ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಐಜಿಯಾಗಿ ಚಿಕ್ಕಮಗಳೂರು ಮೂಲದ ಐಪಿಎಸ್ ಅಧಿಕಾರಿ ಮಲ್ಲಿಕಾರ್ಜುನ ಪ್ರಸನ್ನ ನೇಮಕವಾಗಿದ್ದಾರೆ.
ಇದನ್ನೂ ಓದಿ: IBPS PO ನಲ್ಲಿ 5208 ಹುದ್ದೆಗಳ ನೇಮಕ; ಆಕರ್ಷಕ ಸಂಬಳ

ಗೃಹ ಸಚಿವಾಲಯ (MHA) ಶುಕ್ರವಾರ (ಜೂನ್ 27, 2025) ಹೊರಡಿಸಿದ ಆದೇಶದ ಪ್ರಕಾರ, ಸಕ್ಷಮ ಪ್ರಾಧಿಕಾರವು ಮಲ್ಲಿಕಾರ್ಜುನ ಪ್ರಸನ್ನ ಅವರನ್ನು ಡೆಪ್ಯುಟೇಶನ್ ಆಧಾರದ ಮೇಲೆ ಹುದ್ದೆಗೆ ನೇಮಕ ಮಾಡಲು ಅನುಮೋದನೆ ನೀಡಿದೆ.
ಮುಂಬೈ ದಾಳಿ ಸಂದರ್ಭ ಡಿಸಿಪಿ ಆಗಿ ಉತ್ತಮ ಕಾರ್ಯನಿರ್ವಹಣೆ ಮಾಡಿದ್ದ ಮಲ್ಲಿಕಾರ್ಜುನ ಪ್ರಸನ್ನ ಅವರು, ಮುಂಬೈ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅಲ್ಲದೆ ಮಹಾರಾಷ್ಟ್ರ ಸಿಂಗಂ ಎಂದೇ ಖ್ಯಾತಿಯನ್ನ ಹೊಂದಿದ್ದು, ಇದೀಗ ಎನ್ಐಎ ಯ ಇನ್ಸ್ಪೆಕ್ಟರ್ ಜನರಲ್ ಆಗಿ ನೇಮಕವಾಗಿದ್ದಾರೆ.
ಇದನ್ನೂ ಓದಿ: ಕೃಷಿ ಭೂಮಿಯಲ್ಲಿ ಮರ ಕಡಿಯಲು ನಿಯಮ ಸರಳೀಕರಣ












