003 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ; 15,000 ಸಂಬಳ


ಈ ಹಿಂದೆ ನಿರಂತರ ಚಳುವಳಿ, ಶೃಂಗೇರಿ ಬಂದ್, ಅಹೋರಾತ್ರಿ ಧರಣಿ ಸೇರಿ ತೀವ್ರ ಸ್ವರೂಪದ ಹೋರಾಟದ ನಂತರ ಬೇಡಿಕೆಗೆ ಮಣಿದು ಆಸ್ಪತ್ರೆಗೆ ಅನುಮೋದನೆ ದೊರಕಿ ಬಜೆಟ್ ನಲ್ಲಿ ಸಹ ಅನುದಾನ ಇಡಲಾಗಿತ್ತು, ಆದರೆ ಜಾಗ ಮಂಜೂರಾತಿ ಪ್ರಕ್ರಿಯೆ ತೊಂದರೆಯಿಂದ ಇನ್ನೂ ಆಸ್ಪತ್ರೆ ಪ್ರಾರಂಭವಾಗಿಲ್ಲ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.