ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಾದ್ಯಂತ ನಿನ್ನೆ ಪೊಲೀಸ್ ತಂಡ ವಿಶೇಷ ಅಭಿಯಾನ ನಡೆಸಿ, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು.
ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಯಾವ ಜಿಲ್ಲಾ ನ್ಯಾಯಾಲಯ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?

ಶಾಲಾ ಕಾಲೇಜುಗಳ 200 ಮೀ. ಅಂತರದಲ್ಲಿರುವ ಎಲ್ಲಾ ಅಂಗಡಿ, ಬೇಕರಿ, ಕ್ಯಾಂಟೀನ್, ಜೂಸ್ ಸೆಂಟರ್ ಗಳಲ್ಲಿ ತಂಬಾಕು ಉತ್ಪನ್ನಗಳು ಮಾರಾಟ ಮಾಡುತ್ತಿರುವ ಬಗ್ಗೆ ಪರಿಶೀಲನೆ ನಡೆಸಿ COTPA ಅಡಿಯಲ್ಲಿ 229 ಪ್ರಕರಣಗಳನ್ನು ದಾಖಲಿಸಿ, 27,650/- ದಂಡ ವಿಧಿಸಿದ್ದಾರೆ.


ಇದನ್ನೂ ಓದಿ; ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ; LPG ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ
ಮೂಡಿಗೆರೆ: ವಾಕ್ ಮುಗಿಸಿ ರಸ್ತೆ ದಾಟುವಾಗ ಸ್ಕೂಟಿ ಡಿಕ್ಕಿ | ಗಂಭೀರ ಗಾಯ
ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ವಾಕ್ ಮುಗಿಸಿ ರಸ್ತೆ ದಾಟುವಾಗ ಸ್ಕೂಟಿ ಡಿಕ್ಕಿಯಾಗಿ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಕಾಫಿ ಕ್ಯೂರಿಂಗ್ ಬಳಿ ನಡೆದಿದೆ. ಸಮೀರ್ ಅಪಘಾತಕ್ಕೊಳಗಾದ ವ್ಯಕ್ತಿ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.












