ಚಿಕ್ಕಮಗಳೂರು: 2 ದಿನದ ಮಗುವನ್ನ ರಸ್ತೆ ಪಕ್ಕದ ತೋಟದಲ್ಲಿ ಎಸೆದು ತಾಯಿ ಎಸ್ಕೇಪ್

ಚಿಕ್ಕಮಗಳೂರು: (ನ್ಯೂಸ್ ಮಲ್ನಾಡ್ ವರದಿ) ಎರಡು ದಿನದ ಮಗುವನ್ನು ಹೆತ್ತ ತಾಯಿಯೇ ಕಾಫಿ ತೋಟದಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಅಲ್ಲಂಪುರ ಗ್ರಾಮದಲ್ಲಿ ನಡೆದಿದೆ.


ಇದನ್ನೂ ಓದಿ:  ಬೋರ್ವೆಲ್ ಕೊರೆಯುವ ನಿಯಮದಲ್ಲಿ ಮಹತ್ವ ಬದಲಾವಣೆ; ಏನಿದೆ ನೋಡಿ…


ಚಂದ್ರಮ್ಮ ಎಂಬುವರ ಮನೆಯ ಪಕ್ಕದಲ್ಲಿರುವ ಕಾಫಿ ತೋಟದಲ್ಲಿ ಹುಟ್ಟಿದ ಎರಡೇ ದಿನಕ್ಕೆ ಗಂಡು ಮಗುವನ್ನ ಹೆತ್ತ ತಾಯಿಯೇ ಬಿಟ್ಟು ಹೋಗಿದ್ದು, ಗುರುವಾರ ಬೆಳಗ್ಗಿನ ಜಾವ 6 ಗಂಟೆಯ ಸಮಯದಲ್ಲಿ ಮಗು ಅಳುವ ಸದ್ದು ಕೇಳಿಸಿದೆ. ಗಂಟೆಗಳು ಕಳೆದರೂ ಕೂಡ ಮಗುವಿನ ಅಳು ನಿಲ್ಲದಿದ್ದಾಗ ತೋಟದ ಒಂದು ಮೂಲೆಯಲ್ಲಿ ಅಳುತ್ತಿರುವ ಮಗು ಕಂಡು ಬಂದಿದೆ.


ಇದನ್ನೂ ಓದಿ: ಇ-ಖಾತೆ ಕುರಿತು ಬಿಗ್‌ ಅಪ್ಡೇಟ್; ಏನದು ಗೊತ್ತಾ? ಇಲ್ಲಿದೆ ನೋಡಿ


ಮಗುವನ್ನು ಕರೆತಂದು ತಮ್ಮ ಮನೆಯಲ್ಲಿ ಹಾಲು ಕುಡಿಸಿ ಆರೈಕೆ ಮಾಡಿದ್ದಾರೆ. ನಂತರ ಗ್ರಾಮದ ಆಯಾಗೆ ವಿಷಯ ತಿಳಿಸಿ ಸ್ಥಳಕ್ಕೆ ವೈದ್ಯರು, ನರ್ಸ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮಗುವನ್ನು ತಮ್ಮ ಜೊತೆ ಕರೆದುಕೊಂಡು ಹೋಗಿದ್ದಾರೆ.

ಹಸುಗೂಸನ್ನ ತೋಟದಲ್ಲಿ ಎಸೆದು ಹೋದ ತಾಯಿ ವಿರುದ್ಧ ಸ್ಥಳಿಯರ ಕಿಡಿಕಾರಿದ್ದಾರೆ.


ಇದನ್ನೂ ಓದಿ: 17,000 ಸ್ಕಾಲರ್‌ ಶಿಪ್‌ ನೇರ ವಿದ್ಯಾರ್ಥಿಗಳ ಖಾತೆಗೆ; ವಿದ್ಯಾರ್ಹತೆ, ಅರ್ಜಿ ಸಲ್ಲಿಸುವ ಲಿಂಕ್‌ ಇಲ್ಲಿದೆ


 

Public Desclimer

This media platform, News Malnad Digital Media, operates with strict ethical standards. If any person, staff member, or individual uses our media name for personal matters, threats, influence, or any activity not related to official work, we request the public and viewers to report it immediately to us at newsmalnadmedia@gmail.com or to the nearest Police Station.

News Malnad is not responsible for any misuse of our media identity by unauthorized persons.