ಬಾಳೆಹೊನ್ನೂರು: ಹಾವು ಕಚ್ಚಿ ಕಾರ್ಮಿಕನೊರ್ವ ಸಾವು

 

ಬಾಳೆಹೊನ್ನೂರು: (ನ್ಯೂಸ್ ಮಲ್ನಾಡ್ ವರದಿ) ಹಾವು ಕಚ್ಚಿ ಕಾರ್ಮಿಕನೊರ್ವ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲ್ಲೂಕಿನ ಬಾಳೆಹೊನ್ನೂರು ವ್ಯಾಪ್ತಿಯ ಮಾಗುಂಡಿಯಲ್ಲಿ ನಡೆದಿದೆ. ಹರೀಶ್ ಅಲಿಯಾಸ್ ಅಣ್ಣಿ (37) ಹಾವು ಕಚ್ಚಿ ಮೃತಪಟ್ಟ ವ್ಯಕ್ತಿ.

 

ಇದನ್ನೂ ಓದಿ; ಗ್ರಾಮೀಣ ಕುಡಿಯುವ ನೀರು ಇಲಾಖೆಯಲ್ಲಿ ಉದ್ಯೋಗಾವಕಾಶ; ಅರ್ಜಿ ಸಲ್ಲಿಸುವುದು ಹೇಗೆ?,ಕೊನೆಯ ದಿನಾಂಕ ಯಾವಾಗ?

ಮನೆಯಲ್ಲಿ ಬಟ್ಟೆಯನ್ನು ಬಿಸಿಲಿಗೆ ಒಣ ಹಾಕುವ ಸಂದರ್ಭದಲ್ಲಿ ಬಲಗಾಲಿಗೆ ಹಾವು ಕಚ್ಚಿದ್ದು, ಆ ಸಂದರ್ಭದಲ್ಲಿ ತೋಟದ ಕೆಲಸಕ್ಕೆ ತೆರಳಿದ್ದ ನನಗೆ ಕರೆ ಮಾಡಿ ತಿಳಿಸಿದರು, ತಕ್ಷಣವೇ ಪ್ರಾಥಮಿಕ ಚಿಕಿತ್ಸೆಗಾಗಿ ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ರವಾನಿಸುವಾಗ ಸಾವನ್ನಪ್ಪಿದ್ದಾರೆ ಎಂದು ಅವರ ಪತ್ನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

 

ಇದನ್ನೂ ಓದಿ; ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆ; ಈ ಯೋಜನೆಯ ಹಣ ಬಂದಿಲ್ವಾ!; ಕೂಡಲೇ ಈ ದಾಖಲಾತಿಗಳನ್ನು ಇವರಿಗೆ ಸಲ್ಲಿಸಿ

ಇನ್ನು ಮೃತಪಟ್ಟ ಹರೀಶ್ ಅಲಿಯಾಸ್ ಅಣ್ಣಿ ಮಾಗುಂಡಿ ಪಂಚಾಯಿತಿಯ ತಾತ್ಕಾಲಿಕ ಕಸ ವಿಲೇವಾರಿ ವಾಹನದ ಚಾಲಕನಾಗಿದ್ದರು ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಾಗುಂಡಿಯಲ್ಲಿ ಘಟನೆ ನಡೆದಿದೆ.

ಕೊಪ್ಪ: ಆಡಳಿತ ವೈದ್ಯಾಧಿಕಾರಿ ಹುದ್ದೆಯಿಂದ ಡಾಕ್ಟರ್ ಗಾನವಿ ತೆರವಿಗೆ ಸೂಚನೆ

ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ನೀಡಿರುವ ದೂರಿನ್ವಯ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತ ಅಧಿಕಾರವನ್ನು ಹಿರಿಯ ತಜ್ಞರಿಗೆ ವಹಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

 

ಇಲ್ಲಿನ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ: ಗಾನವಿ ಅವರು ನಾಲ್ಕು ವರ್ಷಗಳಿಂದ ಉತ್ತಮ ಸೇವೆ ಸಲ್ಲಿಸಿದ್ದಾರೆ, ಇದೀಗ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಹಿರಿಯ ತಜ್ಞರಾದ ವೆಂಕಟೇಶ್ ದೂರಿನ್ವಯ 25/10/2023 ರಂದು ವಿಚಾರಣೆ ನಡೆಸಿ ಅರ್ಜಿದಾರರ ಮನವಿಯ ಮೇಲೆ 07 ದಿನಗಳ ಒಳಗೆ ಕ್ರಮವಹಿಸಿ ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದ್ದರು.

ಸಾಮಾನ್ಯವಾಗಿ ಸರ್ಕಾರ ಸುತ್ತೋಲೆಯ ಪ್ರಕಾರ ಆಸ್ಪತ್ರೆಯ ಆಡಳಿತಾಧಿಕಾರಿ ಹುದ್ದೆಯನ್ನು ಎಮ್.ಬಿ.ಬಿ.ಎಸ್ ವೈದ್ಯರಿಗೆ ನೀಡಬೇಕಾಗಿತ್ತು. ಆದರೆ ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗಾನವಿ ಅವರು ದಂತ ವೈದ್ಯರಾಗಿದ್ದ ಅವರಿಗೆ (ಎಮ್.ಡಿ.ಎಸ್)(Master of Dental Surgery) ಕೂಡ ಆಡಳಿತಾಧಿಕಾರಿ ಹುದ್ದೆ ನೀಡಲಾಗಿತ್ತು. ಆಸ್ಪತ್ರೆಯ ಹಿರಿಯ ತಜ್ಞರಿಗೆ ಈ ಆಡಳಿತಾಧಿಕಾರಿ ಹುದ್ದೆ ನೀಡುವಂತದ್ದು, ಆದರೆ ಪ್ರಭಾವಿ ನಾಯಕರುಗಳಿಂದ ಡಾ. ಗಾನವಿ ಅವರಿಗೆ ಆಡಳಿತಾಧಿಕಾರಿ ಹುದ್ದೆ ನೀಡಿದ್ದಾರೆ ಎಂಬ ಆರೋಪಗಳು ಕೂಡ ಕೇಳಿ ಬಂದಿದ್ದವು.

ಕಳೆದ ಆರು ತಿಂಗಳಿನಿಂದ ಆಸ್ಪತ್ರೆಯ ಇಬ್ಬರು ಹಿರಿಯ ವೈದ್ಯರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ನನಗೆ ಅಧಿಕಾರದ ಆಸೆ ಇಲ್ಲ. ಜನರ ಸೇವೆ ಮಾಡಬೇಕು ಎಂದು ಇಲ್ಲಿಗೆ ಬಂದಿದ್ದೇನೆ. ಡಾ. ವೆಂಕಟೇಶ್ ಈ ನಡುವೆ ಜಾತಿ ವಿಚಾರವನ್ನು ಮುಂದಿಟ್ಟುಕೊಂಡು, ನನಗೆ ಕೆಲಸ ಮಾಡಲು ಬಿಡುತ್ತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಜಾತಿ ತಂದಿರುವುದು ನನಗೆ ಬೇಸರ ಉಂಟುಮಾಡಿದೆ. ಹೀಗಾಗಿ ನನ್ನ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ಈಗಾಗಲೇ ತಿಳಿಸಿದ್ದೇನೆ. – ಡಾ. ಗಾನವಿ, ಆಡಳಿತ ವೈದ್ಯಾಧಿಕಾರಿ

ಡಾ: ಗಾನವಿ ಆಡಳಿತಾಧಿಕಾರಿಯಾಗಿ ಮುಂದುವರೆಸುವಂತೆ ಬ್ರಾಹ್ಮಣ ಮಹಾಸಭಾ ವತಿಯಿಂದ ಒತ್ತಾಯ:
ಕೊಪ್ಪ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರು ಮತ್ತು ಜಿಲ್ಲಾ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರು ಗುರುವಾರ ಕೊಪ್ಪದ ಗಾಯತ್ರಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಇತ್ತೀಚೆಗೆ ಬ್ರಾಹ್ಮಣರ ಮೇಲೆ ಆಗುತ್ತಿರುವ ದೌರ್ಜನ್ಯ ಮತ್ತು ಕಿರುಕುಳವನ್ನು  ಖಂಡಿಸಿದರು.

ಕೊಪ್ಪ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಯಾಗಿ ಕಳೆದ ನಾಲ್ಕು ವರ್ಷಗಳಿಂದ  ಸೇವೆ ಸಲ್ಲಿದ್ದಾರೆ. ಡಾ. ಗಾನವಿ ಅವರಿಗೆ ಇತ್ತೀಚಿನ ದಿನಗಳಲ್ಲಿ ಅವರು ಬ್ರಾಹ್ಮಣ ಮಹಿಳೆ ಎಂಬ ಏಕೈಕ ಕಾರಣದಿಂದ ಅವರ ಮೇಲೆ ಇಲ್ಲಸಲ್ಲದ ಆರೋಪ ಹೊರಿಸಿ ಅವರಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತು ಅವರು ತಮ್ಮ ಹುದ್ದೆ ಹಸ್ತಾಂತರಕ್ಕೆ ಮುಂದಾಗಿದ್ದು, ಇಂತಹ ಉತ್ತಮ ಸೇವೆ ನೀಡುತ್ತಿರುವ, ಆಸ್ಪತ್ರೆಯ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ಇವರು ಈ ಹುದ್ದೆಯಲ್ಲಿ ಮುಂದುವರೆಯಲು ಸ್ಥಳೀಯ ಶಾಸಕರು ಮತ್ತು ಆಡಳಿತ ವರ್ಗ ಸಹಕಾರ ನೀಡಿ ಅವರ ಜೊತೆ ನಿಲ್ಲುವ ಅವಶ್ಯಕತೆ ಇದೆ ಎಂದು ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಉಪಾಧ್ಯಕ್ಷರಾದ ಡಾ. ಜಿ.ಎಸ್ ಮಹಾಬಲ ಅವರು ಮನವಿ ಮಾಡಿದರು.

ಇದನ್ನೂ ಓದಿ; ಇಂದಿನ ಮಾರುಕಟ್ಟೆಯಲ್ಲಿ ಕಾಫಿ ಹಾಗೂ ಕಾಳುಮೆಣಸಿನ ರೇಟ್ ಹೇಗಿದೆ- 01.11.2023

ಇವರ ಆಡಳಿತಾಧಿಕಾರಿಯಲ್ಲಿ ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ಗರಿ:

ವೈದ್ಯಕೀಯ ವೃತ್ತಿಯಲ್ಲಿ ನಿಸ್ವಾರ್ಥ ಸೇವೆಯ ಜೊತೆ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಯಾಗಿ ಡಾ. ಗಾನವಿ ಅವರು ತಾಲ್ಲೂಕಿನಾದ್ಯಂತ ಉತ್ತಮ ಹೆಸರು ಮಾಡಿದ್ದು ಕೊಳೆತು ನಾರುತ್ತಿದ್ದ ಆಸ್ಪತ್ರೆಯನ್ನು ಉತ್ತಮ ಸ್ಥಿತಿಗೆ ತಂದಿರುತ್ತಾರೆ ಮತ್ತು ಕೊರೊನಾ ಸಂಧರ್ಭದಲ್ಲಿ ಇವರು ಮಾಡಿದ ನಿರ್ವಹಣೆಯ ಬಗ್ಗೆ ರಾಜ್ಯ, ರಾಷ್ಟ್ರಮಟ್ಟದಲ್ಲಿ ಶ್ಲಾಘನೆ ದೊರತು ಅತ್ಯುತ್ತಮ ಆಡಳಿತ ವೈಧ್ಯಾಧಿಕಾರಿ ಪ್ರಶಸ್ತಿ ಮತ್ತು ಅತ್ಯುತ್ತಮ ಆಸ್ಪತ್ರೆ ಪ್ರಶಸ್ತಿ ಸಹ ಬಂದಿರುತ್ತದೆ. ಇಂತಹ ಅಧಿಕಾರಿಗಳನ್ನು ಉಳಿಸಿಕೊಳ್ಳಲು ಶಾಸಕರು ಮುಂದಾಗಬೇಕು ಮತ್ತು ಬ್ರಾಹ್ಮಣಮಹಿಳೆ ಎಂಬ ಕಾರಣದಿಂದ ಇವರಿಗೆ ತೊಂದರೆ ಆಗುವುದನ್ನು ತಾಲ್ಲೂಕು ಬ್ರಾಹ್ಮಣ ಮಹಾಸಭಾ ಸಹಿಸುವುದಿಲ್ಲ ಎಂದು ಹೇಳಿದರು.

ಖಾಂಡ್ಯ ದೇವಸ್ಥಾನದ ಅರ್ಚಕರ ಮೇಲಿನ ಮೊಕದ್ದಮೆ ಹಿಂಪಡೆಯಲು ಆಗ್ರಹ:
ಇಡೀ ರಾಜ್ಯದಲ್ಲಿ ಸುದ್ದಿ ಆಗಿರುವ ಹುಲಿ ಉಗುರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಂಡ್ಯ ದೇವಸ್ಥಾನದ ಬಡ ಅರ್ಚಕರನ್ನು ಏಕಾಏಕಿ ಬಂದಿಸಿರುವುದನ್ನು ತಾಲ್ಲೂಕು ಬ್ರಾಹ್ಮಣ ಮಹಾಸಭಾ ಉಗ್ರವಾಗಿ ಖಂಡಿಸುತ್ತದೆ ಮತ್ತು ಅವರ ಮೇಲೆ ಹಾಕಿರುವ ಮೊಕದ್ದಮೆಯನ್ನು ಈ ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಿಸುತ್ತದೆ ಎಂದರು. ಇಂತಹ ಪ್ರಕರಣಗಳಲ್ಲಿ ಮೊದಲಿಗೆ ತಿಳುವಳಿಕೆ ನೀಡಿ ನಂತರ ಕ್ರಮ ಕೈಗೊಳ್ಳಲು ನಮ್ಮ ಅಭ್ಯಂತರವಿಲ್ಲ. ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳ ಮಕ್ಕಳಿಗೆ ಒಂದು ಕಾನೂನು, ಬಡ ಅರ್ಚಕರಿಗೆ ಬ್ರಾಹ್ಮಣರಿಗೆ ಒಂದು ಕಾನೂನು ಇದು ಯಾವ ನ್ಯಾಯ ಇದರ ಬಗ್ಗೆ ಶೀಘ್ರದಲ್ಲಿ ಬ್ರಾಹ್ಮಣ ಮಹಾಸಭೆಯ ವತಿಯಿಂದ ಉಗ್ರ ಪ್ರತಿಭಟನೆ ಮತ್ತು ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಇನ್ನು ಪತ್ರಿಕಾ ಗೋಷ್ಠಿಯಲ್ಲಿ ಕೊಪ್ಪ ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಕೆಸಕುಡಿಗೆ ಕೃಷ್ಣ ಮೂರ್ತಿ, ಕಾರ್ಯದರ್ಶಿಗಳಾದ ಕೆ .ಎಸ್ ಸುಬ್ರಹ್ಮಣ್ಯ, ನಿರ್ದೇಶಕರಾದ ಶ್ರೀ ದಿವಾಕರ್, ಮುಖಂಡರಾದ ಪ್ರಕಾಶ್ ಸಿ.ಹೆಚ್. ಶಶಿಕುಮಾರ್, ಪುರೋಹಿತ ಪರಿಷತ್ತಿನ ಶ್ರೀ ಕಾರ್ತೀಕೆಯ ಭಟ್ ಮತ್ತು ವಿಪ್ರನೌಕರ ಸಂಘದ ಅಧ್ಯಕ್ಷರಾದ ಶ್ರೀ ಶೃಂಗೇಶ್ವರ ಮತ್ತು ಗಣಪತಿ ಭಟ್ ಗುರುಪುರ ಅವರು ಉಪಸ್ಥಿತರಿದ್ದರು.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.