ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಕೊಪ್ಪದಲ್ಲಿ ಘಟೋದ್ಗಜನ ಗುರುತು ಎಂಬ ಶಿರೋನಾಮೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಂಗ್ಯಭರಿತ ಪೋಸ್ಟ್ ಒಂದು ವೈರಲ್ ಆಗುತ್ತಿದೆ.
ಏನಿದೆ ಪೋಸ್ಟ್ ನಲ್ಲಿ?:

ಕೊಪ್ಪದಲ್ಲಿ ಘಟೋದ್ಗಜನ ಹೆಜ್ಜೆಗುರುತು !!
ಕೆಲ ವರ್ಷಗಳ ಹಿಂದೆ ಸಾಗರದ ಹೆದ್ದಾರಿಯಲ್ಲಿನ ಭೀಮನಪಾದ ಕ್ಷೇತ್ರದ ಬಗ್ಗೆ ಬರೆದಿದ್ದೆನಲಲವೇ. ಇದೀಗ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದಲ್ಲೂ ಇಂಥದ್ದೇ ಕ್ಷೇತ್ರವೊಂದಿರುವ ಬಗ್ಗೆ ತಿಳಿದುಬಂದಿದೆ. ಸ್ಥಳಪುರಾಣದ ಪ್ರಕಾರ ಸಾಗರದ ಸುತ್ತ ಭೀಮ ನಡೆದಾಡಿದಾಗ ಹೆಜ್ಜೆ ಗುರುತು ಬಿದ್ದಿದ್ದನ್ನು ನೋಡಿದ ಅವನ ಮಗ ಘಟೋದ್ಗಜ ತಾನೂ ಅಪ್ಪನಂತೆ ಗುರುತು ಮಾಡಬೇಕೆಂದು ಮೇಲೆ ಹಾರಿ ನೆಗೆದನಂತೆ. ರಾಕ್ಷಸಬಲದ ಘಟೋದ್ಗಜ ಕೆಳಗಿಳಿದಿದ್ದು ಆಗ ಕಾಡಾಗಿದ್ದು ಈಗ ಕೊಪ್ಪವೆಂದು ಕರೆಸಿಕೊಳ್ತಿರುವ ಪೇಟೆಯ ಮಧ್ಯಭಾಗದಲ್ಲಿ. ಇಳಿದ ರಭಸಕ್ಕೆ ಅಲ್ಲಲ್ಲಿ ಹೆಜ್ಜೆಗುರುತುಗಳು ಮೂಡಿ ಇವು ಘಟೋದ್ಗಜನ ಹೆಜ್ಜೆ ಗುರುತೆಂದೇ ಪ್ರಸಿದ್ಧವಾಗಿದ್ದವು. ಕಾಲಾನಂತರ ಮುಚ್ಚಿಹೋಗಿದ್ದ ಈ ಗುರುತುಗಳು ಇದೀಗ ಕಾಣಿಸಿಕೊಂಡಿದ್ದು ಪೇಟೆಯಲ್ಲಿ ಸಾಗುವ ವಾಹನ ಚಾಲಕರು ಇವುಗಳ ಸಮೀಪ ಬಂದಂತೆ ಭಕ್ತಿಯಿಂದ ವೇಗ ತಗ್ಗಿಸಿ ಅರ್ಧಪ್ರದಕ್ಷಿಣೆ ಹಾಕಿ ಹೋಗುವ ದೃಶ್ಯ ಸಾಮಾನ್ಯವಾಗಿದೆ. ತಾಲೂಕಿನ ಆಡಳಿತ ಹಾಗೂ ಶಾಸಕ ಸಂಸದರು ಆದಷ್ಟು ಬೇಗ ಇವುಗಳ ಸುತ್ತ ಬೇಲಿಯನ್ನು ನಿರ್ಮಿಸಿ ಗುಡಿ ಕಟ್ಟಲು ಅನುದಾನ ಕೊಡಿಸಬೇಕೆಂಬುದು ಸಾರ್ವಜನಿಕರ ಬೇಡಿಕೆಯಾಗಿದೆ. ಈ ಸುದ್ದಿಯನ್ನು ಆದಷ್ಟೂ ಹೆಚ್ಚು ಶೇರ್ ಮಾಡಿ ಭಕ್ತಾದಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಬೇಕಾಗಿ ವಿನಂತಿ.
ಇದನ್ನೂ ಓದಿ; ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ; ಈಗೆಷ್ಟಿದೆ ಗ್ಯಾಸ್ ಬೆಲೆ?
ಎಂಬ ವ್ಯಂಗ್ಯಭರಿತ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ, ವಾಸ್ತವವಾಗಿ ಇದೇನು ಅಂದರೆ ಕೊಪ್ಪ ಪಟ್ಟಣದ ಮುಖ್ಯ ರಸ್ತೆಯಲ್ಲಿ ಗುಂಡಿ ಬಿದ್ದಿರುವ ರಸ್ತೆಯನ್ನು ಕುರಿತು ಬರೆದ ವ್ಯಂಗ್ಯ ಬರಹವಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ರಸ್ತೆಗಳು ಹದಗೆಟ್ಟು ಅಕ್ಷರಶಃ ಗುಂಡಿಗಳ ತಾಣವಾಗಿ ಮಾರ್ಪಟ್ಟಿದೆ. ಇಲ್ಲಿನ ರಸ್ತೆಗಳಲ್ಲಿ ಸಂಚರಿಸುವುದು ವಾಹನ ಸವಾರರಿಗೆ ಸವಾಲಾಗಿದೆ. ತಾಲೂಕಿನ ಅಧಿಕಾರಿಗಳ ನಿರ್ಲಕ್ಷದಿಂದ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೊಳಕಾಲುದ್ದದ ಗುಂಡಿಗಳು ಬಿದ್ದಿವೆ. ಈ ರಸ್ತೆಗಳಲ್ಲೆ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.
ಮಳೆ ಬಂದ್ರೆ ಕಷ್ಟಕಷ್ಟ:
ಮಳೆಗಾಲದಲ್ಲಂತೂ ಈ ರಸ್ತೆಗಳಲ್ಲಿ ಓಡಾಡುವುದೇ ಕಷ್ಟ. ಗುಂಡಿ ಬಿದ್ದಿರುವ ಸ್ಥಳಗಳಲ್ಲಿ ನೀರು ತುಂಬಿಕೊಂಡು ರಸ್ತೆಗಳೇ ಕಾಣುವುದಿಲ್ಲ. ಇದರಿಂದ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಇದೆ. ಇಷ್ಟಾದರು ಸಹ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ರಸ್ತೆ ದುರಸ್ಥಿಗೊಳಿಸಲು ಮುಂದಾಗಿಲ್ಲ.

ದುರಸ್ತಿಯೂ ಇಲ್ಲ:
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗುಂಡಿ ಬಿದ್ದಿದ್ದು, ಇವುಗಳ ದುರಸ್ತಿಗೆ ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಿಲ್ಲ ಎಂದು ಜನರ ಆರೋಪ ಕೇಳಿ ಬಂದಿದೆ. ಅದರಲ್ಲೆ ನಿತ್ಯ ನೂರಾರು ವಾಹನಗಳು ಚಲಿಸುತ್ತಿವೆ. ಇಲ್ಲಿ ಹಾದು ಹೋಗುವ ಪ್ರತಿಯೊಬ್ಬರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಿಡಿಶಾಪ ಹಾಕದೇ ಹೋಗುವುದಿಲ್ಲ. ಇನ್ನಾದರು ತಾಲೂಕಿನ ಆಡಳಿತ ಹಾಗೂ ಶಾಸಕರು ಆದಷ್ಟು ಬೇಗ ಗುಂಡಿಗಳ ರಸ್ತೆಯನ್ನು ಸರಿಪಡಿಸಬೇಕೆಂದು ಈ ಮೂಲಕ ಮಾರ್ಮಿಕವಾಗಿ ಒತ್ತಾಯಿಸಲಾಗಿದೆ.
ಹಾಸನಾಂಬೆ ದೇವಿ ಹುಂಡಿ ಎಣಿಕೆ ಮುಕ್ತಾಯ; ಇತಿಹಾಸದಲ್ಲೇ ಈ ಬಾರಿ ಗರಿಷ್ಠ ಆದಾಯ, ಎಷ್ಟು ಗೊತ್ತಾ?
ಹಾಸನ: (ನ್ಯೂಸ್ ಮಲ್ನಾಡ್ ವರದಿ) ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಗುರುವಾರ ಮುಗಿದಿದ್ದು, ಹುಂಡಿಯಲ್ಲಿ ವಿದೇಶಿ ನೋಟುಗಳು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಭಕ್ತರು ಹಾಕಿದ್ದಾರೆ.
ಇದನ್ನೂ ಓದಿ; ಪಿಎಂ ಕಿಸಾನ್ ಯೋಜನೆ; 15ನೇ ಕಂತಿನ ಹಣ ಬಿಡುಗಡೆ; ನಿಮ್ಮ ಖಾತೆಗೆ ಹಣ ಬಂತಾ ಈಗಲೇ ಚೆಕ್ ಮಾಡಿ…
ಗುರುವಾರ ಬೆಳಿಗ್ಗೆಯಿಂದ ಕಾಣಿಕೆ ಹುಂಡಿಯ ಎಣಿಕೆ ಕಾರ್ಯ ಆರಂಭಿಸಲಾಗಿತ್ತು. ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಶಾಸಕ ಸ್ವರೂಪ್ ಪ್ರಕಾಶ್, ಉಪ ವಿಭಾಗಾಧಿಕಾರಿ ಮಾರುತಿ ಉಸ್ತುವಾರಿಯಲ್ಲಿ ಸುಮಾರು 200 ಕ್ಕೂ ಹೆಚ್ಚು ಜನರು ಹುಂಡಿಯಲ್ಲಿ ಸಂಗ್ರಹವಾಗಿರುವ ಹಣದ ಎಣಿಕೆ ಕಾರ್ಯ ಮಾಡಿದರು.
ಈ ಬಾರಿ ಗರಿಷ್ಠ ಆದಾಯ:
ಇದೇ ಮೊದಲ ಬಾರಿಗೆ ದೇವಾಲಯದಲ್ಲಿ ಅಳವಡಿಸಿದ್ದ ಇ-ಹುಂಡಿಯ ಮೂಲಕ 4.64 ಲಕ್ಷ ಸಂಗ್ರಹವಾಗಿದೆ. ಇನ್ನು ದೇವಾಲಯದಲ್ಲಿ ಇಡಲಾಗಿದ್ದ ಕಾಣಿಕೆ ಹುಂಡಿಗಳಿಂದ 2,50,77,497 ಸಂಗ್ರಹವಾಗಿದೆ. 62 ಗ್ರಾಂ ಚಿನ್ನ, 161 ಗ್ರಾಂ ಬೆಳ್ಳಿ ಕಾಣಿಕೆ ಬಂದಿದೆ. ವಿಶೇಷ ದರ್ಶನದ 1 ಸಾವಿರ ಹಾಗೂ 300 ಟಿಕೆಟ್, ಲಾಡು ಪ್ರಸಾದ ಮಾರಾಟದಿಂದ 6,12,00,074 ಸಂಗ್ರಹವಾಗಿದ್ದು, ಕಾಣಿಕೆ ಹುಂಡಿಯ 2.50 ಲಕ್ಷ ಸೇರಿದಂತೆ ಒಟ್ಟು 8,72,41,531 ರೂ ಸಂಗ್ರಹವಾಗಿದೆ. ಈ ಬಾರಿ 14.20 ಲಕ್ಷ ಮಂದಿ ಭಕ್ತರು ದರ್ಶನ ಪಡೆದಿದ್ದಾರೆ. ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ದಾಖಲೆ ಪ್ರಮಾಣದಲ್ಲಿ ಕಾಣಿಕೆ ಹಣ ಸಂಗ್ರಹವಾಗಿದೆ. ವಿದೇಶಿ ನೋಟುಗಳನ್ನೂ ಸಹ ಕೆಲವರು ಕಾಣಿಕೆಯಾಗಿ ಹಾಕಿದ್ದಾರೆ. 2017 ರಲ್ಲಿ ಸಂಗ್ರಹವಾಗಿದ್ದ 4.14 ಕೋಟಿ ಇದುವರೆಗಿನ ದಾಖಲೆಯಾಗಿತ್ತು.
ಭಕ್ತರ ಪತ್ರ ಓದದಂತೆ ಸೂಚನೆ:
ಪ್ರತಿ ಬಾರಿ ಭಕ್ತರು ತಮ್ಮ ಕೋರಿಕೆಗಳನ್ನು ಬರೆದು ದೇವಿಯ ಹುಂಡಿಗೆ ಹಾಕುತ್ತಾರೆ. ಭಕ್ತರ ಕೋರಿಕೆಯನ್ನು ಗೌಪ್ಯವಾಗಿ ಇಡುವ ಉದ್ದೇಶದಿಂದ ಕಳೆದ ವರ್ಷದಿಂದ ಈ ಪತ್ರಗಳನ್ನು ಓದದಂತೆ ದೇವಸ್ಥಾನದ ಆಡಳಿತ ಮಂಡಳಿ ಸೂಚನೆ ನೀಡಿದೆ. ಹಾಗಾಗಿ ಪತ್ರಗಳನ್ನು ಹಾಗೆಯೇ ದೇವಿಯ ಸನ್ನಿಧಿಯಲ್ಲಿ ಇಡಲಾಗುತ್ತಿದೆ.
ಮುಂದಿನ ವರ್ಷ ಹಾಸನಾಂಬೆಯ ದರ್ಶನಕ್ಕೆ ದಿನಾಂಕ ಫಿಕ್ಸ್?:
ಈ ವರ್ಷ ಹಾಸನ ಜಿಲ್ಲಾಡಳಿ ಹಾಸನಾಂಬೆ ಉತ್ಸವನ್ನು ಬಹಳ ಅಚ್ಚುಕಟ್ಟಾಗಿ ಮಾಡಿದ್ದು, ಪ್ರಸಕ್ತ ವರ್ಷದ ಹಾಸನಬಾಂಬೆ ಉತ್ಸವ ತೆರೆ ಕಂಡಿದೆ. ಈ ಬಾರಿ ಒಟ್ಟು 14 ಲಕ್ಷ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದು, ಒಟ್ಟು 8 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿದೆ. ಇನ್ನು ಮುಂದಿನ ವರ್ಷದ ಹಾಸನಾಂಬೆ ದರ್ಶನೋತ್ಸವಕ್ಕೂ ದಿನಾಂಕವನ್ನು ನಿಗದಿ ಮಾಡಲಾಗಿದ್ದು, 2024 ರ ಅಕ್ಟೋಬರ್ 24 ರಿಂದ ನವೆಂಬರ್ 3 ರ ವರೆಗೆ ಹಾಸನಾಂಬೆ ದರ್ಶನ ಇರಲಿದೆ. ಇದರೊಂದಿಗೆ ಒಟ್ಟು 9 ದಿನಗಳ ಕಾಲ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ.












