ಬೆಂಗಳೂರು/ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ ಮುಖಂಡ ಸುಧೀರ್ ಮುರೊಳ್ಳಿ ಅವರಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ.
ಇದನ್ನೂ ಓದಿ; ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ; ಈಗಲೇ ಅರ್ಜಿ ಸಲ್ಲಿಸಿ

ನಿಯೋಗದಲ್ಲಿ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ, ಕಿಮ್ಮನೆ ರತ್ನಾಕರ, ವಿನಯ್ ಕುಮಾರ್ ಸೊರಕೆ, ಕಾರ್ಕಳದ ಉದಯ್ ಕುಮಾರ್ ಶೆಟ್ಟಿ, ಉಡುಪಿಯ ರಮೇಶ್ ಕಾಂಚನ್, ಕುಂದಾಪುರದ ದಿನೇಶ್ ಹೆಗಡೆ, ಉಡುಪಿಯ ಎನ್‌ಎಸ್ ಯುಐ ಜಿಲ್ಲಾಧ್ಯಕ್ಷ ಸೌರವ್ ಬಲ್ಲಾಳ್, ಉಡುಪಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್, ಉಮಾ ಸೇರಿದಂತೆ 50 ಕ್ಕೂ ಹೆಚ್ಚು ಮಂದಿಯ ನಿಯೋಗ ಬೆಂಗಳೂರಿನ ಗೃಹಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

ಇದನ್ನೂ ಓದಿ; ಅಂಚೆ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆ!; ಜನರಿಂದ ಭರ್ಜರಿ ರೆಸ್ಪಾನ್ಸ್, ಏನಿದು ಯೋಜನೆ?
ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗಡೆ ಅವರು ಇತ್ತೀಚೆಗೆ ತಮ್ಮ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅಲ್ಲದೆ, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ವದಂತಿಗಳಿದ್ದು. ಹೆಗಡೆಯವರಿಗೆ ಟಿಕೆಟ್ ನೀಡಲು ಸ್ಥಳೀಯವಾಗಿ ವಿರೋಧ ವ್ಯಕ್ತವಾಗಿದೆ ಎಂದು ನಿಯೋಗ ಸಿಎಂ ಗಮನಕ್ಕೆ ತಂದಿತು. ಬಿಜೆಪಿಯಲ್ಲಿ ಲೋಕಸಭಾ ಚುನಾವಣೆ ಸಂಬಂಧ ಅಭ್ಯರ್ಥಿಗಳ ವಿಷಯವಾಗಿ ಒಂದಿಷ್ಟು ಗೊಂದಲಗಳಿದ್ದು, ಜಯಪ್ರಕಾಶ್ ಹೆಗಡೆಯವರು ಬಿಜೆಪಿ, ಕಾಂಗ್ರೆಸ್ ನಲ್ಲೂ ಸ್ಪರ್ಧಿಸುವುದಾಗಿ ಸುದ್ದಿ ಹರಡಿ ಗೊಂದಲ ಮೂಡುತ್ತಿದೆ. ಅವರನ್ನು ಸೇರಿಸಿಕೊಳ್ಳುವುದಾದರೆ ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು. ಆದರೆ ಲೋಕಸಭೆ ಚುನಾವಣೆಗೆ ಅಭ್ಯರ್ಥಿಯಾಗಿ ಮಾಡುವುದು ಸರಿಯಲ್ಲ. ಪಕ್ಷ ನಿಷ್ಠರಿಗೆ ಹಾಗೂ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ನಿಯೋಗವು ಸಿಎಂ ಅವರನ್ನು ಒತ್ತಾಯಿಸಿದರು.
ಇದನ್ನೂ ಓದಿ; ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್; ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ
ವಲಸಿಗ ನಾಯಕರಿಗೆ ಮಣೆ ಹಾಕಿದರೆ ಪಕ್ಷ ನಿಷ್ಠರು ವಿಶ್ವಾಸ ಕಳೆದುಕೊಳ್ಳುತ್ತಾರೆ. ಹೀಗಾಗಿ ಕಾಂಗ್ರೆಸ್, ಪಕ್ಷದ ಸಿದ್ಧಾಂತ, ವೈಚಾರಿಕತೆ ಹಾಗೂ ಕಾರ್ಯಕ್ರಮಗಳ ಮೇಲೆ ನಂಬಿಕೆ ಇಟ್ಟವರನ್ನು ಪರಿಗಣಿಸಬೇಕು ಎಂದು ನಿಯೋಗದ ಸ್ಥಳೀಯ ನಾಯಕರು ಮನವಿ ಮಾಡಿದ್ದಾರೆ.
ತಮ್ಮನ ಸಾವಿನ ಸೇಡಿಗೆ ಅಣ್ಣನ ಬರ್ಬರ ಹತ್ಯೆ: ಇಬ್ಬರು ಆರೋಪಿಗಳು ಅಂದರ್
ಇದನ್ನೂ ಓದಿ; ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ
ಏನಿದು ಘಟನೆ:
ಒಂದೂವರೆ ವರ್ಷದ ಹಿಂದೆ ಆಸ್ತಿ ಮತ್ತು ವೈಯಕ್ತಿಕ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ರಫಿಕ್ ಮರ್ಡರ್ ಮಾಡಿದ್ದನು. ಈ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ರಫಿಕ್ ಕೆಲವು ತಿಂಗಳ ಹಿಂದೆ ಬೇಲ್ ಮೇಲೆ ಹೊರ ಬಂದಿದ್ದನು. ಆಸ್ತಿ ವಿಚಾರ ಹಾಗೂ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿದ ದ್ವೇಷಕ್ಕೆ ಇನಾಯತ್, ರಫಿಕ್ ಜೀವ ತೆಗೆಯಲು ಪ್ಲ್ಯಾನ್ ಮಾಡಿಕೊಂಡಿದ್ದ. ಈ ಸಂಬಂಧ ಶಿವಮೊಗ್ಗಕ್ಕೆ ಶಾಪಿಂಗ್ ನೆಪದಲ್ಲಿ ಕರೆತಂದಿದ್ದರು. ಊರಿಗೆ ವಾಪಸ್ ಹೋಗುವಾಗ ತಮ್ಮ ಸಲೀಂ ಕೊಲೆ ಪ್ರಕರಣದ ಸೇಡಿಗಾಗಿ ಅಣ್ಣ ರಫಿಕ್ ನನ್ನು ತಮ್ಮ ಇನಾಯತ್ ಮತ್ತು ಅಕ್ಕನ ಮಗ ಸಮೀರ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ.
ಇದನ್ನೂ ಓದಿ;HAL ಕಂಪನಿಯಲ್ಲಿದೆ ಬಂಪರ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್
ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ತಂತಿಯಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಕೊನೆಗೆ ಆತನ ಮೇಲೆ ಕಾರ್ ಕೂಡ ಹತ್ತಿಸಿದ್ದಾರೆ. ಆತ ಮೃತಪಟ್ಟಿರುವುದು ಖಚಿತವಾದ ಬಳಿಕ ಇಬ್ಬರು ಕಾರ್ ನಲ್ಲಿ ಎಸ್ಕೇಪ್ ಆಗಿದ್ದರು. ಮಗನ ಸಾವಿನ ಸುದ್ದಿ ತಿಳಿದ ತಂದೆ ಆಸ್ತಿಯಾಗಿ ರಫಿಕ್ ತಮ್ಮ ಇನಾಯತ್ ಮತ್ತು ಮಗಳ ಮಗ ಸಮೀರ್ ಸೇರಿ ದೊಡ್ಡ ಮಗ ರಫಿಕ್ ನನ್ನು ಹತ್ಯೆ ಮಾಡಿದ್ದಾರೆ. ಇವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಮೃತನ ತಂದೆ ಮಹ್ಮದ್ ಗೌಸ್ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ
ಇನಾಯತ್ ಮತ್ತು ರಫಿಕ್ ನ ಅಕ್ಕನ ಮಗ ಸಮೀರ್ ಇಬ್ಬರನ್ನು ಬಂಧಿಸಲಾಗಿದ್ದು, ಇಬ್ಬರ ಮೇಲೂ ಆನಂದಪುರ ಪೊಲೀಸ್ ಠಾಣೆಯಲ್ಲಿ ಮರ್ಡರ್ ಕೇಸ್ ದಾಖಲಾಗಿದೆ. ಇತ್ತ ಕುಟುಂಬದಲ್ಲಿ ಶುರುವಾದ ಆಸ್ತಿ ವಿವಾದ ಇಬ್ಬರನ್ನು ಬಲಿ ಪಡೆದಿದೆ. ಅಣ್ಣನ ಕೊಲೆ ಕೇಸ್ ನಲ್ಲಿ ಈಗ ತಮ್ಮನು ಜೈಲು ಸೇರಿದ್ದಾನೆ.













