ಆಲ್ದೂರು; (ನ್ಯೂಸ್ ಮಲ್ನಾಡ್ ವರದಿ) ವಿದೇಶಿ ಗುಣಮಟ್ಟದ ದಾಳಿಂಬೆ ಬೆಳೆಯಲು ನಿವೃತ್ತ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿದ್ದ ಐಪಿಎಸ್ ಅಧಿಕಾರಿ ಎಸ್. ಎನ್ ಸಿದ್ದರಾಮಯ್ಯ ಸಲಹೆ ನೀಡಿದರು.
ಇದನ್ನೂ ಓದಿ; ರಾಜ್ಯದ SC-ST ಪಂಗಡದವರಿಗೆ ಗುಡ್ ನ್ಯೂಸ್; ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ದಕ್ಷಿಣ ಭಾಗದ ದಾಳಿಂಬೆ ಬೆಳೆಗಾರರ ರೈತೋತ್ಪಾದಕ ಸಂಸ್ಥೆ (ಎಸ್‌ಆರ್‌ಪಿಜಿ) ಹಾಗೂ ಮಹಾರಾಷ್ಟ್ರದ ಸೊಲ್ಲಾಪುರದ ರಾಷ್ಟ್ರೀಯ ದಾಳಿಂಬೆ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ತಾಲೂಕಿನ ರೋಸೆಟ್ಟ ರೆಸಾರ್ಟ್‌ನಲ್ಲಿ ಹಮ್ಮಿಕೊಂಡಿದ್ದ ದಾಳಿಂಬೆ ತಾಂತ್ರಿಕ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ರೈತರೂ ವಿದೇಶಿ ಗುಣಮಟ್ಟದ ದಾಳಿಂಬೆ ಬೆಳೆಯಲು ಮುಂದಾದರೆ ಹೆಚ್ಚು ಹೆಚ್ಚು ಆದಾಯ ಗಳಿಸಬಹುದು ಎಂದರು.


ರಫ್ತು ಮಾಡುವ ಗುಣಮಟ್ಟದ ದಾಳಿಂಬೆ ಬೆಳೆಯಲು ಅಂತಾರಾಷ್ಟ್ರೀಯ ಗುಣಮಟ್ಟದ ಔಷಧಿಗಳನ್ನೇ ರೈತರೂ ಸಿಂಪಡಿಸಬೇಕು. ಆಗ ಮಾತ್ರ ಫಸಲಿಗೂ ಎಲ್ಲೆಡೆ ಬೇಡಿಕೆ ಹೆಚ್ಚಾಗಿ ರಫ್ತು ಪ್ರಮಾಣವನ್ನೂ ಹೆಚ್ಚಾಗುತ್ತದೆ ಜೊತೆಗೆ ಆದಾಯವೂ ದ್ವಿಗುಣ ಆಗಲಿದೆ. ಅನೇಕ ಸಂದರ್ಭಗಳಲ್ಲಿ ದಾಳಿಂಬೆ ಬೆಲೆಯಲ್ಲಿ ಏರಿಳಿಕೆ ಆಗುತ್ತಿದ್ದು, ಇದರಿಂದ ರೈತರಿಗಾಗುವ ನಷ್ಟ ತಪ್ಪಿಸಲು ಸಹಕಾರ ಸಂಘದಿಂದಲೇ ಹಣ್ಣು ಖರೀದಿಸಿ ರಫ್ತು ಮಾಡುವಂತೆ ಹೇಳಿದರು.
ಇದನ್ನೂ ಓದಿ; ಕೃಷಿ ಯಂತ್ರಗಳ ಖರೀದಿಗೆ ಭಾರೀ ಸಬ್ಸಿಡಿ; ಹೀಗೆ ಅರ್ಜಿ ಸಲ್ಲಿಸಿ
ಕಳೆದ ಮೂರು ವರ್ಷಗಳ ಹಿಂದೆ ಸ್ಥಾಪಿಸಿದ ನಮ್ಮ ಸಂಸ್ಥೆ ಅತ್ಯಲ್ಪ ಅವಧಿಯಲ್ಲಿ ಒಂದೂವರೆ ಕೋಟಿ ಲಾಭಗಳಿಸಿದೆ. 18 ಲಕ್ಷ ತೆರಿಗೆ ಪಾವತಿ ಮಾಡಿದೆ. ಈ ವರ್ಷದಿಂದ ಸಂಸ್ಥೆಗೆ ಬಂದ ಲಾಭಾಂಶವನ್ನು ಷೇರುದಾರರಿಗೆ ಶೇ.25 ರಷ್ಟು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಲಾಭಾಂಶ ಹಂಚಿಕೆ ನಿರ್ಧಾರ ನಮ್ಮದೇ ಮೊದಲು, ಬೇರೆ ಯಾವ ಸಹಕಾರ ಸಂಘಗಳೂ ಹೀಗೆ ಮಾಡುತ್ತಿಲ್ಲ ಎಂದು ಎಸ್‌ಆರ್‌ಪಿಜಿ ಅಧ್ಯಕ್ಷ ಯೋಗೀಶ್ವರ ಹೆಚ್. ಆರ್ ಹೇಳಿದರು.

ದಾಳಿಂಬೆ ಬೆಳೆಗಾರರು ಆರ್ಥಿಕವಾಗಿ ಸದೃಢರಾಗುವುದರ ಜೊತೆಗೆ ಇದು ವಾಣಿಜ್ಯ ಬೆಳೆಯಾದ್ದರಿಂದ ತಾಂತ್ರಿಕ ತಿಳಿವಳಿಕೆಯನ್ನೂ ಹೊಂದುವುದು ಅನಿವಾರ್ಯ. ಹೀಗಿದ್ದಾಗ ಸರ್ವಾಂಗೀಣ ಅಭಿವೃದ್ಧಿ ಹೊಂದಬಹುದು ಎಂದರು.
ಇದನ್ನೂ ಓದಿ; ರಾಜ್ಯದ SSLC ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ; ಈ ವರ್ಷದ ಪ್ರಶ್ನೆಪತ್ರಿಕೆ ಕುರಿತು ಇಲ್ಲಿದೆ ನೋಡಿ ಡಿಟೈಲ್ಸ್
ಯೂರೋಪ್, ಅಮೆರಿಕ ಗುಣಮಟ್ಟದ ಹಣ್ಣು ಬೆಳೆಯುವಂತಾಗಬೇಕು:
ಯೂರೋಪ್, ಅಮೆರಿಕ ಗುಣಮಟ್ಟದ ಹಣ್ಣನ್ನು ನಮ್ಮಲ್ಲೂ ಬೆಳೆಯುವಂತಾಗಬೇಕು ಎಂಬ ಕಾರಣಕ್ಕೆ, ಅದಕ್ಕೆ ಪೂರಕವಾದ ಕಾರ್ಯಕ್ರಮ, ಕಾರ್ಯಾಗಾರಗಳನ್ನು ನಮ್ಮ ಸಂಘದಿಂದ ಆಯೋಜನೆ ಮಾಡಲಾಗುತ್ತಿದೆ. ರೈತರೂ ಜ್ಞಾನಸಂಪಾದನೆ ಮಾಡಿಕೊಳ್ಳಬೇಕು. ಆ ಮೂಲಕ ಗುಣಮಟ್ಟದ ಹಣ್ಣು ಉತ್ಪಾದಿಸಬೇಕು ಎಂಬುದು ನಮ್ಮ ಸದಾಶಯ ಎಂದರು. ಇದರಿಂದ ಹೆಚ್ಚು ಲಾಭವನ್ನೂ ಪಡೆಯಬಹುದು. ಮುಂದಿನ ದಿನಗಳಲ್ಲಿ ಗುಣಮಟ್ಟದ ಔಷಧ ಜೊತೆಗೆ ಅಧಿಕ ರಸಗೊಬ್ಬರ ಬಳಕೆ ಮಾಡದೆ, ಒಳ್ಳೆಯ ಹಣ್ಣುಗಳನ್ನು ಬೆಳೆಯುವಂತೆ ಸಲಹೆ ನೀಡಿದರು.

ನಿರ್ದೇಶ ಮಂಜುನಾಥ್ ಎಸ್.ಎಂ. ಪ್ರಾಸ್ತಾವಿಕ ನುಡಿಗಳನ್ನಾಡಿ, ರೈತರಿಗೆ ತಾಂತ್ರಿಕ ಮಾಹಿತಿ ನೀಡುವುದು ಕಾರ್ಯಾಗಾರದ ಉದ್ದೇಶ. ಮುಂದಿನ ದಿನಗಳಲ್ಲಿ ಅರಸೀಕೆರೆ ತಾಲೂಕು ಬಾಣಾವರದಲ್ಲಿರುವ ನಮ್ಮ ಎಸ್‌ಆರ್‌ಪಿಜಿ ಸಂಘಕ್ಕೆ ಸ್ವಂತ ಕಟ್ಟಡ ಹೊಂದುವ ಗುರಿ ಹೊಂದಲಾಗಿದೆ ಎಂದರು.
ಇದನ್ನೂ ಓದಿ; ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್; ಬೆಳೆ ಹಾನಿ ಪರಿಹಾರ ಜಮಾ! ಜಿಲ್ಲಾಧಿಕಾರಿಗಳಿಗೆ ಸೂಚನೆ
ನಿರ್ದೇಶಕರಾದ ದಿನೇಶ್ ಟಿ. ಎಸ್, ನಂದಕುಮಾರ್ ಟಿ. ಸಿ, ಯತೀಶ್ ಜಿ. ಎಸ್,ಗೋವರ್ಧನ್, ಶ್ಯಾಮಲಾ ಬಿ. ಕೆ, ಸಚಿನ್ ಬಿ. ಸಿ ಮತ್ತು ಸಚ್ಚಿದಾನಂದ ಬಿ. ಸಿ ಇದ್ದರು.














