ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅಮೆರಿಕದ ವರ್ಜೀನಿಯಾದ ರಿಚ್ಮಂಡ್ ನಗರದಲ್ಲಿ ಇದೇ 30ರಿಂದ (ನಾಳೆಯಿಂದ) ಸೆಪ್ಟೆಂಬರ್ 1ರವರೆಗೆ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಚಿಕ್ಕಮಗಳೂರಿನ ಖ್ಯಾತ ಸಾಹಿತಿ, ಬರಹಗಾರ, ಪ್ರಗತಿಪರ ಚಿಂತಕ ಚಟ್ಟನಹಳ್ಳಿ ಮಹೇಶ್ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ರೇಷನ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್; ಮನೆ ದುರಸ್ತಿಗೆ ಸಿಗಲಿದೆ ಸಹಾಯಧನ; ಈಗಲೇ ಅರ್ಜಿ ಸಲ್ಲಿಸಿ

ಎರಡು ವರ್ಷಗಳಿಗೊಮ್ಮೆ ನಡೆಯಬೇಕಾದ ಈ ಸಮ್ಮೇಳನ, ಕೋವಿಡ್ ಕಾರಣದಿಂದ ಮುಂದೂಡಿಕೆಯಾಗಿತ್ತು. ಸಮ್ಮೇಳನಕ್ಕೆ ಭರದಿಂದ ಸಿದ್ಧತೆ ನಡೆದಿದ್ದು, ಅಮೆರಿಕದಲ್ಲಿನ ವಿವಿಧ ಭಾಗಗಳಲ್ಲಿ ಕನ್ನಡ ಸಾಹಿತ್ಯದ ಸತ್ಯ ಮತ್ತು ಸಮೃದ್ಧ ತತ್ವದ ಬಗ್ಗೆ ಚಟ್ಟನಹಳ್ಳಿ ಮಹೇಶ್ ಉಪನ್ಯಾಸ ನೀಡಲಿದ್ದಾರೆ.

ಇದನ್ನೂ ಓದಿ: SSLC, PUC ಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಗುಡ್ ನ್ಯೂಸ್; ಏನದು? ಮಿಸ್ ಮಾಡ್ದೆ ಈ ಸುದ್ದಿ ಓದಿ
ಸಾಂಸ್ಕೃತಿಕ ರಾಯಭಾರಿಯಾಗಿ ತೆರಳುತ್ತಿರುವ ಸಾಹಿತಿ ಚಟ್ಟನಹಳ್ಳಿ ಮಹೇಶ್ ಅವರಿಗೆ ಮಲೆನಾಡ ಜನರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿವಿಧ ಸಂಘ ಸಂಸ್ಥೆಗಳು ಶುಭಕೋರಿವೆ.
ಇದನ್ನೂ ಓದಿ: ವಾಹನ ಸವಾರರೇ ಗಮನಿಸಿ; HSRP ನಂಬರ್ ಪ್ಲೇಟ್ ಹಾಕದೆ ಇರುವವರಿಗೆ ದಂಡ ಫಿಕ್ಸ್; ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ…!












