ಕೊಪ್ಪ: (ನ್ಯೂಸ್ ಮಲ್ನಾಡ್ ವರದಿ) ಮಲೆನಾಡಿಗರನ್ನು ಕಂಗೆಡಿಸಿರುವ ಮಂಗನ ಕಾಯಿಲೆಗೆ (ಕೆ.ಎಫ್.ಡಿ) ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ನುಗ್ಗಿ ಗ್ರಾ.ಪಂ ವ್ಯಾಪ್ತಿಯ ದೇವಗನ್ ಎಸ್ಟೇಟ್ ನ ಕಾರ್ಮಿಕ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. ಕೊಟ್ರಮ್ಮ (43) ಕೆ.ಎಫ್.ಡಿ.ಗೆ ಬಲಿಯಾದ ಕಾರ್ಮಿಕ ಮಹಿಳೆ.

ತೀವ್ರ ಜ್ವರ, ಸುಸ್ತು, ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರ್ಮಿಕ ಮಹಿಳೆಯ ರಕ್ತದ ಮಾದರಿ ಸಂಗ್ರಹಿಸಿದ್ದಾಗ ಸೋಂಕು ದೃಡವಾಗಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಇನ್ನು ಎಸ್ಟೇಟಿಗೆ ಸೌದೆ ತರಲು ಹೋದಾಗ ಸೋಂಕು ಸೋಂಕಿರೋ ಸಾಧ್ಯತೆ ಇದ್ದು, ಕೊಪ್ಪ ಹಾಗೂ ಎನ್.ಆರ್ ಪುರ ಭಾಗದಲ್ಲಿ ಇದೀಗ 6 ಮಂದಿಗೆ ಮಂಗನ ಕಾಯಿಲೆ ಪತ್ತೆಯಾಗಿದೆ.
ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಪೋಸ್ಟರ್ ಅಭಿಯಾನ; ಯುವಕರ ವಿರುದ್ಧ FIR
ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆಗೆ ಎರಡು ಜಿಲ್ಲೆಯಲ್ಲೂ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಗೋ ಬ್ಯಾಕ್, ಶೋಭಾ ಹಾಠಾವೋ ಎಂದು ಸಿ,ಟಿ.ರವಿ ಬೆಂಬಲಿಗರು ಅಭಿಯಾನ ನಡೆಸಿದ್ದಾರೆ. ಸದ್ಯ ಗೋ ಬ್ಯಾಕ್ ಶೋಭಾ ಕರಂದ್ಲಾಜೆ ಅಭಿಯಾನ ವಿಚಾರ ಸಂಬಂಧ ಪೋಸ್ಟರ್ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ FIR ದಾಖಲಾಗಿದೆ.
ಸಂಸದೆ ಮತ್ತು ಕೇಂದ್ರ ಸಚಿವ ಆದ ನಂತರ ಶೋಭಾ ಕರಂದ್ಲಾಜೆ ಕ್ಷೇತ್ರವನ್ನು ಮತ್ತು ಅಭಿವೃದ್ಧಿ ಮಾಡೋದನ್ನು ಮರೆತಿದ್ದಾರೆ ಎಂಬ ಕೂಗು ಕಳೆದ ಎರಡ್ಮೂರು ವರ್ಷಗಳಿಂದ ಕೇಳಿ ಬರುತ್ತಿದ್ದು, ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಶೋಭಾಗೆ ವಿರೋಧದ ಬಿಸಿ ಜೋರಾಗಿಯೇ ತಟ್ಟುತ್ತಿದೆ. ಕಳೆದ ಕೆಲ ದಿನಗಳಿಂದ ಮೀನುಗಾರರು ಶೋಭಾ ಕರಂದ್ಲಾಜೆಯನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆ ನಂತರ ಉಡುಪಿ ಬಿಜೆಪಿಯಲ್ಲೂ ಶೋಭಾ ವಿರುದ್ಧ ಅಸಮಾಧಾನ ಬಹಿರಂಗವಾಗಿಯೇ ವ್ಯಕ್ತವಾಗಿತ್ತು.
ಇದನ್ನೂ ಓದಿ; ರೇಷನ್ ಕಾರ್ಡ್ ವಿತರಣೆ ಬಗ್ಗೆ ಬಿಗ್ ಅಪ್ಲೇಟ್ ಕೊಟ್ಟ ಸರ್ಕಾರ; ಇಲ್ಲಿದೆ ಡೀಟೈಲ್ಸ್
ಉಡುಪಿ ನಂತರ ಚಿಕ್ಕಮಗಳೂರಿನಲ್ಲೂ ಶೋಭಾ ಕರಂದ್ಲಾಜೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಷೇತ್ರದ ಕಡೆ ಮುಖ ಮಾಡಿರುವ ಶೋಭಾ ಕರಂದ್ಲಾಜೆ ವಿರುದ್ಧ ‘ಗೋ ಬ್ಯಾಕ್ ಶೋಭಕ್ಕಾ’ ಅಭಿಯಾನ ಕೇಳಿ ಬಂದಿದೆ. ಜನವರಿ 1 ರಿಂದಲೇ ಗೋ ಬ್ಯಾಕ್ ಅಭಿಯಾನ ಆರಂಭವಾಗಿದ್ದು, ಶೋಭಾ ಕರಂದ್ಲಾಜೆ ವಿರುದ್ಧ ಶೋಭಾಕ್ಕ ಎಲ್ಲಿದ್ದಿರಾ?, ಕಾಣೆಯಾದ ಶೋಭಾಕ್ಕ ಎಂದು ಪೋಸ್ಟರ್ ಅಭಿಯಾನ ಆರಂಭವಾಗಿತ್ತು.
ಇದೀಗ ತರೀಕೆರೆಯಿಂದ ಚಿಕ್ಕಮಗಳೂರು ನಗರದವರೆಗೂ ಶೋಭಾ ಕರಂದ್ಲಾಜೆ ವಿರುದ್ಧ ರಾತ್ರೋರಾತ್ರಿ ಪೋಸ್ಟರ್ ಅಂಟಿಸಿದ್ದ ನಾಲ್ವರು ಯುವಕರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ತರೀಕೆರೆ ಮೂಲದ ಸಂಜು, ಸಂಜಯ್, ವಿಷ್ಣು, ಚಂದ್ರಶೇಖರ್ ವಿರುದ್ಧ FIR ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ನಗರ ಸಭೆ ಪೌರ ಕಾರ್ಮಿಕ ನೀಡಿದ ದೂರಿನ ಮೇರೆಗೆ ದಾಖಲಾಗಿದ್ದ FIR ಅನ್ವಯ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ; ಸ್ವಂತ ಆಸ್ತಿ ಇದ್ದವರು ತಕ್ಷಣ ಈ ರೀತಿ ಮಾಡಿ; ಇಲ್ಲವಾದರೆ ಸಿಗಲ್ಲ ಈ ಸರ್ಕಾರಿ ಸೌಲಭ್ಯ; ಇಲ್ಲಿದೆ ಮುಖ್ಯ ಮಾಹಿತಿ
ಇನ್ನು ಪೊಲೀಸರು ವಿಚಾರಣೆ ವೇಳೆ ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ರು ಎಂದು ನಾಲ್ವರು ಯುವಕರು ಹೇಳಿದ್ದು, ಇದೀಗ ಹಣ ನೀಡಿ ಪೋಸ್ಟರ್ ಅಂಟಿಸಲು ಹೇಳಿದ್ದವರ ವಿರುದ್ಧವೂ ಬಸವನಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












