ಬಾಳೆಹೊನ್ನೂರು; (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಮಲೆನಾಡಿನಲ್ಲಿ ರೈತರು ಎದುರಿಸುತ್ತಿರುವ ವಿವಿಧ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಅರಣ್ಯ ಹಾಗೂ ಪರಿಸರ ಸಚಿವ ಈಶ್ವರ್ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ ಜೆ ಜಾರ್ಜ್ ಅವರಿಗೆ ಮನವಿ ಸಲ್ಲಿಕೆ ಮಾಡಲಾಗಿದೆ
ಇದನ್ನೂ ಓದಿ; ರಾಜ್ಯದ 1 ರಿಂದ 10ನೇ ತರಗತಿ ಮಕ್ಕಳಿಗೆ ಗುಡ್ ನ್ಯೂಸ್; ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ!

ಅರಣ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಏನಿದೆ?:
* ರೈತರ ಸಾಗುವಳಿ ಭೂಮಿ ಹಾಗೂ ಕಂದಾಯ ಭೂಮಿ ತೆರವು ಕಾರ್ಯಾಚರಣೆ ಸ್ಥಗಿತ ಮಾಡಬೇಕು. ಮಾಡುವಂತೆ ಲಿಖಿತ ಆದೇಶ ಮಾಡಬೇಕು. ಏಕೆಂದರೆ ಜನ ಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ಭೂಹಂಚಿಕೆ ಆಗಿಲ್ಲ, ಆದುದರಿಂದ ತಕ್ಷಣಕ್ಕೆ ತೆರವು ವಿಚಾರವನ್ನು ಪುನರ್ಪರಿಶೀಲನೆ ಮಾಡಬೇಕು.
* ಸೆಕ್ಷನ್ 4, ಡೀಮ್ಡ್ ಮತ್ತು ಸೊಪ್ಪಿನಬೆಟ್ಟ ಭೂಮಿ ಕುರಿತಾದ ಸಮಸ್ಯೆಗಳಿಗೆ ವಿಶೇಷ ಕಾಯ್ದೆ ಜಾರಿಗೊಳಿಸಿ ಅಲ್ಲಿ ಸಾಗುವಳಿ ಮಾಡಿಕೊಂಡ ರೈತರಿಗೆ ಹಕ್ಕುಪತ್ರ ನೀಡಬೇಕು. ಯಾವುದೇ ಕಾರಣಕ್ಕೂ ಈಗ ಸೆಕ್ಷನ್ 4 ಆಗಿರುವ ಪ್ರದೇಶವನ್ನು ಸೆಕ್ಷನ್ 17 ಮಾಡಬಾರದು.
* ಪಾರಂಪರಿಕ ಅರಣ್ಯ ಹಕ್ಕು, 50, 53, 57, 94ಸಿ, 94ಸಿಸಿ ಅಡಿಯಲ್ಲಿ ಈಗಾಗಲೇ ಅರ್ಜಿಗಳನ್ನು ಸಲ್ಲಿಸಿದವರಿಗೆ ಆರು ತಿಂಗಳ ಒಳಗೆ ಹಕ್ಕುಪತ್ರ ನೀಡಬೇಕು.
* ಕಸ್ತೂರಿ ರಂಗನ್ ವರದಿ ಪುನರ್ ಪರಿಶೀಲನೆಗೆ ಒಳಪಡಿಸಬೇಕು. ತಳ ಮಟ್ಟದ ಅಧ್ಯಯನ ಮತ್ತು ಸಂವಾದ ನಡೆಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಇದರಲ್ಲಿ ಸೇರಿರುವ ಜನವಸತಿ ಪ್ರದೇಶ ಹಾಗು ಶಾಲೆ, ದೇವಸ್ಥಾನ, ಮಠಮಂದಿರಗಳ ಕೈಬಿಡುವಂತೆ ರಾಜ್ಯ ಸರ್ಕಾರ ಆಗ್ರಹ ಮಾಡಬೇಕು.
* ಮಲೆನಾಡಿನ ರೈತರು ಹಾಗೂ ನಾಗರೀಕರ ರಕ್ಷಣೆಗೆ ಪಶ್ಚಿಮ ಘಟ್ಟದ ವಾಸಿಗಳಿಗಾಗಿ ವಿಶೇಷ ಕಾಯ್ದೆ ರೂಪಿಸಬೇಕು. ಮಲೆನಾಡನ್ನು ವಿಶೇಷ ಪ್ರಾತಿನಿಧಿಕ ವಲಯ ಎಂದು ಘೋಷಣೆ ಮಾಡಬೇಕು. ಅದಕ್ಕಾಗಿ ಮಲೆನಾಡಿನ ರೈತರು, ಜನಪ್ರತಿನಿಧಿಗಳು, ತಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು.
* ಆನೆ, ಕಾಡುಕೋಣ, ಮಂಗ, ನವಿಲು, ಅಳಿಲು ಮತ್ತಿತರ ವನ್ಯಜೀವಿಗಳ ಹಾವಳಿ ವಿಪರೀತವಾಗಿದ್ದು, ರೈತರು ತಾವು ಬೆಳೆದ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಹಾಗಾಗಿ ಇದರ ತಡೆಗೆ ಕಾರ್ಯ ಯೋಜನೆ ಮಾಡಬೇಕು. ಆನೆ, ಕಾಡುಕೋಣ ಹಾವಳಿ ತಡೆಗಟ್ಟಲು ಅಭಯಾರಣ್ಯದ ಗಡಿಭಾಗದಲ್ಲಿ ರೈಲ್ವೇ ಕಂಬಿಯ ಬೇಲಿ ನಿರ್ಮಾಣ ತಕ್ಷಣ ಮಾಡಬೇಕು. ವನ್ಯಜೀವಿಗಳ ದಾಳಿಗೆ ಹಾನಿಯಾದ ಬೆಳೆಗೆ ವೈಜ್ಞಾನಿಕ ಬೆಲೆ ನಿರ್ಣಯ ಮಾಡಬೇಕು.
* ಮಲೆನಾಡಿನಲ್ಲಿ ಸೆಕ್ಷನ್ 4 ರ ಅಡಿಯಲ್ಲಿ ಗುರುತು ಮಾಡಿರುವ ಪ್ರದೇಶವನ್ನು ಕೈಬಿಡಬೇಕು. ಇಲ್ಲವೇ ಮರುಪರಿಶೀಲನೆ ಮಾಡಬೇಕು ಮಾಡುವಾಗ ಸ್ಥಳೀಯ ಜನರ ಎದುರು ಸರ್ವೆ ಮಾಡಬೇಕು.
ಹಿಂದೆ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾವಣೆ ಮಾಡಿರುವ ಭೂಮಿಯನ್ನು ರೈತರಿಗೆ ಮನೆ ಕಟ್ಟಿಕೊಳ್ಳಲು, ಕೃಷಿ ಮಾಡಿಕೊಳ್ಳಲು ಅವಕಾಶ ಮಾಡಿಕೊಳ್ಳಬೇಕು. ಅದಕ್ಕೆ ಸೂಕ್ತ ಆದೇಶ ಮಾಡಬೇಕು.
ಇದನ್ನೂ ಓದಿ; ಅಂದು ಚಿಕ್ಕಮಗಳೂರು ಎಸಿ, ಇಂದು ಮಠದ ಸ್ವಾಮೀಜಿ!
* ಮಲೆನಾಡಿಗೆ ಸೂಕ್ತ ಪ್ರವಾಸ ನೀತಿ ಜಾರಿಗೆ ತರಬೇಕು. ಮೋಜು ಮಸ್ತಿಗೆ ಬರುವರಿಗೆ ಕಡಿವಾಣ ಹಾಕಬೇಕು.
* ವಲಸೆ ನೀತಿ ಜಾರಿಮಾಡಬೇಕು..ಇಲ್ಲಿನ ನಿವಾಸಿಗಳಿಗೆ ಮಾತ್ರ ಮನೆಕಟ್ಟಲು, ಭೂಮಿಕೊಳ್ಳಲು ಕೃಷಿಮಾಡಲು ಅವಕಾಶ ಮಾಡಬೇಕು. ಹೊರ ರಾಜ್ಯದ ಕಾರ್ಮಿಕರ ಆಗಮನಕ್ಕೆ ಕಟ್ಟುನಿಟ್ಟಿನ ನೀತಿ ನಿಯಮ ರಚನೆ ಮಾಡಬೇಕು,
* ಹಳದಿ ರೋಗ ಕೊಳೆ ರೋಗಕ್ಕೆ ಪರಿಹಾರ ಕೊಡುವ ಪ್ರಾಮಾಣಿಕ ಪ್ರಯತ್ನ ಆಗಬೇಕು, ಅವರಿಗೆ ಸೂಕ್ತ ಜಾಗ ನೀಡಬೇಕು. ವೈಜ್ಞಾನಿಕ ಅಧ್ಯಯನ ನಡೆಸಿ ಪರಿಹಾರ ನೀಡಬೇಕು. ಹಳದಿ ರೋಗ ಸಂಶೋಧನಾ ಕೇಂದ್ರಕ್ಕೆ ರೋಗ ಬಂದಿದೆ. ಕಾರ್ಯ ಉದ್ದೇಶದಿಂದ ಅದನ್ನು ಸರಿಯಾದ ವ್ಯವಸ್ಥೆ ಮಾಡಬೇಕು.
* ಈಗಾಗಲೇ ಅರಣ್ಯ ಇಲಾಖೆ ಗುರುತಿಸಿರುವ ಸೆಕ್ಷನ್ 4 ಜಾಗ ಡೀಮ್ಡ್ ಫಾರೆಸ್ಟ್, ಮೈನರ್ಫಾರೆಷ್ಟ್. ಗೋಮಾಳ, ಸೊಪ್ಪಿನ ಬೆಟ್ಟ ಆಗಿದೆ ಹಾಗಾಗಿ ಹೊಸದಾಗಿ ಸರ್ವೆ ಮಾಡಬೇಕೆಂದು ಮನವಿ ಸಲ್ಲಿಸಲಾಗಿದೆ.
ಇದನ್ನೂ ಓದಿ; ಆಸ್ತಿ ಮಾರಾಟ ಮತ್ತು ಖರೀದಿದಾರರಿಗೆ ಹೊಸ ರೂಲ್ಸ್; ಏನಿದೆ ಹೊಸ ರೂಲ್ಸ್? ಇಲ್ಲಿದೆ ನೋಡಿ
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ:
ಮಲೆನಾಡಿನ ಮುಖ್ಯ ಉದ್ಯೋಗ ಕೃಷಿ, ಕೃಷಿ ಅವಲಂಬಿತ ಉಪ ಕಸಬು ಮಾಡಿಕೊಂಡು ಬಂದಿದ್ದು, ಸರ್ಕಾರದ ಅರಣ್ಯ ಕಾನೂನುಗಳಿಂದ ರೈತ ತಾನು ಬದುಕುವುದಕ್ಕಾಗಿ ಮಾಡಿಕೊಂಡ ಕೃಷಿ ಭೂಮಿಯ ಮೇಲೆ ಸೆಕ್ಷನ್ 4 ಎನ್ನುವ ತೂಗುಗತ್ತಿ ತೂಗುತ್ತಿದೆ.
ಮಾನವನ ಅವಶ್ಯಕತೆಗೆ ಒಳಪಟ್ಟ ಶಾಲೆ, ದೇವಸ್ಥಾನ, ಮಸೀದಿ, ಚರ್ಚ್ ಆರೋಗ್ಯ ಇಲಾಖೆ, ಗ್ರಾಮ ಪಂಚಾಯತಿ ಕಟ್ಟಡಗಳು ಕೂಡ ಈಗ ಸಲ್ಲಿಸಿರುವ ಸೆಕ್ಷನ್ 4 ರ ಸರ್ವೆ ನಂಬರ್ ಗಳಲ್ಲಿ ಸೇರಿದೆ. ಜನ ಸಂಖ್ಯೆ ಏರಿದಂತೆ ಕೃಷಿ ಭೂಮಿ ಕೂಡ ದೊಡ್ಡದಾಗಿದೆ, ಆದರೆ, ಸಾಗುವಳಿ ಹಿಡುವಳಿ ಮಾತ್ರ ತುಂಡು ಭೂಮಿ ಆಗಿ ಸಿಕ್ಕಿದೆ.
ಇದಲ್ಲದೆ ಸತತವಾಗಿ ಭಾದಿಸಿಸುತ್ತಿರುವ ಹಳದಿ ರೋಗ ಹಾಗೂ ಕೊಳೆ ರೋಗದಿಂದ ಪಹಣಿ ಇರುವ ಭೂಮಿ ಅಲ್ಲಿ ಉತ್ಪತಿ ಕಡಿಮೆ ಆಗಿದೆ. ಹಾಗಾಗಿ ರೈತರು ಸಾಗುವಳಿ ಮಾಡುತ್ತಿರುವ ಹಾಗೂ ಅವರ ಬದುಕಿನ ಅವಶ್ಯಕತೆಗೆ ಪೂರಕವಾಗಿರುವ ಭೂಮಿಯನ್ನು ಸೆಕ್ಷನ್ 4 ರಿಂದ ಕೈಬಿಡಬೇಕು. ಅಥವಾ ಕುದ್ದು ಗ್ರಾಮಸ್ಥರ ಸಮ್ಮುಖದಲ್ಲಿ ಹೊಸದಾಗಿ ಸರ್ವೆ ಮಾಡುವಂತೆ ಮಾಡಬೇಕೆಂದು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಿಲಾಗಿದೆ.
ಇದನ್ನೂ ಓದಿ; ಪಿಎಂ ಆವಾಸ್ ಯೋಜನೆಗೆ ಅರ್ಹತೆ ಇದ್ದರೂ ಪ್ರಯೋಜನ ಸಿಕ್ತಿಲ್ವಾ…?; ಹಾಗಿದ್ರೆ ಜಸ್ಟ್ ಈ ರೀತಿ ಮಾಡಿ












