ಎನ್. ಆರ್. ಪುರ: (ನ್ಯೂಸ್ ಮಲ್ನಾಡ್ ವರದಿ) 2023ರ ವಿಧಾನಸಭಾ ಚುನಾವಣೆ ವೇಳೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸದೇ ಇರುವ ಕುರಿತು ಪ್ರಶ್ನಿಸಿದಕ್ಕೆ ಪ್ರಶ್ನಿಸಿದವರ ವಿರುದ್ಧವೇ ದೂರು ನೀಡಿದ್ದಾರೆ ಎಂದು ನರಸಿಂಹರಾಜಪುರ ಬಿಜೆಪಿ ಯುವ ಮೋರ್ಚಾ ಆರೋಪಿಸಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಬೆಳೆಹಾನಿ ಪರಿಹಾರ ಹಣ ಬಿಡುಗಡೆ; ಎಷ್ಟು ಪರಿಹಾರ ಬಿಡುಗಡೆ?, ಇಲ್ಲಿದೆ ನೋಡಿ

ಏನಿದು ಆರೋಪ:
ಈ ಹಿಂದೆ 2023ರ ವಿಧಾನಸಭಾ ಚುನಾವಣ ಸಂದರ್ಭದಲ್ಲಿ ನರಸಿಂಹರಾಜಪುರ ಪಟ್ಟಣದಲ್ಲಿ 450ಕ್ಕೂ ಹೆಚ್ಚು ಕುಟುಂಬಗಳಿಗೆ ನಾಗರೊತ್ತಾನ ಯೋಜನೆ ಮಂಜೂರಾತಿ ಪತ್ರವನ್ನು ಹಂಚಿದ್ದು, ಈ ಮಂಜೂರಾತಿಯ ಪತ್ರಕ್ಕೆ ಶಾಸಕರು, ಜೂಬೇಧರವರ ಸಹಿ ಹಾಕಿ, ಹಂಚಿಕೆ ಮಾಡಿ ಪುನಃ ಶಾಸಕರು ಬಂದಲ್ಲಿ ಈ ಭರವಸೆ ಈಡೇರಿಸುತ್ತಾರೆ ಮತ ನೀಡಿ ಎಂದು ಹೇಳಿಕೊಂಡಿದ್ದರು. ಶಾಸಕರು ಪುನರಾಯ್ಕೆಯಾಗಿ, ಜುಬೇಧ ಅವರು ಮರು ಆಯ್ಕೆಯಾಗಿ ಬಂದರು ಇನ್ನು ಕೊಟ್ಟ ಭರವಸೆ ಈಡೇರಿಸಿಲ್ಲ. ಈ ಬಗ್ಗೆ ಜುಬೇಧರವರನ್ನ ಪ್ರಶ್ನಿಸಿದಕ್ಕೆ ಪ್ರಶ್ನಿಸಿದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇದನ್ನೂ ಓದಿ: ಶಾಲಾ ಶಿಕ್ಷಕರಿಗೆ ವರ್ಗಾವಣೆ ಬಗ್ಗೆ ಆದೇಶ; ಇಲ್ಲಿದೆ ನೋಡಿ ಡಿಟೈಲ್ಸ್
ಈ ಹಿಂದೆಯೂ ಕೂಡ ಕಸ ವಿಲೇವಾರಿ ಸಮಸ್ಯೆಯನ್ನು ಪ್ರಶ್ನಿಸಿದಕ್ಕೆ ದೂರು ನೀಡಿದ್ದಾರೆ. ತಮ್ಮನ್ನು ಯಾರು ಸಹ ಪ್ರಶ್ನಿಸಬಾರದು ಎಂಬ ಈ ಧೋರಣೆ ಸಾರ್ವಜನಿಕ ಜೀವನರಲ್ಲಿರುವವರಿಗೆ ಶೋಭೆ ತರುವುದಿಲ್ಲ. ತಮ್ಮ ವೈಫಲ್ಯವನ್ನು ಮುಚ್ಚಿಟುಕೊಳ್ಳಲು ಈ ರೀತಿಯ ದೂರು ನೀಡುತ್ತ ಹೆದರಿಸುವುದನ್ನು ಬಿಟ್ಟು ಕೊಟ್ಟಿರುವ ಭರವಸೆ ಈಡೇರಿಸಿ. ಪಟ್ಟಣ ಪಂಚಾಯಿತಿ ಕಾರ್ಯವೈಖರಿ ಸರಿ ಹೋಗದಿದ್ದಲ್ಲಿ ಪಟ್ಟಣ ಪಂಚಾಯತಿ ಎದುರು ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಯುವ ಮೋರ್ಚಾ ಎಚ್ಚರಿಸಿದೆ.
ಇದನ್ನೂ ಓದಿ: ರೈಲ್ವೆ ಇಲಾಖೆಯ 9900 ಹುದ್ದೆಗೆ ಅರ್ಜಿ ಆಹ್ವಾನ; SSLC, ITI ವಿದ್ಯಾರ್ಹತೆ – 19,900 ಸಂಬಳ












