ಬಾಳೆಹೊನ್ನೂರು: ರಸ್ತೆ ಹಾಗೂ ಅಂಗನವಾಡಿ ಕಟ್ಟಡದ ದುಸ್ಥಿತಿ ಕಂಡು ನಿವಾಸಿಗಳ ಆಕ್ರೋಶ

ಬಾಳೆಹೊನ್ನೂರು:  (ನ್ಯೂಸ್ ಮಲ್ನಾಡ್ ವರದಿ) ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನ ಮಲಯಾಳಿ ಕಾಲೋನಿಯಲ್ಲಿನ ರಸ್ತೆ ಹಾಗೂ ಅಂಗನವಾಡಿ ಕಟ್ಟಡದ ದುಸ್ಥಿತಿ ಕಂಡು ಇಲ್ಲಿನ ನಿವಾಸಿಗಳು ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.

 

ಇದನ್ನೂ ಓದಿ;  ಕೃಷಿ ಯಂತ್ರೋಪಕರಣ ಖರೀದಿಗೆ ಸಹಾಯಧನ; ಈಗಲೇ ಅರ್ಜಿ ಸಲ್ಲಿಸಿ

ಈಗಾಗಲೇ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಸ್ಥಳೀಯ ಆಡಳಿತಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಕೂಡ ಇದುವರೆಗೂ ಅಂಗವಾಡಿ ಕಟ್ಟಡ ದುರಸ್ಥಿ ಆಗಿಲ್ಲ, ಅಷ್ಟೆ ಅಲ್ಲದೆ ಇಲ್ಲಿನ ಅಂಗನವಾಡಿಯನ್ನು ಮುಚ್ಚಿ ಸುಮಾರು ಎಂಟು ತಿಂಗಳಾಗಿದ್ದು, ಈ ಕಾಲೋನಿಯಲ್ಲಿದ್ದ ವ್ಯವಸ್ಥೆಯನ್ನು ಸುಮಾರು ಒಂದು ಕಿಲೋಮೀಟರ್ ದೂರವಿರುವ ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದಾರೆ. ಈ ಭಾಗದ ಪುಟ್ಟ ಮಕ್ಕಳು ಸ್ಥಳಾಂತರವಾಗಿರುವ ಕಟ್ಟಡಕ್ಕೆ ಹೋಗಿ ಬರಲು ಆಗದೇ ಅಂಗನವಾಡಿ ಶಿಕ್ಷಣದಿಂದ ವಂಚಿತರಾಗಿದ್ದಾರೆ.

ಇದನ್ನೂ ಓದಿ; ಅಂಚೆ ಕಚೇರಿಯಲ್ಲಿ ಮಹಿಳೆಯರಿಗಾಗಿ ವಿಶೇಷ ಯೋಜನೆ!; ಜನರಿಂದ ಭರ್ಜರಿ ರೆಸ್ಪಾನ್ಸ್, ಏನಿದು ಯೋಜನೆ?

ಮಲಯಾಳಿ ಕಾಲೋನಿ ಕೇರಳದಲ್ಲಿ ಇಲ್ಲ ಎಂದು ಗ್ರಾಮಸ್ಥರ ಆಕ್ರೋಶ:
ಇನ್ನು ಈ ಭಾಗದಲ್ಲಿ ಚರಂಡಿ ಇಲ್ಲದೆ ಮಳೆಗಾಲದಲ್ಲಿ ನೀರು ರಸ್ತೆಯ ಮೇಲೆ ಹರಿದು ಹೊಂಡ ಗುಂಡಿಗಳಿಂದ ಸಂಚಾರಕ್ಕೆ ಅಡಚಣೆಯಾಗಿದೆ. ಜಲಜೀವನ್ ಕುಡಿಯುವ ನೀರಿನ ವ್ಯವಸ್ಥೆಗಾಗಿ ಪೈಪ್ ಲೈನ್ ಅಳವಡಿಸುತ್ತಿರುವ ಗುತ್ತಿಗೆದಾರರು ಯಾವುದೇ ಯೋಜನೆ ಹಾಕಿಕೊಳ್ಳದೆ ರಸ್ತೆಯನ್ನು ಹಿಟಾಚಿಯಲ್ಲಿ ಅಗೆದು ಹಾಕಿ ಅವ್ಯವಸ್ಥೆಗೆ ತಂದಿದ್ದಾರೆ. ಚುನಾವಣೆ ಸಮಯದಲ್ಲಿ ಮಾತ್ರ ಜನಪ್ರತಿನಿಧಿಗಳು ಇಲ್ಲಿಗೆ ಬಂದು ಪೊಳ್ಳು ಆಶ್ವಾಸನೆ ಕೊಟ್ಟು ಹೋಗುತ್ತಿದ್ದಾರೆ. ತಕ್ಷಣವೇ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡ ಮರು ನಿರ್ಮಾಣ ಹಾಗೂ ಇಲ್ಲಿನ ರಸ್ತೆಯ ಎರಡೂ ಬದಿಗಳಲ್ಲಿ ಬಾಕ್ಸ್ ಚರಂಡಿ ಮತ್ತು ಸಿಮೆಂಟ್ ರಸ್ತೆ ನಿರ್ಮಾಣ ಮಾಡದಿದ್ದಲ್ಲಿ ಮುಂಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲಾಗುತ್ತದೆ. ಅಲ್ಲದೆ ಮಲಯಾಳಿ ಕಾಲೋನಿ ಕೇರಳದಲ್ಲಿ ಇಲ್ಲ, ಬಿ.ಕಣಬೂರು ಗ್ರಾಮ ಪಂಚಾಯತಿಗೆ ಸೇರಿದೆ. ಇನ್ನಾದರೂ ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

ಇದನ್ನೂ ಓದಿ;  ಸರ್ಕಾರಿ ಉದ್ಯೋಗ ಹುಡುಕುತ್ತಿರುವವರಿಗೆ ಗುಡ್ ನ್ಯೂಸ್;  ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗ

ತಮ್ಮನ ಸಾವಿನ ಸೇಡಿಗೆ ಅಣ್ಣನ ಬರ್ಬರ ಹತ್ಯೆ: ಇಬ್ಬರು ಆರೋಪಿಗಳು ಅಂದರ್

ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದಲ್ಲಿ ಸೊರಬ ತಾಲೂಕಿನ ಉಡಿನೀರು ಗ್ರಾಮದ ರಫಿಕ್ (39) ನನ್ನು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇನಾಯತ್ ಮತ್ತು ಕೊಲೆಯಾದ ರಫಿಕ್ ನ ಅಕ್ಕನ ಮಗ ಸಮೀರ್ ಬಂಧಿತ ಆರೋಪಿಗಳು.

ಇದನ್ನೂ ಓದಿ; ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ;ಅರ್ಜಿ ಸಲ್ಲಿಕೆ ಹೇಗೆ?; ಅಗತ್ಯ ದಾಖಲೆಗಳು ಯಾವುವು?ಪೂರ್ಣ ವಿವರ ಇಲ್ಲಿದೆ

ಏನಿದು ಘಟನೆ:
ಒಂದೂವರೆ ವರ್ಷದ ಹಿಂದೆ ಆಸ್ತಿ ಮತ್ತು ವೈಯಕ್ತಿಕ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ರಫಿಕ್ ಮರ್ಡರ್ ಮಾಡಿದ್ದನು. ಈ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ರಫಿಕ್ ಕೆಲವು ತಿಂಗಳ ಹಿಂದೆ ಬೇಲ್ ಮೇಲೆ ಹೊರ ಬಂದಿದ್ದನು. ಆಸ್ತಿ ವಿಚಾರ ಹಾಗೂ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿದ ದ್ವೇಷಕ್ಕೆ ಇನಾಯತ್, ರಫಿಕ್ ಜೀವ ತೆಗೆಯಲು ಪ್ಲ್ಯಾನ್ ಮಾಡಿಕೊಂಡಿದ್ದ. ಈ ಸಂಬಂಧ ಶಿವಮೊಗ್ಗಕ್ಕೆ ಶಾಪಿಂಗ್ ನೆಪದಲ್ಲಿ ಕರೆತಂದಿದ್ದರು. ಊರಿಗೆ ವಾಪಸ್ ಹೋಗುವಾಗ ತಮ್ಮ ಸಲೀಂ ಕೊಲೆ ಪ್ರಕರಣದ ಸೇಡಿಗಾಗಿ ಅಣ್ಣ ರಫಿಕ್ ನನ್ನು ತಮ್ಮ ಇನಾಯತ್ ಮತ್ತು ಅಕ್ಕನ ಮಗ ಸಮೀರ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ.

ಇದನ್ನೂ ಓದಿ;HAL ಕಂಪನಿಯಲ್ಲಿದೆ ಬಂಪರ್ ಉದ್ಯೋಗಾವಕಾಶ: ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಕಣ್ಣಿಗೆ ಖಾರದ ಪುಡಿ ಎರಚಿ ಬಳಿಕ ತಂತಿಯಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಕೊನೆಗೆ ಆತನ ಮೇಲೆ ಕಾರ್ ಕೂಡ ಹತ್ತಿಸಿದ್ದಾರೆ. ಆತ ಮೃತಪಟ್ಟಿರುವುದು ಖಚಿತವಾದ ಬಳಿಕ ಇಬ್ಬರು ಕಾರ್ ನಲ್ಲಿ ಎಸ್ಕೇಪ್ ಆಗಿದ್ದರು. ಮಗನ ಸಾವಿನ ಸುದ್ದಿ ತಿಳಿದ ತಂದೆ ಆಸ್ತಿಯಾಗಿ ರಫಿಕ್ ತಮ್ಮ ಇನಾಯತ್ ಮತ್ತು ಮಗಳ ಮಗ ಸಮೀರ್ ಸೇರಿ ದೊಡ್ಡ ಮಗ ರಫಿಕ್ ನನ್ನು ಹತ್ಯೆ ಮಾಡಿದ್ದಾರೆ. ಇವರಿಗೆ ತಕ್ಕ ಶಿಕ್ಷೆಯಾಗಬೇಕೆಂದು ಮೃತನ ತಂದೆ ಮಹ್ಮದ್ ಗೌಸ್ ಆಕ್ರೋಶ ಹೊರಹಾಕಿದ್ದರು.

ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 16ನೇ ಕಂತಿನ ಹಣ ಇನ್ನು ಬಂದಿಲ್ವಾ?; ತಪ್ಪದೇ ಈ ಕೆಲಸ ಮಾಡಿ

ಇನಾಯತ್ ಮತ್ತು ರಫಿಕ್ ನ ಅಕ್ಕನ ಮಗ ಸಮೀರ್ ಇಬ್ಬರನ್ನು ಬಂಧಿಸಲಾಗಿದ್ದು, ಇಬ್ಬರ ಮೇಲೂ ಆನಂದಪುರ ಪೊಲೀಸ್ ಠಾಣೆಯಲ್ಲಿ ಮರ್ಡರ್ ಕೇಸ್ ದಾಖಲಾಗಿದೆ. ಇತ್ತ ಕುಟುಂಬದಲ್ಲಿ ಶುರುವಾದ ಆಸ್ತಿ ವಿವಾದ ಇಬ್ಬರನ್ನು ಬಲಿ ಪಡೆದಿದೆ. ಅಣ್ಣನ ಕೊಲೆ ಕೇಸ್ ನಲ್ಲಿ ಈಗ ತಮ್ಮನು ಜೈಲು ಸೇರಿದ್ದಾನೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.