ನಾಗರಿಕ ಹಿತ ರಕ್ಷಣಾ ಸಮಿತಿ ಕಲ್ಲುಗುಡ್ಡೆ ಜಯಪುರ ಹೋಬಳಿ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾಕ್ಕೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಸಮಿತಿ ಬೆಂಬಲ ಸೂಚಿಸಿದೆ ಎಂದು ಎಂ ಎನ್ ನಾಗೇಶ್ ತಿಳಿಸಿದ್ದಾರೆ.
ಇದನ್ನೂ ಓದಿ; ಪಿಯುಸಿ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ ಶಿಪ್; ಅರ್ಜಿ ಸಲ್ಲಿಸಲು ಸಿಂಪಲ್ ಸ್ಟೆಪ್ ಇಲ್ಲಿದೆ ನೋಡಿ

ಮಲೆನಾಡನ್ನು ಭಾದಿಸುತ್ತಿರುವ ಒತ್ತುವರಿ ತೆರವು, ಕಸ್ತೂರಿ ರಂಗನ್ ವರದಿ, ಸೆಕ್ಷನ್ 4, ಸೆಕ್ಷನ್ 17 ರ 94ಸಿ, 94 ಸಿಸಿ, ಹಕ್ಕು ಪತ್ರ ನೀಡುವುದಕ್ಕೆ ಮೀನಮೇಶ, ಅತಿಯಾದ ಕಾಡು ಪ್ರಾಣಿ ಹಾವಳಿ ಹಾಗೂ ಇನ್ನೂ ಸ್ಪಷ್ಟ ಪಡಿಸದ ಆನೆ ಬಿಡಾರ ಹೀಗೆ ಮಲೆನಾಡಿಗೆ ಸಂಬಂದಿಸಿದ ಅನೇಕ ಸಮಸ್ಯೆಗಳ ಕುರಿತು ನಾಗರಿಕ ಹಿತ ರಕ್ಷಣಾ ಸಮಿತಿ ಕಲ್ಲುಗುಡ್ಡೆ ಜಯಪುರ ಹೋಬಳಿ ಹಮ್ಮಿಕೊಂಡಿರುವ ಜಾಥಾಕ್ಕೆ ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಸಮಿತಿ ಬೆಂಬಲ ಸೂಚಿಸಿದ್ದು. ಕ್ಷೇತ್ರದ ಎಲ್ಲಾ ನಾಗರಿಕರು ಕಾರ್ಮಿಕರು ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದ್ದಾರೆ.

ರೈತರ ಕಾರ್ಮಿಕರ ಪರವಾಗಿ ಕಾನೂನು ಬದ್ಧವಾಗಿ ಹೋರಾಟ ರೂಪಿಸುವ ಮಲೆನಾಡಿನ ಯಾವುದೇ ಹೋರಾಟಕ್ಕೂ ಸಮಿತಿ ಬೆಂಬಲ ನೀಡುತ್ತದೆ. ಹಾಗೆ ನವೆಂಬರ್ 11 ಮತ್ತು 12 ರಂದು ನಡೆಯುವ ರೈತ ಕಾರ್ಮಿಕ ಹೋರಾಟಕ್ಕೆ ನಾವು ಬೆಂಬಲ ನೀಡಿದ್ದು. ಕ್ಷೇತ್ರ ಸಮಿತಿಯ ಪರವಾಗಿ ಎಲ್ಲಾ ಕಡೆಯೂ ಪ್ರಚಾರ ನಡೆಸಿದ್ದೇವೆ.
ಇದನ್ನೂ ಓದಿ; ವಿದ್ಯಾರ್ಥಿಗಳ ಖಾತೆಗೆ 50,000 ಸ್ಕಾಲರ್ ಶಿಪ್; ಈ ಸ್ಟೆಪ್ ಫಾಲೋ ಮಾಡಿ ಅರ್ಜಿ ಸಲ್ಲಿಸಿ
ಕಲ್ಲುಗುಡ್ಡೆ ಭಾಗದ ಜನರ ಸಮಸ್ಯೆ ಕೇವಲ ಅಲ್ಲಿನ ಸಮಸ್ಯೆ ಮಾತ್ರ ಅಲ್ಲಾ ಎಲ್ಲಾ ಮಲೆನಾಡಿಗರ ಸಮಸ್ಯೆ ಹಾಗಾಗಿ ಮಲೆನಾಡಿನ ಎಲ್ಲಾ ನಾಗರಿಕರು, ಕಾರ್ಮಿಕರು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾಲ್ನಡಿಗೆ ಜಾಥಾವನ್ನು ಯಶಸ್ವಿ ಮಾಡಬೇಕು.
ಕಲ್ಲುಗುಡ್ಡೆ ಸಮಿತಿ ಈಗಾಗಲೇ ಯೋಜನ ಬದ್ಧವಾಗಿ ಕಾನೂನು ಬದ್ಧವಾಗಿ ಶಾಂತಿ ಸ್ವರೂಪದ ಹೋರಾಟ ಮಾಡಲು ಯೋಚಿಸಿದೆ. ಹೀಗಾಗಿ ನಾವು ಕೂಡ ಭಾಗವಹಿಸಿ ಮಲೆನಾಡಿಗರ ಮೇಲೆ ಅರಣ್ಯ ಇಲಾಖೆ, ಸರ್ಕಾರ, ನಕಲಿ ಪರಿಸರ ವಾದಿಗಳು ನಡೆಸುತ್ತಿರುವ ಅನ್ಯಾಯದ ಪಿತೂರಿಯ ವಿರುದ್ಧ ಹೋರಾಟ ಮಾಡಲು ಕೈ ಜೋಡಿಸಬೇಕು. ಇಲ್ಲಿನ ಮತ್ತು ಮಲೆನಾಡಿನ ಜನರ ಗೋಳು ಸರ್ಕಾರಕ್ಕೆ ತಲುಪಬೇಕು ಎಂದರೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬೇಕು ಎಂದು ಸಮಿತಿಯ ಕ್ಷೇತ್ರ ಅಧ್ಯಕ್ಷ ನಾಗೇಶ್ ಎಂ. ಎನ್ ತಿಳಿಸಿದರು.
ಇದನ್ನೂ ಓದಿ; ಆಧಾರ್ ಕಾರ್ಡ್ ಇದ್ದವರಿಗೆ ಹೊಸ ಆದೇಶ; ಏನದು? ಇಲ್ಲಿದೆ ನೋಡಿ












