ರಾಜಕಾರಣದಿಂದ ಪ್ರಜಾಪ್ರಭುತ್ವದ ಆಶಯವನ್ನು ಮಣ್ಣುಪಾಲು ಮಾಡುತ್ತಿರುವ ಪಕ್ಷಗಳನ್ನು ತಿರಸ್ಕರಿಸಿ: ರವಿಕೃಷ್ಣ ರೆಡ್ಡಿ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ವಂಶಪರಂಪರೆ ರಾಜಕಾರಣ ರಾಷ್ಟ್ರಕ್ಕೆ ಮಾರಕ. ಈಗಿರುವ ಬಹುಪಾಲು ರಾಜಕಾರಣಿಗಳು ಸಜ್ಜನ ಭ್ರಷ್ಟಾಚಾರ ರಹಿತ ರಾಜಕೀಯ ಮಾಡುತ್ತಿಲ್ಲ ಎಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್) ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ರವಿಕೃಷ್ಣ ರೆಡ್ಡಿ ದೂರಿದರು.

 

ಇದನ್ನೂ ಓದಿ; ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ

ಕರ್ನಾಟಕಕ್ಕಾಗಿ ನಾವು ಎಂಬ ಘೋಷ ವಾಕ್ಯದೊಂದಿಗೆ ರಾಜ್ಯದಾದ್ಯಂತ ಕೆ.ಆರ್‌.ಎಸ್ ಪಕ್ಷ ನಡೆಸುತ್ತಿರುವ ಬೈಕ್ ರ‍್ಯಾಲಿ ಶುಕ್ರವಾರ ನಗರಕ್ಕೆ ಆಗಮಿಸಿದ ಬಳಿಕ ಅಜಾದ್ ಪಾರ್ಕ್ ವೃತ್ತದಲ್ಲಿ ಸಭೆಯನ್ನು ಉದ್ದೇಶಿಸಿದ ಮಾತನಾಡಿದ ಅವರು, ಭ್ರಷ್ಟಾಚಾರದ ವಿರುದ್ಧ ಅಣ್ಣ ಹಾಜಾರೆ, ಎಸ್.ಆರ್.ಹಿರೇಮಠ, ಎಚ್.ಎಸ್.ದೊರೆಸ್ವಾಮಿ ಸೇರಿ ಹಲವರು ಹೋರಾಟ ನಡೆಸಿದ್ದರ ಫಲವಾಗಿ ಸಿದ್ದರಾಮಯ್ಯ ಮೊದಲ ಬಾರಿಗೆ 2013 ರಲ್ಲಿ ಮುಖ್ಯಮಂತ್ರಿಯಾದರು. ಬಳಿಕ ಅವರು ಲೋಕಾಯುಕ್ತ ಸಂಸ್ಥೆಯನ್ನೇ ನಾಶ ಮಾಡಿದ್ದರು.

ಇದನ್ನೂ ಓದಿ;HAL ಕಂಪನಿಯಲ್ಲಿದೆ ಬಂಪರ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಮೊದಲ ಬಾರಿಗೆ ಸಿ.ಟಿ.ರವಿ ಶಾಸಕರಾದಾಗ ಪ್ರಾಮಾಣಿಕ, ದೇಶಪ್ರೇಮಿ ಎಂದು ಭಾವಿಸಿದ್ದೆವು. ಜನಸಾಮಾನ್ಯರಿಗೆ ಅನುಕೂಲ ಆಗುವ ತಾಲ್ಲೂಕು ಕಚೇರಿ ಕಟ್ಟಡ 10 ವರ್ಷವಾದರೂ ಪೂರ್ಣವಾಗಲಿಲ್ಲ. ಇಲ್ಲಿಗೆ ಸಮೀಪದಲ್ಲೇ ಇರುವ ಸಿ.ಟಿ.ರವಿ ಅವರ ಬಂಗಲೆ ಬಹುಬೇಗನೆ ಎದ್ದು ನಿಂತಿತ್ತು. ಆಗ ಅವರು ಎಷ್ಟರ ಮಟ್ಟಿಗೆ ಪ್ರಮಾಣಿಕ ಎಂಬುದು ತಿಳಿಯಿತು ಎಂದು ಟೀಕಿಸಿದರು.

ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ

ಜಿಲ್ಲೆಯಲ್ಲಿ ವಂಶ ರಾಜಕಾರಣ ಇರಲಿಲ್ಲ. ಈಗ ಮೋಟಮ್ಮ ಅವರು ತಮ್ಮ ಮಗಳನ್ನು ಶಾಸಕಿಯನ್ನಾಗಿ ಮಾಡುವ ಮೂಲಕ ವಂಶ ರಾಜಕಾರಣವನ್ನು ಜಿಲ್ಲೆಗೆ ತಂದಿದ್ದಾರೆ. ರಾಜಕಾರಣದ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಮಣ್ಣುಪಾಲು ಮಾಡುತ್ತಿರುವ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ತಿರಸ್ಕರಿಸಬೇಕು ಎಂದು ಮನವಿ ಮಾಡಿದರು.

ಇನ್ನು ಕೆ.ಆರ್.ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ರಘು ಜಾಣಗೆರೆ ಮಾತನಾಡಿ, ಭ್ರಷ್ಟಾಚಾರ, ಸ್ವಜನಪಕ್ಷಪಾತದೊಂದಿಗೆ ನಿರಂತರ ದ್ರೋಹ ಮಾಡುತ್ತಿರುವ ಮೂರು ಪಕ್ಷಗಳನ್ನು ಜನ ತಿರಸ್ಕರಿಸಬೇಕು. ರಾಜ್ಯದ ಏಕೈಕ ಪ್ರಾಮಾಣಿಕ ಮತ್ತು ಪ್ರಾದೇಶಿಕ ಪಕ್ಷವಾದ ಕೆಆರ್‌ಎಸ್ ಬೆಂಬಲಿಸಬೇಕು ಎಂದರು.

ಮುಂದುವರಿದ ಗೋ ಬ್ಯಾಕ್‌ ಅಭಿಯಾನ: ಶೋಭಾ ವಿರುದ್ಧ 1 ಲಕ್ಷ ನೋಟಾ ವೋಟ್‌ ಎಚ್ಚರಿಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಾಲಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಶೋಭಕ್ಕ ಅಭಿಯಾನ ಮುಂದುವರೆದಿದೆ.

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದರೆ ಒಂದು ಲಕ್ಷ ನೋಟಾ ವೋಟ್ ಹಾಕಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ; ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತರಬೇತಿಗೆ ಅರ್ಜಿ ಆಹ್ವಾನ

ಕಳೆದ ಬಾರಿಗಿಂತ ಹೆಚ್ಚು ಮತಗಳಲ್ಲಿ ಗೆಲ್ಲುವುದು ಖಚಿತ ಎಂದು ಯಡಿಯೂರಪ್ಪ ಅವರು ಚಿಕ್ಕಮಗಳೂರಿನಲ್ಲಿ ಹೇಳಿ ಹೋದ ನಂತರ ಒಂದು ಲಕ್ಷ ನೋಟಾ ವೋಟ್ ಹಾಕಲಾಗುವುದು ಎಂದು ಹೇಳುವ ಮೂಲಕ ಅವರಿಗೆ ಒಂದು ಲಕ್ಷ ಮತಗಳು ಕಡಿಮೆಯಾಗಲಿದೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಮೋದಿ ಹೆಸರಿನಲ್ಲಿ ಗೆದ್ದು ಮೋದಿಯವರಿಗೆ ಕಳಂಕ ಆಗಿರುವ ಶೋಭಕ್ಕನ ವಿರುದ್ಧ ಸ್ವಚ್ಛ ಭಾರತ ಮಿಷನ್ ಪ್ರಾರಂಭ ಮಾಡಿರುವ ಸನಾತನಗಳು ನಾವು ಎಂದು ಸನಾತನ ಹಿಂದುತ್ವ ಫೇಸ್ ಬುಕ್ ಪೇಜ್ ನಲ್ಲಿ ಶೋಭಾ ಕರಂದ್ಲಾಜೆ ವಿರೋಧಿಗಳು ಹೇಳಿಕೊಂಡಿದ್ದಾರೆ. ಶೋಭಾ ಕರಂದ್ಲಾಜೆ ಮಾತ್ರ ಅಲ್ಲ, ಅವರೊಂದಿಗೆ ಗುರುತಿಸಿಕೊಂಡಿರುವ ಪಕ್ಷದ ಕಾರ್ಯಕರ್ತರ ವಿರುದ್ಧವೂ ಹರಿ ಹಾಯ್ದಿದ್ದಾರೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.