ಮುಂದುವರಿದ ಗೋ ಬ್ಯಾಕ್‌ ಅಭಿಯಾನ: ಶೋಭಾ ವಿರುದ್ಧ 1 ಲಕ್ಷ ನೋಟಾ ವೋಟ್‌ ಎಚ್ಚರಿಕೆ

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಹಾಲಿ ಸಂಸದೆ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಶೋಭಕ್ಕ ಅಭಿಯಾನ ಮುಂದುವರೆದಿದೆ.

 

ಇದನ್ನೂ ಓದಿ; ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್ ನ್ಯೂಸ್; 24 ಸಾವಿರ ರೂ.ಗಳ ಸಬ್ಸಿಡಿಗೆ ಅನುಮೋದನೆ!

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೆ ಸ್ಪರ್ಧಿಸಿದರೆ ಒಂದು ಲಕ್ಷ ನೋಟಾ ವೋಟ್ ಹಾಕಲಾಗುವುದು ಎಂದು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ; ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್; ತರಬೇತಿಗೆ ಅರ್ಜಿ ಆಹ್ವಾನ

ಕಳೆದ ಬಾರಿಗಿಂತ ಹೆಚ್ಚು ಮತಗಳಲ್ಲಿ ಗೆಲ್ಲುವುದು ಖಚಿತ ಎಂದು ಯಡಿಯೂರಪ್ಪ ಅವರು ಚಿಕ್ಕಮಗಳೂರಿನಲ್ಲಿ ಹೇಳಿ ಹೋದ ನಂತರ ಒಂದು ಲಕ್ಷ ನೋಟಾ ವೋಟ್ ಹಾಕಲಾಗುವುದು ಎಂದು ಹೇಳುವ ಮೂಲಕ ಅವರಿಗೆ ಒಂದು ಲಕ್ಷ ಮತಗಳು ಕಡಿಮೆಯಾಗಲಿದೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಮೋದಿ ಹೆಸರಿನಲ್ಲಿ ಗೆದ್ದು ಮೋದಿಯವರಿಗೆ ಕಳಂಕ ಆಗಿರುವ ಶೋಭಕ್ಕನ ವಿರುದ್ಧ ಸ್ವಚ್ಛ ಭಾರತ ಮಿಷನ್ ಪ್ರಾರಂಭ ಮಾಡಿರುವ ಸನಾತನಗಳು ನಾವು ಎಂದು ಸನಾತನ ಹಿಂದುತ್ವ ಫೇಸ್ ಬುಕ್ ಪೇಜ್ ನಲ್ಲಿ ಶೋಭಾ ಕರಂದ್ಲಾಜೆ ವಿರೋಧಿಗಳು ಹೇಳಿಕೊಂಡಿದ್ದಾರೆ. ಶೋಭಾ ಕರಂದ್ಲಾಜೆ ಮಾತ್ರ ಅಲ್ಲ, ಅವರೊಂದಿಗೆ ಗುರುತಿಸಿಕೊಂಡಿರುವ ಪಕ್ಷದ ಕಾರ್ಯಕರ್ತರ ವಿರುದ್ಧವೂ ಹರಿ ಹಾಯ್ದಿದ್ದಾರೆ.

ಶೃಂಗೇರಿ: ವಿಧಾನಸೌಧದಲ್ಲಿ ಬಜರಂಗದಳದ ಬಗ್ಗೆ ಸುಳ್ಳು ಹೇಳಿಕೆ: ವಿಶ್ವ ಹಿಂದೂ ಪರಿಷದ್ ಬಜರಂಗದಳ ಆರೋಪ

ಶೃಂಗೇರಿ: (ನ್ಯೂಸ್ ಮಲ್ನಾಡ್ ವರದಿ) ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿರುವ ವಿಚಾರವನ್ನು ವಿರೋಧಿಸಿ ಚರ್ಚೆ ನಡೆಯುತ್ತಿದ್ದ ಸಂದರ್ಭ ಶೃಂಗೇರಿಯ ಘಟನೆಯನ್ನು ಮಧ್ಯ ಎಳೆದು ವಿಚಾರವನ್ನು ಬೇರೆಡೆ ಸೆಳೆಯಲು ಪ್ರಯತ್ನ ಮಾಡಿದ್ದಾರೆ ಎಂದು ಶೃಂಗೇರಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಆರೋಪಿಸಿದೆ.

ಇದನ್ನೂ ಓದಿ; ಆಧಾರ್ ಕಾರ್ಡ್ ಅಪ್ಡೇಟ್‌ ಗೆ ಡೆಡ್‌ಲೈನ್‌!; ಮಾರ್ಚ್ 14 ವರೆಗೆ ಮಾತ್ರ ಅವಕಾಶ; ಅಪ್ಡೇಟ್ ಮಾಡಲು ಈ ದಾಖಲೆ ಕಡ್ಡಾಯ

ಈ ಹಿಂದೆ ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆಗೆ ಹಸಿರು ಬಟ್ಟೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿನ ವರಿಷ್ಠಾಧಿಕಾರಿ ಪ್ರಕರಣವನ್ನು ಪರಿಶೀಲಿಸಿ ಆರೋಪಿ ಮಿಲಿಂದ್ ಮದ್ಯದ ಅಮಲಿನಲ್ಲಿ ಈ ದುಷ್ಕೃತ್ಯ ಎಸಗಿದ್ದಾಗಿ ಹಾಗೂ ಆತನಿಗೆ ಯಾವುದೇ ಸಂಘಟನೆಗೆ ಸೇರಿದವನಲ್ಲ ಎಂಬುದನ್ನು ಮಾಧ್ಯಮಗಳ ಮುಂದೆ ಸ್ಪಷ್ಟಪಡಿಸಿದ್ದರು. ಆದರೆ ಈ ವಿಚಾರವಾಗಿ ಬಜರಂಗದಳದ ಹೆಸರು ಅನವಶ್ಯಕ ತರಲಾಗುತ್ತಿದೆ ಎಂದು ಬಜರಂಗದಳ ಆರೋಪಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಬಜರಂಗದಳ, ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ಪ್ರತಿ ಪಕ್ಷಗಳು ವಿರೋಧಿಸುವಾಗ ಅವರೊಡನೆ ಜೊತೆಗೂಡಿ ವಿರೋಧಿಸಬೇಕಿದ್ದ ಶೃಂಗೇರಿ ಶಾಸಕರು ಅದಕ್ಕೆ ತದ್ವಿರುದ್ಧ ಎಂಬಂತೆ ಬಜರಂಗದಳದ ಬಗ್ಗೆ ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ ಎಂದು ಆರೋಪಿಸಿದೆ.

ಇದನ್ನೂ ಓದಿ; ಇನ್ಸೂರೆನ್ಸ್ ಪ್ರೀಮಿಯಂ ಪಾವತಿಸಿದ ಕ್ಷಣದಿಂದಲೇ ವಿಮೆ ಜಾರಿಯಾಗುತ್ತದೆ: ಹೈಕೋರ್ಟ್

ಈ ಹಿಂದೆ ಪಾಕಿಸ್ತಾನ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ನನ್ನು ಸಜ್ಜನ ವ್ಯಕ್ತಿ ಎಂದು ಹೊಗಳಿದ್ರು, ಇದೀಗ ಸದನದಲ್ಲಿ ಸುಳ್ಳು ಹೇಳಲು ಪ್ರಯತ್ನ ಪಟ್ಟು ಬಜರಂಗದಳದ ತಲೆಗೆ ಕಟ್ಟಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ.

ಬಜರಂಗದಳದ ಬಗ್ಗೆ ಸುಳ್ಳು ಆರೋಪ ಮಾಡಿರುವುದು ಖಂಡನೀಯ ಮತ್ತು ಇದನ್ನು ಮುಂದುವರೆಸಿದರೆ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಎಚ್ಚರಿಕೆ ನೀಡಿದೆ.

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.

ಕಾಫಿನಾಡು ಚಿಕ್ಕಮಗಳೂರು ಹುಟ್ಟೂರು. ಬರವಣಿಗೆ, ಪ್ರವಾಸ ಆಸಕ್ತ ವಿಷಯಗಳು. ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು 5 ವರ್ಷಗಳ ಅನುಭವ.