ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕರಸೇವಕ ಶ್ರೀಕಾಂತ ಪೂಜಾರಿ ಬಂಧನ ವಿರೋಧಿಸಿ ನಿನ್ನೆ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ಇಂದು ಸಿ.ಟಿ ರವಿ ಪೊಲೀಸ್ ಠಾಣೆ ಎದುರು ಪ್ಲೇ ಕಾರ್ಡ್ ಹಿಡಿದು ತನ್ನನ್ನೂ ಬಂಧಿಸುವಂತೆ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ; ಪೌರಕಾರ್ಮಿಕರ ಹುದ್ದೆಗೆ ಅರ್ಜಿ ಆಹ್ವಾನ; ಯಾವುದೇ ಪರೀಕ್ಷೆ ಇಲ್ಲದೆ ಆಯ್ಕೆ; ಅರ್ಜಿ ಸಲ್ಲಿಕೆಯ ಎಲ್ಲಾ ಮಾಹಿತಿ ಇಲ್ಲಿದೆ

ಹುಬ್ಬಳ್ಳಿಯಲ್ಲಿ 1992 ರಲ್ಲಿ ನಡೆದ ರಾಮಜನ್ಮಭೂಮಿ ಹೋರಾಟ ವೇಳೆ ದಾಖಲಾಗಿದ್ದ ಹಳೇ ಪ್ರಕರಣದಲ್ಲಿ ಕಳೆದ ವಾರ ಬಂಧಿಸಲ್ಪಟ್ಟ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿತ್ತು. ಹುಬ್ಬಳ್ಳಿಯಲ್ಲಿ ಅಯೋಧ್ಯೆ ಕರಸೇವಕ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸುದೀರ್ಘ ಕಾಲದ ತನ್ನ ದ್ವೇಷ ಭಾವನೆಯನ್ನು ಹೊರಗೆ ಹಾಕಿದೆ ಎಂದು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಯಾವ ಜಿಲ್ಲಾ ನ್ಯಾಯಾಲಯ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?
ಇದೀಗ ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್ ಎನ್ನುತ್ತಾ ಕುಳಿತಿರುವ ಮಾಜಿ ಸಚಿವ ಸಿ.ಟಿ ರವಿ, ನಾನು 1992 ರ ಡಿಸೆಂಬರ್ 06 ರ ಅಯೋಧ್ಯೆಯ ಶ್ರೀ ರಾಮ ಮಂದಿರರ ಕರ ಸೇವಕ, ನನ್ನನ್ನೂ ಬಂಧಿಸಿ ಎಂಬ ಪ್ಲೇ ಕಾರ್ಡ್ ಹಿಡಿದು ಪೊಲೀಸ್ ಠಾಣೆ ಎದುರು ವಿಭಿನ್ನ ಪ್ರತಿಭಟನೆಗೆ ಕುಳಿತಿದ್ದಾರೆ.
ಚಿಕ್ಕಮಗಳೂರು: ಕರಸೇವಕ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹುಬ್ಬಳ್ಳಿಯಲ್ಲಿ 1992 ರಲ್ಲಿ ನಡೆದ ರಾಮಜನ್ಮಭೂಮಿ ಹೋರಾಟ ವೇಳೆ ದಾಖಲಾಗಿದ್ದ ಹಳೇ ಪ್ರಕರಣದಲ್ಲಿ ಕಳೆದ ವಾರ ಬಂಧಿಸಲ್ಪಟ್ಟ ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯಾದ್ಯಂತ ಬಿಜೆಪಿ ಕರೆ ನೀಡಿರುವ ಪ್ರತಿಭಟನೆಗೆ, ಚಿಕ್ಕಮಗಳೂರಿನಲ್ಲಿ ನಗರದ ಬಿಜೆಪಿ ಕಚೇರಿಯಿಂದ ಆಜಾದ್ ಪಾರ್ಕ್ ವರೆಗೂ ಬಿಜೆಪಿ ಕಾರ್ಯಕರ್ತರು ಮೆರವಣಿಗೆ ತೆರಳಿ ಪ್ರತಿಭಟನೆ ನಡೆಸಿದರು.
ಇದೇ ರೀತಿ ಹಿಂದುಗಳ ಮೇಲೆ ಪ್ರಹಾರ ನಡೆಸಿದರೆ ರಾಮನ ಅವಕೃಪೆಗೆ ಒಳಗಾಗುತ್ತೀರಾ ಎಂದು ಪ್ರತಿಭಟನೆಯಲ್ಲಿ ಭಾಗಿಯಾದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಹಿಂದುಗಳ ಮೇಲೆ ದಬ್ಬಾಳಿಕೆ ಮುಂದುವರಿಸಿದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದರು.
ಇದನ್ನೂ ಓದಿ; ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ; LPG ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ
ಇನ್ನು ಸಿದ್ದರಾಮಯ್ಯ ಯಾವ ಧೋರಣೆ ಅನುಸರಿಸುತ್ತಿದ್ದೀರಾ ಮುಸ್ಲಿಂರ ಬಗ್ಗೆ ನಿಮ್ಮ ನಿಲುವೆ ಬೇರೆ, ರಾಮಮಂದಿರ ಕಟ್ಟಲು ದುಡ್ಡು ಕೊಡಲ್ಲ ಎನ್ನುವ ನೀವು ಧರ್ಮ ವಿರೋಧಿ ನಿಮಗೇಕೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ ಯಾಕೆ ಕೊಡಬೇಕು ಎಂದು ರವೀಂದ್ರ ಬೆಳವಾಡಿ ವಾಗ್ದಾಳಿ ನಡೆಸಿದರು.












