ಶೃಂಗೇರಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ಲಂಚಾವತಾರ?

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ)  ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕರೊಬ್ಬರ ಕೆಲಸ ಮಾಡಿಸಿಕೊಡುವುದಾಗಿ 20,000 ಲಂಚ ಪಡೆದಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.


ಇದನ್ನೂ ಓದಿ: ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್; ಮನೆ ದುರಸ್ತಿಗೆ ಸಿಗಲಿದೆ ಸಹಾಯಧನ; ಈಗಲೇ ಅರ್ಜಿ ಸಲ್ಲಿಸಿ


ಏನಿದು ಘಟನೆ:
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ ಆಗಿ ಕೆಲಸ ಮಾಡುತ್ತಿದ್ದ ಎನ್. ಚೇತನ್ ಅವರನ್ನು ಸರ್ಕಾರ ಬೆಂಗಳೂರಿನ ದೇವನಹಳ್ಳಿ ಬಿಇಒ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಆದರೆ, ಇದೇ ಹುದ್ದೆಗೆ ಮತ್ತೊಬ್ಬ ಮಹಿಳಾ ನೌಕರರನ್ನು ವರ್ಗಾವಣೆ ಮಾಡಲಾಗಿತ್ತು. ಈ ಆದೇಶ ಜುಲೈ 22ರ ರಾತ್ರಿ ಬಂದಿದ್ದು, ಜುಲೈ 23 ರಂದು ಮೊದಲು ಕೆಲಸಕ್ಕೆ ಹಾಜರಾಗುವವರಿಗೆ ಅವಕಾಶವಿತ್ತು. ಆದರೆ ಶೃಂಗೇರಿ ಬಿಇಒ ಕಚೇರಿಯಿಂದ ಬಿಡುಗಡೆ ಆಗಬೇಕಾದಾಗ ಇಲ್ಲಿನ ಸಿ.ಆರ್.ಪಿ ಬಿಇಒ ಬಳಿ ಮಾತನಾಡಿರುವುದಾಗಿ 20,000 ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.


ಇದನ್ನೂ ಓದಿ: SSLC, PUC ಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ


ಅದರಂತೆ ಚೇತನ್ ಒಮ್ಮೆ 10,000 ನಂತರ 2000 ಹಾಗೂ 8000 ಜಮಾ ಮಾಡಿದ್ದಾರೆ. ಆದರೆ, ಬಿಡುಗಡೆ ಪತ್ರ ಪಡೆದು ಬೆಂಗಳೂರಿಗೆ ಹೋಗಿ ಕರ್ತವ್ಯದ ರಿಪೋರ್ಟ್ ಪಡೆಯಲು ಳಂಬವಾಗಿರುವುದರಿಂದ ಮತ್ತೊಬ್ಬರಿಗೆ ಆ ಕೆಲಸ ದೊರಕಿದೆ. ಈ ಬಗ್ಗೆ ನಿರಾಶರಾದ ಚೇತನ್ ಅನ್ಯಾಯವಾಗಿದೆ. ನ್ಯಾಯ ಕೊಡಿಸಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ದೂರು ನೀಡಿದ್ದಾರೆ.


ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ದಂಡ ಫಿಕ್ಸ್; ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ…!


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.