ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ರಾಜ್ಯಾದ್ಯಂತ ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ನಡೆದಿದ್ದು, 71 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೇ ಮೂವರು ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ನೂತನ ಇನ್ಸ್ ಪೆಕ್ಟರ್ ನೇಮಕ ಮಾಡಲಾಗಿದೆ.
ಇದನ್ನೂ ಓದಿ; ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಈಗೆಷ್ಟಿದೆ ಗ್ಯಾಸ್ ಬೆಲೆ?

ಈ ಬಗ್ಗೆ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಆದೇಶ ಹೊರಡಿಸಿದ್ದು ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಪೊಲೀಸ್ ಇನ್ಸ್ ಪೆಕ್ಟರ್ (ಸಿವಿಲ್) ರವರುಗಳನ್ನು ಆಡಳಿತಾತ್ಮಕ ಕಾರಣಗಳಿಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ ಎಂದು ಸುತ್ತೋಲೆ ಹೊರಡಿಸಿದ್ದಾರೆ.
ಇದನ್ನೂ ಓದಿ; ಉದ್ಯೋಗ ಹುಡುಕುವವರಿಗೆ ಗುಡ್ ನ್ಯೂಸ್; SBI ನಲ್ಲಿ ಭರ್ಜರಿ ಉದ್ಯೋಗಾವಕಾಶ
ಶೃಂಗೇರಿ ಪೊಲೀಸ್ ಠಾಣೆಗೆ ನೂತನ ಇನ್ಸ್ ಪೆಕ್ಟರ್:
ಶೃಂಗೇರಿ ಪೊಲೀಸ್ ಠಾಣೆಯ ನೂತನ ಇನ್ಸ್ ಪೆಕ್ಟರ್ ಆಗಿ ಶಿವಕುಮಾರ್ ಹೆಚ್.ಆರ್ ಅವರನ್ನು ಸಿಟಿ ಎಸ್.ಬಿ ಬೆಂಗಳೂರು ನಗರದಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಎನ್.ಆರ್ ಪುರ ವೃತ್ತ ಇನ್ಸ್ ಪೆಕ್ಟರ್ ಆಗಿ ಸಂದೀಪ್ ಪಿ.ಕೌರಿ:
ಸಂದೀಪ್ ಪಿ.ಕೌರಿ ಅವರನ್ನು ಎನ್.ಆರ್ ಪುರ ವೃತ್ತ ನೂತನ ಇನ್ಸ್ ಪೆಕ್ಟರ್ ಆಗಿ ಐ.ಜಿ.ಪಿ. ರವರ ಕಛೇರಿ, ಪಶ್ಚಿಮ ವಲಯ, ಮಂಗಳೂರಿನಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ; ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ; 15ನೇ ಕಂತಿನ ಹಣ ಬಂದಿಲ್ಲದಿದ್ದರೆ ಏನು ಮಾಡಬೇಕು?
ಬಸವನಹಳ್ಳಿ ವೃತ್ತ ಇನ್ಸ್ ಪೆಕ್ಟರ್ ಆಗಿ ಸ್ವರ್ಣ ಜಿ.ಎಸ್:
ಸ್ವರ್ಣ ಜಿ.ಎಸ್ ಅವರನ್ನು ಬಸವನಹಳ್ಳಿ ವೃತ್ತದ ನೂತನ ಇನ್ಸ್ ಪೆಕ್ಟರ್ ಆಗಿ ಮೈಸೂರು ಗ್ರಾಮಾಂತರ ವೃತ್ತ, ಮೈಸೂರು ಜಿಲ್ಲೆಯಿಂದ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ವರ್ಗಾವಣೆಗೊಂಡ ಪೊಲೀಸ್ ಅಧಿಕಾರಿಗಳ ಪಟ್ಟಿ





ಹಾಸನಾಂಬೆ ದೇವಿ ಹುಂಡಿ ಎಣಿಕೆ ಮುಕ್ತಾಯ; ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯ, ಎಷ್ಟು ಗೊತ್ತಾ?
ಹಾಸನ: (ನ್ಯೂಸ್ ಮಲ್ನಾಡ್ ವರದಿ) ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಗುರುವಾರ ಮುಗಿದಿದ್ದು, ಹುಂಡಿಯಲ್ಲಿ ವಿದೇಶಿ ನೋಟುಗಳು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಭಕ್ತರು ಹಾಕಿದ್ದಾರೆ.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…
ಗುರುವಾರ ಬೆಳಿಗ್ಗೆಯಿಂದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಆರಂಭಿಸಲಾಗಿತ್ತು. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಶಾಸಕ ಸ್ವರೂಪ್ ಪ್ರಕಾಶ್, ಉಪ ವಿಭಾಗಾಧಿಕಾರಿ ಮಾರುತಿ ಉಸ್ತುವಾರಿಯಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರು ಹುಂಡಿಯಲ್ಲಿ ಸಂಗ್ರಹವಾಗಿರುವ ಹಣದ ಎಣಿಕೆ ಕಾರ್ಯ ಮಾಡಿದರು.
ಈ ಬಾರಿ ಗರಿಷ್ಠ ಆದಾಯ:
ಇದೇ ಮೊದಲ ಬಾರಿಗೆ ದೇವಾಲಯದಲ್ಲಿ ಅಳವಡಿಸಿದ್ದ ಇ-ಹುಂಡಿಯ ಮೂಲಕ 4.64 ಲಕ್ಷ ಸಂಗ್ರಹವಾಗಿದೆ. ಇನ್ನು ದೇವಾಲಯದಲ್ಲಿ ಇಡಲಾಗಿದ್ದ ಕಾಣಿಕೆ ಹುಂಡಿಗಳಿಂದ 2,50,77,497 ಸಂಗ್ರಹವಾಗಿದೆ. 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ. ವಿಶೇಷ ದರ್ಶನದ 1 ಸಾವಿರ ಹಾಗೂ 300 ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ 6,12,00,074 ಸಂಗ್ರಹವಾಗಿದ್ದು, ಕಾಣಿಕೆ ಹುಂಡಿಯ 2.50 ಲಕ್ಷ ಸೇರಿದಂತೆ ಒಟ್ಟು 8,72,41,531 ರೂ ಸಂಗ್ರಹವಾಗಿದೆ. ಈ ಬಾರಿ 14.20 ಲಕ್ಷ ಮಂದಿ ಭಕ್ತರು ದರ್ಶನ ಪಡೆದಿದ್ದಾರೆ. ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಹಣ ಸಂಗ್ರಹವಾಗಿದೆ. ವಿದೇಶಿ ನೋಟುಗಳನ್ನೂ ಸಹ ಕೆಲವರು ಕಾಣಿಕೆಯಾಗಿ ಹಾಕಿದ್ದಾರೆ. 2017 ರಲ್ಲಿ ಸಂಗ್ರಹವಾಗಿದ್ದ 4.14 ಕೋಟಿ ಇದುವರೆಗಿನ ದಾಖಲೆಯಾಗಿತ್ತು.
ಭಕ್ತರ ಪತ್ರ ಓದದಂತೆ ಸೂಚನೆ:
ಪ್ರತಿ ಬಾರಿ ಭಕ್ತರು ತಮ್ಮ ಕೋರಿಕೆಗಳನ್ನು ಬರೆದು ದೇವಿಯ ಹುಂಡಿಗೆ ಹಾಕುತ್ತಾರೆ. ಭಕ್ತರ ಕೋರಿಕೆಯನ್ನು ಗೌಪ್ಯವಾಗಿ ಇಡುವ ಉದ್ದೇಶದಿಂದ ಕಳೆದ ವರ್ಷದಿಂದ ಈ ಪತ್ರಗಳನ್ನು ಓದದಂತೆ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ. ಹಾಗಾಗಿ ಪತ್ರಗಳನ್ನು ಹಾಗೆಯೇ ದೇವಿಯ ಸನ್ನಿಧಿಯಲ್ಲಿ ಇಡಲಾಗುತ್ತಿದೆ.
ಮುಂದಿನ ವರ್ಷ ಹಾಸನಾಂಬೆಯ ದರ್ಶನಕ್ಕೆ ದಿನಾಂಕ ಫಿಕ್ಸ್?:
ಈ ವರ್ಷ ಹಾಸನ ಜಿಲ್ಲಾಡಳಿ ಹಾಸನಾಂಬೆ ಉತ್ಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದು, ಪ್ರಸಕ್ತ ವರ್ಷದ ಹಾಸನಬಾಂಬೆ ಉತ್ಸವ ತೆರೆ ಕಂಡಿದೆ. ಈ ಬಾರಿ ಒಟ್ಟು 14 ಲಕ್ಷ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದು, ಒಟ್ಟು 8 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಇನ್ನು ಮುಂದಿನ ವರ್ಷದ ಹಾಸನಾಂಬೆ ದರ್ಶನೋತ್ಸವಕ್ಕೂ ದಿನಾಂಕವನ್ನು ನಿಗದಿ ಮಾಡಲಾಗಿದ್ದು, 2024 ರ ಅಕ್ಟೋಬರ್ 24 ರಿಂದ ನವೆಂಬರ್ 3 ರ ವರೆಗೆ ಹಾಸನಾಂಬೆ ದರ್ಶನ ಇರಲಿದೆ. ಇದರೊಂದಿಗೆ ಒಟ್ಟು 9 ದಿನಗಳ ಕಾಲ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ.












