ಶಿವಮೊಗ್ಗ: (ನ್ಯೂಸ್ ಮಲ್ನಾಡ್ ವರದಿ) ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೆಸರು ದುರ್ಬಳಕೆ ಮಾಡಿಕೊಂಡು ಹೊಸ ವರ್ಷಕ್ಕೆ ವಿಷ ಪದಾರ್ಥ ಬೆರೆಸಿರುವ ಸಿಹಿ ತಿಂಡಿಯನ್ನು ಕೊರಿಯರ್ ಮೂಲಕ ರವಾನಿಸಲಾಗಿದೆ ಎಂದು ದೂರು ಕೊಡಲಾಗಿದೆ.
ಇದನ್ನೂ ಓದಿ: KSRTC ಬಸ್ ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿಸುದ್ದಿ; ಏನದು ಗೊತ್ತಾ? ಇಲ್ಲಿದೆ ನೋಡಿ

ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿಗೆ ಕೊರಿಯರ್ ಮೂಲಕ ಸಿಹಿ ತಿಂಡಿ ರವಾನೆ:
ಹೊಸ ವರ್ಷದ ಶುಭ ಕೋರುವ ಪತ್ರದೊಂದಿಗೆ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ನಾಗರಾಜ್ ಅವರಿಗೆ ಕೊರಿಯರ್ ಮೂಲಕ ಸಿಹಿ ತಿಂಡಿ ತಲುಪಿತ್ತು. ನಾಗರಾಜ್ ಅವರು ಸ್ವೀಟ್ ಬಾಕ್ಸ್ ತೆರದು ನೋಡಿದಾಗ ಅದರಲ್ಲಿ ಮೋತಿಚೂರ್ ಲಾಡು ಇತ್ತು. ಅದನ್ನು ತಿಂದಾಗ ಸ್ವಲ್ಪ ಕಹಿಯಾಗಿರುವುದು ತಿಳಿದು ಬಂದಿದೆ.
ಇದರಿಂದ ನಾಗರಾಜ್ ಅವರು ಧನಂಜಯ ಸರ್ಜಿ ಅವರಿಗೆ ನೇರವಾಗಿ ಫೋನ್ ಮಾಡಿ ಹೊಸ ವರ್ಷದ ಶುಭಾಶಯ ಕೋರಿ ಸ್ವೀಟ್ ಬಾಕ್ಸ್ ಕಳುಹಿಸಿದ್ದಕ್ಕೆ ಧನ್ಯವಾದ ತಿಳಿಸಿ, ನೀವು ಕಳುಹಿಸಿರುವ ಸ್ವೀಟ್ಸ್ ಸ್ವಲ್ಪ ಕಹಿಯಾಗಿರುವುದಾಗಿ ಹೇಳಿದ್ದಾರೆ. ಇದಕ್ಕೆ ಸರ್ಜಿ ಅವರು ನಾನು ಯಾವುದೇ ಸ್ವೀಟ್ ಬಾಕ್ಸ್ ಕಳುಹಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಸಿಹಿ ಸುದ್ದಿ; ಮಿಸ್ ಮಾಡ್ದೆ ಈ ಸುದ್ದಿ ಓದಿ
ನಂತರ ಇದೇ ರೀತಿ ತಮ್ಮ ಹೆಸರಿನಲ್ಲಿ ಇನ್ನಿಬ್ಬರಿಗೆ ಸ್ವೀಟ್ ಬಾಕ್ಸ್ ಗಳು ತಲುಪಿರುವ ಬಗ್ಗೆ ತಿಳಿದ ಧನಂಜಯ ಸರ್ಜಿ ಅವರು ಈ ಸಂಬಂಧ ತಮ್ಮ ಆಪ್ತ ಸಹಾಯಕನ ಮೂಲಕ ಕೋಟೆ ಪೊಲೀಸ್ ಠಾಣೆಗೆ ದೂರು ಕೊಡಿಸಿದ್ದಾರೆ.
ಇದನ್ನೂ ಓದಿ: ವರ್ಷದ ಮೊದಲ ದಿನವೇ ಭಾರೀ ಕುಸಿತ ಕಂಡ ಸಿಲಿಂಡರ್ ದರ; ಎಷ್ಟಾಗಿದೆ ಗೊತ್ತಾ?
ದೂರು ನೀಡಿರುವ ಬಗ್ಗೆ ಮಾಹಿತಿ ನೀಡಿದ ಎಂಎಲ್ಸಿ:
ಎಫ್ ಐಆರ್ ಮಾಡಿದ್ದೇವೆ ಲ್ಯಾಬ್ ಗೆ ಟೆಸ್ಟ್ ಗೆ ಕಳುಹಿಸಿದ್ದೇವೆ. ಭದ್ರಾವತಿಯಿಂದ ಕೊರಿಯರ್ ಹೋಗಿದೆ. ಸಮಾಜಮುಖಿ ಹೆಸರಿನಲ್ಲಿ ಇಂತಹ ಕೆಲಸ ಮಾಡಿದ್ದು ಬೇಸರ ಆಗಿದೆ. ಅವರು ಸ್ವೀಟ್ ತಿಂದಿಲ್ಲ ಏನು ಆಗಿಲ್ಲ. ಮಕ್ಕಳಿಗೆ ಏನಾದರೂ ಹಂಚಿ ಈ ರೀತಿ ಆಗಿದ್ದರೆ ಏನು ಗತಿ. ಈ ಬಗ್ಗೆ ಎಸ್ ಪಿ ಅವರಿಗೆ ದೂರು ಕೊಟ್ಟಿದ್ದೇನೆ ಈ ಬಗ್ಗೆ ತನಿಖೆ ನಡೆಸುತ್ತೇವೆಂದು ಎಂಎಲ್ ಸಿ ಡಾ.ಧನಂಜಯ ಸರ್ಜಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಜಿಲ್ಲಾ ಕೋರ್ಟ್ ನಲ್ಲಿ ಜಾಬ್ ಆಫರ್; ಪಿಯುಸಿ ವಿದ್ಯಾರ್ಹತೆ, 21,400 ರಿಂದ ಸಂಬಳ












