ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ಸುಪ್ರೀಂ ಕೋರ್ಟ್ ನಲ್ಲಿ ಶಾಸಕ ರಾಜೇಗೌಡ ಅವರಿಗೆ ಮತ್ತೊಮ್ಮೆ ಹಿನ್ನಡೆಯುಂಟಾಗಿದೆ.
ಇದನ್ನೂ ಓದಿ: KSRTC ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ

ಹೌದು, ಮಾಜಿ ಸಚಿವ ಜೀವರಾಜ್ ಸಲ್ಲಿಸಿದ್ದ ಚುನಾವಣೆ ಅರ್ಜಿಯನ್ನು ಅಮಾನ್ಯ ಮಾಡಬೇಕೆಂದು ಶಾಸಕ ರಾಜೇಗೌಡ ಸಲ್ಲಿಸಿದ್ದ ಮನವಿಯನ್ನ ವಜಾ ಮಾಡಿದ್ದು, ಈ ಮೂಲಕ ಸುಪ್ರೀಂ ಕೋರ್ಟ್ ನಲ್ಲಿ ಎರಡನೆ ಬಾರಿಗೆ ಹಿನ್ನಡೆಯುಂಟಾಗಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಮಾಜಿ ಸಚಿವ ಜೀವರಾಜ್ ಸಲ್ಲಿಸಿದ್ದ ಚುನಾವಣೆ ಅರ್ಜಿಯನ್ನು ಅಮಾನ್ಯ ಮಾಡಬೇಕೆಂದು ಶಾಸಕ ರಾಜೇಗೌಡ ಅವರು ಮೊದಲ ಬಾರಿ ಕೋರಿದ್ದ ಅರ್ಜಿ ಈ ಹಿಂದೆ ಹೈ ಕೋರ್ಟ್ ವಜಾಗೊಳಿಸಿತ್ತು. ನಂತರ ಅದನ್ನು ಪ್ರಶ್ನಿಸಿ ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸೆಪ್ಟೆಂಬರ್ 27, 2024 ರಂದು ಸುಪ್ರೀಂ ಕೋರ್ಟ್ ಕೂಡ ಮೊದಲ ಬಾರಿ ಶಾಸಕ ರಾಜೇಗೌಡ ಅವರ ಅರ್ಜಿಯನ್ನ ವಜಾ ಮಾಡಿತ್ತು.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ನಂತರ ರಾಜೇಗೌಡ ರವರು ಕರ್ನಾಟಕ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ Striking of Pleading ಅರ್ಜಿಯನ್ನ 29/11/2024 ರಂದು ಉಚ್ಚನ್ಯಾಯಲಯವು ಎರಡನೆ ಬಾರಿಗೆ ವಜಾ ಮಾಡಿತ್ತು. ನಂತರ ಪುನಃ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಇಂದು ಸುಪ್ರೀಂ ಕೋರ್ಟ್ ಎರಡನೆ ಬಾರಿಗೆ ರಾಜೇಗೌಡ ಅವರ ಮನವಿಯನ್ನ ವಜಾ ಮಾಡಿ ಜೀವರಾಜ್ ಸಲ್ಲಿಸಿದ್ದ ಚುನಾವಣೆ ಅರ್ಜಿ ತನಿಖೆಯಾಗಬೇಕು ಎಂದು ತೀರ್ಪು ನೀಡಿದೆ.
ಇದನ್ನೂ ಓದಿ: ವರ್ಷದ ಮೊದಲ ದಿನವೇ ಭಾರೀ ಕುಸಿತ ಕಂಡ ಸಿಲಿಂಡರ್ ದರ; ಎಷ್ಟಾಗಿದೆ ಗೊತ್ತಾ?












