ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ತಂಬಾಕು ಉತ್ಪನ್ನಗಳನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ತಂಬಾಕು ತನಿಖಾದಳ ದಾಳಿ ನಡೆಸಿ ಸುಮಾರು 17 ಅಂಗಡಿಗಳ ಮೇಲೆ ಕ್ರಮ ತೆಗೆದುಕೊಂಡಿದ್ದು, 5,000ಕ್ಕೂ ಹೆಚ್ಚಿನ ದಂಡ ವಸೂಲಿ ಮಾಡಿದೆ.
ಇದನ್ನೂ ಓದಿ: ರಾಜ್ಯದ ಈ ಜಿಲ್ಲಾ ಪಂಚಾಯಿತಿಯಲ್ಲಿ ಉದ್ಯೋಗಾವಕಾಶ!; ಅರ್ಜಿ ಸಲ್ಲಿಸುವುದು ಹೇಗೆ..? ಅರ್ಹತೆ ಏನು?

ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಮಾಡಲು ಅವಕಾಶ ನೀಡಬಾರದು. ಬಿಡಿಬಿಡಿಯಾಗಿ ಸಿಗರೇಟ್, ಬೀಡಿ ಮಾರಾಟ ಮಾಡಬಾರದು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರಾಟ ಮಾಡಬಾರದು. ತಂಬಾಕು ಉತ್ಪನ್ನಗಳ ಜಾಹೀರಾತು ಪ್ರದರ್ಶಿಸಬಾರದು ಈ ಮೊದಲಾದ ವಿಷಯಗಳನ್ನು ಅಂಗಡಿಯವರಿಗೆ ಮನವರಿಕೆ ಮಾಡಿಕೊಡಲಾಯಿತು. ತಂಬಾಕು ಉತ್ಪನ್ನ ಮಾರಾಟ ಮಾಡಲು ಕಡ್ಡಾಯ ಪರವಾನಗಿ ಪಡೆದಿರಬೇಕು ಎಂದು ತಿಳಿಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣ ಮಂಡಳಿಯ ಕೋಶಾಧಿಕಾರಿ ರಾಘವೇಂದ್ರ, ತಾಲ್ಲೂಕು ಆರೋಗ್ಯ ಇಲಾಖೆಯ ಋಷ್ಯಶೃಂಗ, ಶಿವಕುಮಾರ್, ಪೊಲೀಸ್ ಸಿಬ್ಬಂದಿ ಚನ್ನಪ್ಪ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ: ರಾಜ್ಯಕ್ಕೆ ಕೇಂದ್ರದಿಂದ ಭರ್ಜರಿ ಗಿಫ್ಟ್; ನೂತನ ಕೇಂದ್ರ ಸಚಿವರಿಂದ ಬಂಪರ್ ಘೋಷಣೆ
ಸರಣಿ ಕಳ್ಳತನ:
ಶೃಂಗೇರಿ ಪಟ್ಟಣದ ಭಾರತೀಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದ 4 ಗೂಡಂಗಡಿಗಳಲ್ಲಿ ಕಳ್ಳತನ ನಡೆದಿದೆ, ರಾತ್ರಿ ಸಮಯದಲ್ಲಿ ಅಂಗಡಿಗೆ ನುಗ್ಗಿದ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ.
ಎನ್ ಆರ್ ಪುರ: ತೆಪ್ಪ ಮುಳುಗಿ ಭೀಕರ ದುರಂತ, ಮೂವರು ಯುವಕರು ಸಾವು!
ಎನ್ ಆರ್ ಪುರ: (ನ್ಯೂಸ್ ಮಲ್ನಾಡ್ ವರದಿ) ತೆಪ್ಪ ಮುಳುಗಿ ಮೂವರು ಯುವಕರು ಸಾವನ್ನಪ್ಪಿರುವ ಧಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಭೈರಾಪುರ ಗ್ರಾಮದಲ್ಲಿ ನಡೆದಿದೆ.
ಪ್ರವಾಸಕ್ಕೆ ಬಂದಿದ್ದ ಮೂವರು ಭದ್ರಾ ಹಿನ್ನೀರಿನಲ್ಲಿ ತೆಪ್ಪದಲ್ಲಿ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ಮೃತರನ್ನು ಆದಿಲ್, ಸಾಜಿದ್, ಅಫ್ದಾಖಾನ್ ಎಂದು ಗುರುತಿಸಲಾಗಿದ್ದು, ಮೂವರು ಶಿವಮೊಗ್ಗ ನಗರದ ವಿದ್ಯಾನಗರದವರು ಎನ್ನಲಾಗಿದೆ.












