ಮೂಡಿಗೆರೆ: (ನ್ಯೂಸ್ ಮಲ್ನಾಡ್ ವರದಿ) ಕುಂಬಾರ ಯಾನೆ ಕುಲಾಲ ಸಂಘ (ರಿ ) ಪ್ರಾರಂಭವಾಗಿ 2 ವರ್ಷ ಕಳೆದ ಹಿನ್ನೆಲೆ, ಮೊದಲ ವರ್ಷದ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಮೂಡಿಗೆರೆ ರೈತ ಭವನದಲ್ಲಿ ಆಯೋಜಿಸಲಾಯಿತು. ಸಂತರಿಗೆ ಪಾದಪೂಜೆ ಮಾಡುವುದರ ಮೂಲಕ ಬರಮಾಡಿಕೊಂಡು, ಸರ್ವಜ್ಞ ಹಾಗೂ ವೀರನಾರಾಯಣ ದೇವರಿಗೆ ಪುಷ್ಪರ್ಚನೆ ಮಾಡಿ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಇದನ್ನೂ ಓದಿ; ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನ; ಯಾವ ಜಿಲ್ಲಾ ನ್ಯಾಯಾಲಯ, ಅರ್ಹತೆ ಏನು, ಅರ್ಜಿ ಸಲ್ಲಿಕೆ ಹೇಗೆ?

ಶ್ರೀ ಚಿದಾನಂದ ಸ್ವಾಮೀಜಿ ಧರ್ಮದರ್ಶಿಗಳು ಶನೇಶ್ವರ ಸ್ವಾಮಿ ದೇವಸ್ಥಾನ ಹೇಮಕ್ಕಿ, ಶ್ರೀ ದರ್ಮೇಶ್ ಧರ್ಮದರ್ಶಿಗಳು ಶನೇಶ್ವರ ಸ್ವಾಮಿ ದೇವಸ್ಥಾನ ತೋಳುರು ಇವರು ಸಮಾಜದ ಒಳಿತಿಗಾಗಿ ಆಶೀರ್ವಾಚನ ನೀಡಿದರು.
ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಗುರೂಪೀಠ ಚಿತ್ರದುರ್ಗ ಇವರು ಹಾಜರಿದ್ದು, ಕುಂಬಾರ ಜನಾಂಗ ಬೆಳೆದು ಬಂದ ದಾರಿಯನ್ನು ತಿಳಿಸಿ, ಮಡಿಕೆ ಮಾಡುವುದು ಒಳ್ಳೆಯ ಕೆಲಸ ನಮ್ಮ ಸಮಾಜದ ಹಕ್ಕು ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮಯೂರ್ ಉಳ್ಳಾಲ್ ಮಾತನಾಡಿ, ಕುಂಬಾರ ಜನಾಂಗ ಯಾವತ್ತು ಹಿಂದೆ ಉಳಿದಿಲ್ಲ, ಉಳಿಯೋದು ಇಲ್ಲ ಹಾಗೆಯೇ ಈ ಬಗ್ಗೆ ಮಂಗಳೂರಿನಲ್ಲಿ ಸಂಘಟನೆಯ ಬಗ್ಗೆ ಮಾಹಿತಿ ನೀಡಲಾಯಿತು.
ಇದನ್ನೂ ಓದಿ; ಹೊಸ ವರ್ಷಕ್ಕೆ ಗ್ರಾಹಕರಿಗೆ ಸಿಹಿ ಸುದ್ದಿ; LPG ವಾಣಿಜ್ಯ ಸಿಲಿಂಡರ್ ಬೆಲೆ ಇಳಿಕೆ
ಇನ್ನು ಮುಖ್ಯ ಅತಿಥಿಗಳಾಗಿ ಶೋಭಾ ಕರಂದ್ಲಾಜೆ ಆಗಮಿಸಿ ನೀವು ಉತ್ತಮರು ಸುಗ್ಗಿ ಪೂಜೆ ಮಾಡುವವರು ಮೊದಲ ಪೂಜೆ ನಿಮ್ಮದೇ ಎಂದು ಹೇಳಿ ಕುಂಬಾರ ಜನಾಂಗಕ್ಕೆ ಮೊದಲು ಹಣ ಬಿಡುಗಡೆ ಮಾಡಲಾಯಿತು. ಅದು ನಮ್ಮ ಸರ್ಕಾರ ಎಂದು ತಿಳಿಸಿ ಮಡಿಕೆ ಮಾಡುವುದರ ಮೂಲಕ ಎಲ್ಲರ ಗಮನ ಸೆಳೆದರು.
ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಕುಂಬಾರ ಸಮಾಜ ಇಷ್ಟು ಜನ ಜೋಡಿ ತುಂಬಾ ಸಂತೋಷವಾಗಿದೆ ನಿಮ್ಮ ಸಮುದಾಯಕ್ಕೆ ಸಮುದಾಯ ಭವನ ಮಾಡಲು ಸ್ಥಳದ ವ್ಯವಸ್ಥೆ ಮಾಡಿ ಕೊಡುವುದಾಗಿ ಭರವಸೆ ನೀಡಿದರು. ಕುಂಬಾರ ಕುಲಾಲ ಸಮಾಜದ ಬಗ್ಗೆ ಹಲವು ವಿಚಾರಗಳನ್ನು ತಿಸಿಳಿದರು ಹಾಗೂ ಶಾಸಕರಿಗೆ ತಿಳಿಸಿ ಸಮಾಜದ ಅಭಿವೃದ್ಧಿಗಾಗಿ ನಾನು ನಿಮ್ಮ ಜೊತೆ ಸಹಕರಿಸುತ್ತೇನೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಕಳೆದ ಬಾರಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ೮೦% ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಸನ್ಮಾನ ಮಾಡಲಾಯಿತು ಹಾಗೂ ನಿವೃತ್ತ ಮಿಲ್ಟ್ರಿ ಆಫೀಸರ್ಸ್ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಕುಂಬಾರಿಕೆ ಮಾಡುವವರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು ಹಾಗೂ 2024 ರ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ತಾಲೂಕು ಪದಾಧಿಕಾರಿಗಳು ತಾಲೂಕು ನಿರ್ದೇಶಕರುಗಳು ಹಾಗೂ ಕುಂಬಾರ ಯಾನೆ ಕುಲಾಲ ಸಂಘದ ಸಮಾಜ ಬಂಧುಗಳು ಹಾಜರಿದ್ದರು.












