ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಅರಣ್ಯ ಭೂಮಿಯನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಿದ ಆರೋಪದ ಮೇಲೆ ಕಡೂರು ತಹಶಿಲ್ದಾರ್ ನನ್ನು ಅಮಾನತು ಪಡಿಸಲಾಗಿದೆ.
ಇದನ್ನೂ ಓದಿ: KSRTC ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ

ಅರಣ್ಯ ಇಲಾಖೆ ಲಕ್ಕವಳ್ಳಿ ವಯದಲ್ಲಿನ ರಂಗೇನಹಳ್ಳಿ ಸರ್ವೆ ನಂಬರ್ 4ರಲ್ಲಿ ಒಟ್ಟು 12 ಎಕರೆ 33 ಗುಂಟೆ ಜಾಗವನ್ನು ಐವರು ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿತ್ತು. ಈ ಪೈಕಿ 8 ಎಕರೆ 3 ಗುಂಟೆಯನ್ನು 2023ರ ಆಗಸ್ಟ್ ನಲ್ಲಿ ಮೂವರಿಗೆ ಮಂಜೂರು ಮಾಡಲಾಗಿದೆ. ಆ ಸಂದರ್ಭದಲ್ಲಿ ಸಿ.ಎಸ್.ಪೂರ್ಣಿಮಾ ತಹಶೀಲ್ದಾರ್ ಆಗಿದ್ದರು.
ಇದಕ್ಕೂ ಮುನ್ನ 2017 ಮತ್ತು 2018ರಲ್ಲಿ 4 ಎಕರೆ 30 ಗುಂಟೆ ಇದೇ ಸರ್ವೆ ನಂಬರ್ ನಲ್ಲಿನ ಅರಣ್ಯ ಜಾಗವನ್ನು ಇಬ್ಬರು ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲಾಗಿದೆ. ಆಗ ಎನ್.ಟಿ.ಧರ್ಮೋಜಿರಾವ್ ಎಂಬುವರು ತಹಶೀಲ್ದಾರ್ ಆಗಿದ್ದರು.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ಅರಣ್ಯ ಜಾಗವನ್ನು ಅರಣೇತರ ಉದ್ದೇಶಕ್ಕೆ ಬಳಸಬೇಕಿದ್ದರೆ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಆದರೆ ಅದ್ಯಾವುದನ್ನೂ ಮಾಡದೆ ಕರ್ತವ್ಯ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಪೂರ್ಣಿಮಾ ರವರನ್ನು ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಮುಕ್ತಾರ್ ಪಾಷ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ: ವರ್ಷದ ಮೊದಲ ದಿನವೇ ಭಾರೀ ಕುಸಿತ ಕಂಡ ಸಿಲಿಂಡರ್ ದರ; ಎಷ್ಟಾಗಿದೆ ಗೊತ್ತಾ?
ಧರ್ಮೋಜಿರಾವ್ ಈಗ ನಿವೃತ್ತಿಯಾಗಿದ್ದಾರೆ. ಸದ್ಯ ಕಡೂರು ತಹಶೀಲ್ದಾರ್ ಆಗಿರುವ ಪೂರ್ಣಿಮಾ ಅವರು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇರುವುದರಿಂದ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಕಂದಾಯ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಇದನ್ನೂ ಓದಿ: ಜಿಲ್ಲಾ ಕೋರ್ಟ್ ನಲ್ಲಿ ಜಾಬ್ ಆಫರ್; ಪಿಯುಸಿ ವಿದ್ಯಾರ್ಹತೆ, 21,400 ರಿಂದ ಸಂಬಳ












